ಮಹಾರಾಷ್ಟ್ರ: ಇಲ್ಲಿನ ನಾಗಪುರದಲ್ಲಿ ನಡೆದ ಹಲ್ಬಾ ಫೆಡರೇಶನ್ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಮೀಸಲಾತಿ ಹೋರಾಟದ ಕುರಿತು ಪ್ರಸ್ತಾಪಿಸಿವ ವೇಳೆ, ನಾನು ಬ್ರಾಹ್ಮಣ ,ನಮಗೆ ಯಾವುದೇ ಮೀಸಲಾತಿ ಇಲ್ಲ ಇದು ದೇವರು ನಮಗೆ ಕೊಟ್ಟಿರುವ ವರ” ಎಂದು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಮೀಸಲಾತಿ ಹೋರಾಟದ ಕಿಚ್ಚು ಜೋರಾಗಿದೆ. ಮರಾಠಾ, ಒಬಿಸಿ ಮತ್ತು ಬಂಜಾರ ಮೀಸಲಾತಿಗೆ ಸಂಬಂಧಪಟ್ಟಂತೆ ಗಲಾಟೆಗಳು ಕೂಡ ನಡೆಯುತ್ತಿವೆ.
ಹೀಗಾಗಿ ನಿತಿನ್ ಗಡ್ಕರಿ ಈ ಬಗ್ಗೆ ಮಾತನಾಡಿದ್ದು, ಮಹಾರಾಷ್ಟ್ರದಲ್ಲಿ ಬ್ರಾಹ್ಮಣರಿಗೆ ಹೆಚ್ಚಿನ ಪ್ರಾಮುಖ್ಯತೆ ಇಲ್ಲ, ಆದರೆ ಉತ್ತರ ಭಾರತದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಇದೆ ಎಂದಿದ್ದಾರೆ.
ಈ ವೇಳೆ ಅಚ್ಚರಿ ಎಂಬಂತೆ ಮಾತಂದಿರುವ ನಿತಿನ್ ಗಡ್ಕರಿ ಅವರು, ನಮ್ಮ ಬ್ರಾಹ್ಮಣ ಜಾತಿಗೆ ಮೀಸಲಾತಿ ಸಿಗದೇ ಇರುವುದು ದೇವರ ದೊಡ್ಡ ಆಶೀರ್ವಾದ ಎಂದಿದ್ದಾರೆ.
ಏಕೆಂದರೆ ಒಬ್ಬ ವ್ಯಕ್ತಿಯ ಮೌಲ್ಯ ಹಾಗೂ ಘನತೆಯನ್ನು ಆತನ ಜಾತಿ, ಧರ್ಮ ಅಥವಾ ಲಿಂಗ ನಿರ್ಧರಿಸಲ್ಲ. ಓರ್ವ ವ್ಯಕ್ತಿ ಆತನ ಸಾಧನೆಗಳಿಂದ ಗುರುತಿಸಲ್ಪಡ್ತಾನೆ ಎಂದಿದ್ದಾರೆ. ಹೀಗಾಗಿ ನಾನು ಜಾತಿವಾದವನ್ನು ನಂಬುವುದಿಲ್ಲ ಎಂದಿದ್ದಾರೆ.




