Ad imageAd image

40ಕ್ಕೂ ಹೆಚ್ಚು ವಿವಿಧ ಪೀಠಗಳ ಜಗದ್ಗುರುಗಳ ಸೇವೆ ಮಾಡುವ ಭಾಗ್ಯ ಲಭಿಸಿದ್ದು ನನ್ನ ಪುಣ್ಯ : ಲಗ್ಗೆರೆ ನಾರಾಯಣ ಸ್ವಾಮಿ

Bharath Vaibhav
40ಕ್ಕೂ ಹೆಚ್ಚು ವಿವಿಧ ಪೀಠಗಳ ಜಗದ್ಗುರುಗಳ ಸೇವೆ ಮಾಡುವ ಭಾಗ್ಯ ಲಭಿಸಿದ್ದು ನನ್ನ ಪುಣ್ಯ : ಲಗ್ಗೆರೆ ನಾರಾಯಣ ಸ್ವಾಮಿ
WhatsApp Group Join Now
Telegram Group Join Now

ಬೆಂಗಳೂರು: ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ॥ ಶಾಂತವೀರ ಮಹಾ ಸ್ವಾಮೀಜಿಗಳ ೪೫ನೇ ಜನ್ಮದಿನೋತ್ಸವ ಮತ್ತು ೨೪ನೇ ಪಟ್ಟಾಭಿಷೇಕ ಮಹೋತ್ಸವದಲ್ಲಿ ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಭಾವಿ ನಾಯಕ ಲಗ್ಗೆರೆ ನಾರಾಯಣ ಸ್ವಾಮಿ ಪಾಲ್ಗೊಂಡಿದ್ದು ನನ್ನ ಭಾಗ್ಯ ಎಂದರು. ರಾಜ್ಯದ ವಿವಿಧ ಪೀಠಗಳಿಂದ ಆಗಮಿಸಿದ್ದ ಅನೇಕ ಜಗದ್ಗುರುಗಳನ್ನು ಭೇಟಿ ಮಾಡಿ ಅವರ ಆಶೀರ್ವಾದ ಪಡೆಯುವ ಅಪೂರ್ವ ಅವಕಾಶ ನನಗೆ ಲಭಿಸಿತು.

ಕಾಗಿನೆಲೆ ಮಹಾ ಸಂಸ್ಥಾನದ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದ ಮಹಾಸ್ವಾಮೀಜಿಗಳು, ಶ್ರೀ ವಾಲ್ಮೀಕಿ ಗುರುಪೀಠದ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾ ಸ್ವಾಮೀಜಿಗಳು, ಸಿದ್ದರಾಮೇಶ್ವರ ಮಹಾ ಸಂಸ್ಥಾನದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮೀಜಿಗಳು, ಮಾದರ ಚನ್ನಯ್ಯ ಗುರುಪೀಠದ ಜಗದ್ಗುರು ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಮಹಾಸ್ವಾಮೀಜಿಗಳು, ಭಗೀರಥ ಪೀಠದ ಜಗದ್ಗುರು ಶ್ರೀ ಪುರುಷೋತ್ತಮಾನಂದ ಪುರಿ ಮಹಾಸ್ವಾಮೀಜಿಗಳು, ಶ್ರೀ ಯಾದವ ಮಹಾ ಸಂಸ್ಥಾನ ಮಠದ ಶ್ರೀ ಯಾದವನಂದ ಸ್ವಾಮೀಜಿಗಳು, ಶ್ರೀ ನಾರಾಯಣ ಗುರು (ಈಡಿಗ) ಪೀಠದ ಪರಮಪೂಜ್ಯ ಶ್ರೀ ರೇಣುಕಾನಂದ ಮಹಾಸ್ವಾಮೀಜಿಗಳು, ಶ್ರೀ ಮಾಚಿದೇವ ಮಹಾಸಂಸ್ಥಾನದ ಶ್ರೀ ಬಸವ ಮಾಚಿದೇವ ಮಹಾಸ್ವಾಮೀಜಿಗಳು ಸೇರಿದಂತೆ ಹೀಗೆ 40ಕ್ಕೂ ಹೆಚ್ಚು ವಿವಿಧ ಪೀಠಗಳ ಜಗದ್ಗುರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಈ ಒಂದು ಕಾರ್ಯಕ್ರಮ ಇತಿಹಾಸ ಉಳ್ಳುವ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದು ಪೀಠಾಧೀಶರ ಕೃಪೆಯಿಂದ ಆಶಿರ್ವಾದ ಪಡೆದಿದ್ದು ನನ್ನ ಭಾಗ್ಯ ಎಂದು ಲಗ್ಗೆರೆ ನಾರಾಯಣ ಸ್ವಾಮಿ ಅವರು ಬಿ.ವಿ ನ್ಯೂಸ್- 5 ಪ್ರತಿನಿಧಿ ಅಯ್ಯಣ್ಣ ಮಾಸ್ಟರ್ ಬೆಂಗಳೂರು ಜೊತೆಗೆ ಮಾತನಾಡಿ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.

ವರದಿ: ಅಯ್ಯಣ್ಣ ಮಾಸ್ಟರ್ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!