Ad imageAd image

ಈ ಚುನಾವಣೆ ಸಮೀಕ್ಷೆ ಬಗ್ಗೆ ನನಗೆ ವಿಶ್ವಾಸವಿಲ್ಲ : ಡಿ. ಕೆ ಶಿವಕುಮಾರ್

Bharath Vaibhav
ಈ ಚುನಾವಣೆ ಸಮೀಕ್ಷೆ ಬಗ್ಗೆ ನನಗೆ ವಿಶ್ವಾಸವಿಲ್ಲ : ಡಿ. ಕೆ ಶಿವಕುಮಾರ್
DKS
WhatsApp Group Join Now
Telegram Group Join Now

ಬೆಂಗಳೂರು : ಲೋಕಸಭಾ ಚುನಾವಣೆ 2024 ರ ಬಹುನಿರೀಕ್ಷಿತ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶಗಳು ಹೊರಬಂದಿವೆ. ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಪ್ರಕಾರ, ತಮಿಳುನಾಡಿನಲ್ಲಿ ಬಿಜೆಪಿ ಖಾತೆ ತೆರೆಯುವಲ್ಲಿ ಯಶಸ್ವಿಯಾಗಲಿದೆ.

ಆದ್ರೇ ಕರ್ನಾಟಕದಲ್ಲಿ ಇಂಡಿಯಾ ಬಣಕ್ಕೆ ಹಿನ್ನಡೆಯಾದ್ರೇ, ಕೇರಳದಲ್ಲಿ ಬಿಜೆಪಿ 2-3 ಸ್ಥಾನ ಗೆಲ್ಲುವುದಾಗಿ ಚುನಾವಣೋತ್ತರ ಸಮೀಕ್ಷೆ ಹೇಳಿದೆ.

ಇನ್ನು ಈ ಕುರಿತಂತೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಎರಡು ಅಂಕಿ ದಾಟುತ್ತದೆ. ಈ ಚುನಾವಣೆ ಸಮೀಕ್ಷೆ ಬಗ್ಗೆ ನನಗೆ ವಿಶ್ವಾಸವಿಲ್ಲ. ಕೆಲವರ ಅಭಿಪ್ರಾಯ ಮಾತ್ರ ಈ ಒಂದು ಸಮೀಕ್ಷೆಯಲ್ಲಿ ಸಂಗ್ರಹಿಸೀರುತ್ತಾರೆ ಅಷ್ಟೇ ಎಂದು ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು.

ಅಲ್ಲದೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೂಡ ಡಿಕೆ ಶಿವಕುಮಾರ್ ಅವರು ಇದೇ ರೀತಿ ಒಂದು ಹೇಳಿಕೆಯನ್ನು ನೀಡಿದ್ದರು.

ಯಾವುದೇ ಸಮೀಕ್ಷೆಯ ಮೇಲೆ ನನಗೆ ನಂಬಿಕೆ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು 130 ರಿಂದ 135 ಸ್ಥಾನಗಳನ್ನು ಗಳಿಸಲಿದೆ ಎಂದು ಹೇಳಿಕೆ ನೀಡಿದ್ದರು. ಇದೀಗ ಈಗಲೂ ಕೂಡ ಇದೇ ರೀತಿ ಒಂದು ಹೇಳಿಕೆ ನೀಡಿದ್ದು, ಹಾಗಾಗಿ ಇದು ನಾಲ್ಕರ ಫಲಿತಾಂಶದ ಮೇಲೇ ಎಲ್ಲರಿಗೂ ಕುತೂಹಲ ಹೆಚ್ಚಿಸಿದೆ.

 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!