ಬೆಳಗಾವಿ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಮೆದುಳು ನಾಲಿಗೆ ಲಿಂಕ್ ಇಲ್ಲ, ಅದಕ್ಕಾಗಿಯೇ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಿದ್ದಾರೆಂಬ ಇತ್ತೀಚೆಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಹೇಳಿಕೆಗೆ ಯತ್ನಾಳ್ ಅವರು ಖಾರವಾಗಿ ತಿರುಗೇಟು ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಲಕ್ಷ್ಮಿ ಅವರ ಮೆದುಳು.. ಹೃದಯ ಯಾರ ಬಳಿ ಇದೆಯೋ ನನಗೆ ಗೊತ್ತಿಲ್ಲ. ಉಚ್ಚಾಟನೆಯನ್ನು ವಿರೋಧಿಸಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು ನನ್ನ ಪರವಾಗಿ ಮಾತನಾಡಿದರೆ ಅವರಿಗೆ ನೋವಾಗಿದೆ ಎಂದಿದ್ದಾರೆ. ಅದಕ್ಕೆ ನಾನೇನು ಲಕ್ಷ್ಮಿ ಅವರಿಗೆ ಅಮೃತಾಂಜನ್ ಇಲ್ಲವೇ ಝಂಡೂ ಬಾಮ್ ಕೊಡಲೇ ಎಂದು ಯತ್ನಾಳ್ ವ್ಯಂಗ್ಯವಾಡಿದ್ದಾರೆ.
ನನ್ನ ಬಗ್ಗೆ ಅವರು ಇನ್ನೇನಾದರೂ ಬಾಯಿ ಬಿಟ್ರೇ ಇನ್ನೂಂದು ಹೆಜ್ಜೆ ಮುಂದಕ್ಕೆ ಹೋಗಿ ಮಾತನಾಡುತ್ತೇನೆ. ಸ್ವಾಮೀಜಿಯವರು ಬೆಂಬಲಿಸುವ ಬದಲು ಇತಿಮಿತಿಯಲ್ಲಿರಲಿ ಎಂದು ಲಕ್ಷ್ಮಿ ಹೇಳಿದ್ದು ಸರಿಯಲ್ಲ.
ಗೋಕಾಕ್ ದಲ್ಲಿ ಮೀಸಲಾತಿ ಕೊಡದಿದ್ದರೆ ರಾಜೀನಾಮೆ ಕೊಡುತ್ತೇನೆ ಎಂದಿದ್ದರು. ಬೆಳಗಾವಿಯಲ್ಲಿ ಹೋರಾಟದಲ್ಲಿ ಲಿಂಗಾಯತರನ್ನ ಹೊಡೆಸಿದರು. ಲಾಠಿ ಚಾರ್ಜ್ ಮಾಡಿಸಿದರು. ಈಗ ನ್ಯಾಯಾಂಗ ತನಿಖೆ ಆಗುತ್ತಿದೆ. ಇವರು ನನ್ನ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಯತ್ನಾಳ್ ತಿವಿದಿದ್ದಾರೆ.