ಹುಬ್ಬಳ್ಳಿ: ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ರಾಜೀನಾಮೆ ಪತ್ರದ ಫೋಟೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಹೀಗಾಗಿ ಸಭಾಪತಿ ಸ್ಥಾನಕ್ಕೆ ಹೊರಟ್ಟಿ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡಿತ್ತು.
ಆದ್ರೆ ಈಗ ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಸವರಾಜ ಹೊರಟ್ಟಿ, ರಾಜೀನಾಮೆ ನೀಡುವ ನನ್ನ ನಿರ್ಧಾರದಿಂದ ಸದ್ಯ ಹಿಂದೆ ಸರಿದಿದ್ದೇನೆ.
ನಾನು ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ಶಾಸಕರು, ಸಚಿವರು ನಮ್ಮೊಟ್ಟಿಗಿದ್ದು ಈ ಬಗ್ಗೆ ಮಾರ್ಚ್ 27 ರಂದು ಚರ್ಚೆ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ.
ಹೀಗೆ ಕೆಲ ದಿನಗಳ ಹಿಂದೆ ಸಭಾಪತಿ ಸ್ಥಾನಕ್ಕೆ ಹೊರಟ್ಟಿ ರಾಜೀನಾಮೆ ನೀಡಲಿದ್ದಾರೆ ಎಂಬ ರಾಜೀನಾಮೆ ಪತ್ರದ ಫೋಟೋ ವೈರಲ್ ಆಗಿತ್ತು. ಆದ್ರೆ ಅದ್ರಲ್ಲಿ ಅವರ ಸಹಿ ಇರಲಿಲ್ಲ. ಈ ವೇಳೆ ಇದನ್ನು ತಮ್ಮ ಪಿಎ ಬಹಿರಂಗ ಪಡಿಸಿದ್ದರು. ನನ್ನ ಸಹಿ ಇದ್ದ ರಾಜೀನಾಮೆ ಪತ್ರ ಡ್ರಾನಲ್ಲಿ ಇದೆ ಎಂದು ಹೇಳಿದ್ದರು.