Ad imageAd image

ಕುಂತಕೊಂಡು ಕೆಲಸ ಮಾಡುವ ರಿಮೋಟ್‌ ಇದ್ದಂಗೆ ನಾನು : ಶಾಸಕ ಎನ್ ವೈ ಗೋಪಾಲಕೃಷ್ಣ

Bharath Vaibhav
ಕುಂತಕೊಂಡು ಕೆಲಸ ಮಾಡುವ ರಿಮೋಟ್‌ ಇದ್ದಂಗೆ ನಾನು : ಶಾಸಕ ಎನ್ ವೈ ಗೋಪಾಲಕೃಷ್ಣ
WhatsApp Group Join Now
Telegram Group Join Now

ತಳಕು : ಇಡೀ ಜಗತ್ತನೇ ಸುತ್ತಿದಿನಿ ಅಧಿಕಾರಿಗಳು ಕ್ಷೇತ್ರದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಾರೆ ಎಂದು ಶಾಸಕ ಎನ್‌ ವೈ ಗೋಪಾಲಕೃಷ್ಣ ಹೇಳಿದರು, ಮಂಗಳವಾರ ತಳಕು ಹೋಬಳಿಯ ಬೇಡರೆಡ್ಡಿಹಳ್ಳಿಯಿಂದ ಆಂಧ್ರ ಗಡಿ ರಸ್ತೆ ಮತ್ತು ಎನ್ ಹೆಚ್ ಫೋರ್ 150 ಎ. ಬಂಜಿಗೆರೆ ಮಾರ್ಗ ಬೇಡರೆಡ್ಡಿಹಳ್ಳಿ ಗ್ರಾಮದವರಿಗೆ 8 ಕೋಟಿ ಅನುದಾನದ ಭೂಮಿ ಪೂಜೆ ನೆರೆವರಿಸಿ ಕ್ಷೇತ್ರದಲ್ಲಿ ಅಧಿಕಾರಿಗಳು ಶಾಸಕರ ಮಾತು ಕೇಳಿತ್ತಿಲ್ಲ ಎಂಬ ಮಾಧ್ಯಮದವರ ಕೇಳಿದ ಪ್ರಶ್ನೆಗೆ ಶಾಸಕರು ಕುಂತಕೊಂಡು ಕೆಲಸ ಮಾಡೋ ರಿಮೋಟ್‌ ಇದ್ದಂಗೆ ನಾನು ಟಿವಿ ಅಲ್ಲ ನಾನು ಪ್ರಪಂಚ ಸುತ್ತಿದ ವೀರ ನಾನು ಅಭಿವೃದ್ದಿ ಕೆಲಸ ಮಾಡಿದ್ದೇನೆ ಅಧಿಕಾರಿಗಳು ಕ್ಷೇತ್ರದಲ್ಲಿ ಪ್ರಮಾಣಿಕವಾಗಿ ಕೆಲಸ ಮಾಡುತ್ತಾರೆ ಎಂದು ಮಾಧ್ಯಮದವರಿಗೆ ತಿಳಿಸಿದರು.

ನಂತರ ಬೇಡರೆಡ್ಡಿಹಳ್ಳಿ ಗ್ರಾಮದ ರಸ್ತೆಯು ಶ್ರೀ ಕ್ಷೇತ್ರ ಗೌರಸಮುದ್ರ ಮತ್ತು ಕೊಂಡ್ಲಹಳ್ಳಿ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ ಕಳೆದ ವರ್ಷ ಸುರಿದ ಭಾರಿ ಮಳೆಗೆ ಹಲವು ರಸ್ತೆಗಳು ಹಾಳಾಗಿವೆ ಆದ್ದರಿಂದ ಸುಮಾರು 8 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ದಾಸರೆಡ್ಡಿ, ಸೂರನಾಯಕ, ಪ್ರಭುಸ್ವಾಮಿ, ಬಂಡೆ ಕಪಿಲೆ ಓಬಣ್ಣ, ತಳಕು ಮತ್ತು ನಾಯಕನಹಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಪಿ. ನಾಗೇಶ್ ರೆಡ್ಡಿ, ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಜಿ ತಿಪ್ಪೇಸ್ವಾಮಿ, ಕೆಡಿಪಿ ಸದಸ್ಯ ಎಸ್ ಬಿ ವಿಶ್ವನಾಥ್ ರೆಡ್ಡಿ, ಬೇಡರೆಡ್ಡಿಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಅರುಣ್ ಕುಮಾರ್, ಸದಸ್ಯರಾದ ವೇಣುಗೋಪಾಲ್ ರೆಡ್ಡಿ, ತಿಮ್ಮಯ್ಯ, ಯಲ್ಲಮ್ಮ, ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಸದಸ್ಯ ಜೆ.ಆರ್. ರವಿಕುಮಾರ್, ವಕೀಲ ಉಮಾಪತಿ ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಆರ್ ಶ್ರೀಕಾಂತ್, ವರವು ಕಾಟಯ್ಯ, ಐ.ಎನ್.ಟಿ.ಯು,ಸಿ. ಅಧ್ಯಕ್ಷ ಯಾದಲಗಟ್ಟೆ ಪಾಲಯ್ಯ, ಪರಿಶಿಷ್ಟ ಪಂಗಡ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಪಿ. ಹೇಮಣ್ಣಕಾಲುವೇಹಳ್ಳಿ, ಜೋಗಿಹಟ್ಟಿ ವೆಂಕಟೇಶ್,ಸಮಸ್ತ ಬೇಡರೆಡ್ಡಿಹಳ್ಳಿ ಗ್ರಾಮಸ್ತರು ಇದ್ದರು.

ವರದಿ : ಪಿಎಂ ಗಂಗಾಧರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!