ಚನ್ನಪಟ್ಟಣ : ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಗೆ ಸೋಲಿನ ಭಯ ಕಾಡುತ್ತಿದೆಯಾ ಎಂಬ ಪ್ರಶ್ನೆ ಉದ್ಭವವಾಗಿದೆ. ಇಂದು ಚನ್ನಪಟ್ಟಣದಲ್ಲಿ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಚುನಾವಣೆಯನ್ನು ಸಮರ್ಥವಾಗಿ ಎದುರಿಸಿದ್ದೇನೆ.
ಆದರೆ ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರ ಪ್ರಾಬಲ್ಯದ್ದು, ದೇವೇಗೌಡರ ಪ್ರಭಾವ ಹೆಚ್ಚಾಗಿ ಬೀರಿರುವ ಸಾಧ್ಯತೆ ಇದೆ ಎನ್ನುವ ಮೂಲಕ ಫಲಿತಾಂಶಕ್ಕೂ ಮುಂಚೆಯೇ ಸೋಲೊಪ್ಪೊಕೊಂಡ್ರಾ ಎಂಬ ಚರ್ಚೆ ಪ್ರಾರಂಭವಾಗಿದೆ.
ಇನ್ನು ಜಮೀರ್ ಅಹ್ಮದ್ ಹೇಳಿಕೆಯಿಂದ ನನಗೆ ಡ್ಯಾಮೇಜ್ ಆಗಿದ್ದಂತೂ ಸತ್ಯ ಎಂದಿರುವ ಯೋಗೇಶ್ವರ್, ದೇವೇಗೌಡರು ಹಾಗೂ ಕುಮಾರಸ್ವಾಮಿಯವರನ್ನು ಬೈದರೆ ಸಹಿಸದ ಒಂದು ಸಮುದಾಯವೇ ಚನ್ನಪಟ್ಟಣ ಭಾಗದಲ್ಲಿದೆ.
ಹೀಗಾಗಿ ಜಮೀರ್ ಅಹ್ಮದ್ ನೀಡಿದ ಹೇಳಿಕೆಯಿಂದ ನನಗೆ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ ಎಂದು ಯೋಗೇಶ್ವರ್ ಆತಂಕ ವ್ಯಕ್ತಪಡಿಸಿದ್ದಾರೆ
ಚನ್ನಪಟ್ಟಣದಲ್ಲಿ ಚುನಾವಣಾ ಪ್ರಚಾರದ ವೇಳೆ ಜಮೀರ್ ಅಹಮದ್ ಕುಮಾರಸ್ವಾಮಿಯವರನ್ನು ಕಾಲಾ.. ಕರಿಯಣ್ಣ ಎಂದೆಲ್ಲಾ ಸಂಬೋಧಿಸಿ ಪ್ರಚಾರ ಮಾಡಿದ್ದರು.
ಈ ಹೇಳಿಕೆಯೇ ಸಿಪಿ ಯೋಗೇಶ್ವರ್ ಗೆ ಮುಳುವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು ಸ್ವತಃ ಸಿಪಿ ಯೋಗೇಶ್ವರ್ ಆತಂಕ ವ್ಯಕ್ತಪಡಿಸಿದ್ದಾರೆ ಈ ಹಿನ್ನೆಲೆಯಲ್ಲಿ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಗೆ ಸೋಲಾಗುತ್ತಾ ಎಂಬ ಚರ್ಚೆ ಜೋರಾಗೇ ಶುರುವಾಗಿದೆ