ಮದುವೆಯಾದ ಮೂರೇ ದಿನಕ್ಕೆ ಸೈನಿಕರೊಬ್ಬರು ದೇಶ ಸೇವೆಗೆ ವಾಪಸ್ ತೆರಳಿದ ಘಟನೆ ಜಲಗಾಂವ್‌ನ ಪಚೋರಾದಲ್ಲಿ ನಡೆದಿದೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಬೆನ್ನಲ್ಲೇ ಭಾರತೀಯ ಸೇನೆ ರಜೆಯಲ್ಲಿರುವ ತನ್ನ ಎಲ್ಲಾ ಸಿಬ್ಬಂದಿಗಳನ್ನು ಕೂಡಲೇ ಕರ್ತವ್ಯಕ್ಕೆ ಹಾಜರಾಗಲು ಆದೇಶಿಸಿತ್ತು.
ಹೀಗಾಗಿ ರಜೆಯಲ್ಲಿರುವ ಎಲ್ಲಾ ಯೋಧರು ಊರಿಂದ ಹಿಂತಿರುಗುತ್ತಿದ್ದಾರೆ. ತಮ್ಮ ಕುಟುಂಬದ ಜೊತೆ ಸ್ವಲ್ಪ ಸಮಯ ಕಳೆಯಲು ಬಂದಿದ್ದ ಯೋಧರು ಈಗ ಅರ್ಧದಲ್ಲಿಯೇ ಹೋಗುತ್ತಿರುವುದು ಅವರ ವೈಯಕ್ತಿಕ ಜೀವನಕ್ಕಿಂತ ರಾಷ್ಟ್ರೀಯ ಕರ್ತವ್ಯವೇ ಮುಖ್ಯ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಜಲಗಾಂವ್‌ನ ಪಚೋರಾ ತಾಲ್ಲೂಕಿನ ಪುಂಗಾಂವ್‌ನ ಸೈನ್ಯದ ಸೈನಿಕ ಮನೋಜ್ ಜ್ಞಾನೇಶ್ವರ ಪಾಟೀಲ್, ಮೇ 5 (ಸೋಮವಾರ)ದಂದು ವಿವಾಹವಾಗಿದ್ದರು. ಮಂಗಳವಾರ ಯುದ್ಧದಂತಹ ಪರಿಸ್ಥಿತಿಯಲ್ಲಿ,
ತಕ್ಷಣ ಅವರ ಪ್ರಧಾನ ಕಚೇರಿಯಿಂದ ಕರ್ತವ್ಯಕ್ಕೆ ಬರಲು ಆದೇಶ ಬಂದ ನಂತರ ಯೋಧ ಮನೋಜ್ ಜ್ಞಾನೇಶ್ವರ ಪಾಟೀಲ್ ಮೇ 8 (ಗುರುವಾರ)ಕ್ಕೆ ಹಿಂತಿರುಗಿದ್ದಾರೆ.




