Ad imageAd image

ಬೆಳಗಾವಿ ಹೈಕಮಾಂಡ ನನಗೆ ಉತ್ತಮ ಅವಕಾಶ ನೀಡುವುದಾಗಿ ಭರವಸೆ ಇದೆ: ಜಿಲ್ಲಾ ಕಾಂಗ್ರಸ್ ಗ್ರಾಮೀಣ ಅಧ್ಯಕ್ಷ ವಿನಯ ನಾವಲಗಟ್ಟಿ

Bharath Vaibhav
ಬೆಳಗಾವಿ ಹೈಕಮಾಂಡ ನನಗೆ ಉತ್ತಮ ಅವಕಾಶ ನೀಡುವುದಾಗಿ ಭರವಸೆ ಇದೆ: ಜಿಲ್ಲಾ ಕಾಂಗ್ರಸ್ ಗ್ರಾಮೀಣ ಅಧ್ಯಕ್ಷ ವಿನಯ ನಾವಲಗಟ್ಟಿ
WhatsApp Group Join Now
Telegram Group Join Now

ಬೆಳಗಾವಿ : ನನ್ನ ಅಳಿಲು ಸೇವೆ ಕಂಡು ಹೈ ಕಮಾಂಡ ನನಗೆ ಭರವಸೆ ನಿಡಿದೆ. ವಿಧಾನ ಪರಿಷತ್ ಚುನಾವಣೆಗೆ ನನಗೆ ಅವಕಾಶ ನೀಡುವುದಾಗಿ ನಂಬಿದ್ದೆನೆ ಎಂದು ಜಿಲ್ಲಾ ಕಾಂಗ್ರಸ್ ಗ್ರಾಮೀಣ ಅಧ್ಯಕ್ಷ ವಿನಯ ನಾವಲಗಟ್ಟಿ ಹೇಳಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಇಂದು ವರದಿಗಾರರೊಂದಿಗೆ ಮಾತನಾಡಿ, ನಾನು ಕಳೆದ 30 ವರ್ಷಗಳಿಂದ ಪಕ್ಷದಲ್ಲಿ ನನ್ನ ಸೇವೆ ಪ್ರಾರಂಭವಾಗಿದೆ. ಮೊದಲಿಗೆ ವಿದ್ಯಾರ್ಥಿ ಕಾಂಗ್ರೆಸ್ ಕಾರ್ಯದರ್ಶೀಯಾಗಿ, ಯುವ ಕಾಂಗ್ರೆಸ್ ಕಾರ್ಯದರ್ಶೀಯಾಗಿ, ಸೇವಾದಳದ ಜಿಲ್ಲಾ ಅಧ್ಯಕ್ಷರಾಗಿ ಹೀಗೆ ಅನೇಕ ವಿಭಾಗಗಳಲ್ಲಿ ನನ್ನ ಸೇವೆ ಅಪಾರವಾಗಿದೆ. ಕಳೆದ 10 ವರ್ಷಗಳಿಂದ ಜಿಲ್ಲಾ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿದ್ದೆನೆ. ಪಕ್ಷದ ಸಂಘಟನೆಯಲ್ಲು ನನ್ನ ಪಾತ್ರ ಬಹುಮುಖ್ಯವಾಗಿದೆ. ಸುಮಾರು ಮೂರು ಭಾರಿ ವಿಧಾನ ಸಭಾ ಚುನಾವಣಾ ಟಿಕೇಟ್ ಆಕಾಂಕ್ಷಿಯಾಗಿದ್ದೆ. ಕಳೆದ ಎರಡು ಲೋಕಸಭಾ ಚುನಾವಣಾ ಟಿಕೇಟ್ ಆಕಾಂಕ್ಷಿಯಾಗಿದ್ದೆ. ಆದರೆ ನಮ್ಮ ನಾಯಕರು ಹೈಕಮಾಂಡ ತೀರ್ಮಾಣಕ್ಕೆ ತಲೆಬಾಗಬೆಕು, ಮುಂದಿನ ದಿನಾಮಾನಗಳಲ್ಲಿ ನನಗೆ ಒಳ್ಳೆ ಅವಕಾಶ ನಿಡುತ್ತೆವೆ ಎಂದು ಹೇಳಿದ್ದಾರೆ. ಪ್ರಸ್ತುತ ನಡೆದಿರುವ ವಿಧಾನ ಪರಿಷತ್ ಚುನಾವಣೆಗೆ ನನಗೂ ಅವಕಾಶ ನೀಡುತ್ತಾರೆ ಎಂಬ ಭರವಸೆ ಇದೆ. ನನ್ನ ಅಧ್ಯಕ್ಷತೆಯ ಅವಧಿಯಲ್ಲಿ ಪಕ್ಷಕ್ಕೆ ಹೆಚ್ಚಿನ ಸ್ಥಾನಗಳು ಲಭಿಸಿವೆ. ಒಬ್ಬ ಯಶಸ್ವಿ ಜಿಲ್ಲಾ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿರುವುದು ನನಗೆ ಸಂತಸವನ್ನು ತಂದಿದೆ. ಆದ್ದರಿಂದ ನನ್ನ 30 ವರ್ಷಗಳ ಸೇವೆಯನ್ನು ಪರಿಗಣಿಸಿ ನನಗೂ ಒಂದು ಉತ್ತಮ ಅವಕಾಶ ನೀಡುವಂತೆ ಹೈಕಮಾಂಡ ಮತ್ತು ಜಿಲ್ಲಾ ನಾಯಕರ ಬಳಿ ವಿನಂತಿಸಿದ್ದೆನೆ ಎಂದರು.
ವರದಿ : ಪ್ರತೀಕ ಚಿಟಗಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!