Ad imageAd image

ಹುಕ್ಕೇರಿ ಶ್ರೀಗಳ ಆಶೀರ್ವಾದ ಸಿಕ್ಕಿದ್ದು ನನ್ನ ಸೌಭಾಗ್ಯ

Bharath Vaibhav
ಹುಕ್ಕೇರಿ ಶ್ರೀಗಳ ಆಶೀರ್ವಾದ ಸಿಕ್ಕಿದ್ದು ನನ್ನ ಸೌಭಾಗ್ಯ
WhatsApp Group Join Now
Telegram Group Join Now

ಹುಕ್ಕೇರಿ :-ಹಿರೇಮಠ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಆಶೀರ್ವಾದ ಸಿಕ್ಕಿದ್ದು ನನ್ನ ಸೌಭಾಗ್ಯ ಎಂದು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಬಂದ ಅಂಕಿತಾ ಕೊಣ್ಣುರ ಹೇಳಿದರು.

ಹುಕ್ಕೇರಿ ಹಿರೇಮಠದ ದರ್ಬಾರ ಹಾಲನಲ್ಲಿ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳ ಆಶೀರ್ವಾದ ಪಡೆದು ಮಾತನಾಡಿದ ಅಂಕಿತಾ ಕೊಣ್ಣುರ ನಾನು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಬರಲು ನನ್ನ ದೊಡ್ಡಪ್ಪ ಪಿ ಜಿ ಕೊಣ್ಣುರ ಹಾಗೂ ನನ್ನ ತಂದೆ ತಾಯಿ ಮತ್ತು ಶಿಕ್ಷಕರು ಕಾರಣ ಹಿಂದೆ ಗುರು ಮುಂದೆ ಗುರಿ ಇರಬೇಕು ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಯಾವಾಗಲೂ ನನಗೆ ಆಶೀರ್ವಾದ ಮಾಡುತ್ತಾ ಬಂದಿದ್ದಾರೆ ಇವತ್ತು ಗುರುಗಳ ಆಶೀರ್ವಾದ ಸಿಕ್ಕಿದೆ ಮುಂದೆ ಉನ್ನತ ಅಧಿಕಾರಿಯಾಗುವೆ ಎಂದರು.

ಅಂಕಿತಾ ಕೊಣ್ಣುರ ಇವಳಿಗೆ ಆಶೀರ್ವಾದ ಮಾಡಿ ಮಾತನಾಡಿದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪ್ರತಿ ಬಾರಿ ಬೇರೆ ಭಾಗದ ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ ಬರುತ್ತಿದ್ದರು ಇ ಬಾರಿ ನಮ್ಮ ಭಾಗದ ಯುವತಿ ಅಂಕಿತಾ ಕೊಣ್ಣುರ ಪ್ರಥಮ ಬಂದಿದ್ದು ನಮ್ಮ ಭಾಗದ ಹೆಮ್ಮೆ ಎಂದರು.

ಈ ಸಂದರ್ಭದಲ್ಲಿ ಕೊಣ್ಣುರ ಮರಡಿಮಠದ ಶ್ರೀ ಮ,ಘ,ಚ,ಡಾ॥ ಪವಾಡೇಶ್ವರ ಮಹಾಸ್ವಾಮಿಗಳು , ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ್, ಪಿ ಜಿ ಕೊಣ್ಣುರ, ಶಿವಾನಂದ ಜಿರಲಿ ,ಎಸ ಬಿ ಜಿನರಾಳಿ ಸುಭಾಷ್ ನಾಯಿಕ. ಚನ್ನಪ್ಪಾ ಗಜಬರ, ಆನಂದ ಪಟ್ಟಣಶೆಟ್ಟಿ, ವಿರೇಶ ಗಜಬರ, ಮಹಾಲಿಂಗ ಹಿರೇಮಠ ಸೇರಿದಂತೆ ಶ್ರೀಮಠ ಭಕ್ತರು ಉಪಸ್ಥಿತರಿದ್ದರು.

 
ವರದಿ:-  ಶಿವಾಜಿ ಎನ್ ಬಾಲೇಶಗೋಳ

WhatsApp Group Join Now
Telegram Group Join Now
Share This Article
error: Content is protected !!