Ad imageAd image

ನಾನು ಮುಂದಿನ ಜನ್ಮದಲ್ಲಿ ಮುಸ್ಲೀಂನಾಗಿ ಹುಟ್ಟಬೇಕು: ಶಾಸಕ ಬಿ. ಕೆ ಸಂಗಮೇಶ್

Bharath Vaibhav
ನಾನು ಮುಂದಿನ ಜನ್ಮದಲ್ಲಿ ಮುಸ್ಲೀಂನಾಗಿ ಹುಟ್ಟಬೇಕು: ಶಾಸಕ ಬಿ. ಕೆ ಸಂಗಮೇಶ್
WhatsApp Group Join Now
Telegram Group Join Now

ಶಿವಮೊಗ್ಗ: ಈದ್ ಮಿಲಾದ್ ಮೆರವಣಿಗೆ ವೇಳೆ ಶಿವಮೊಗ್ಗ ಜಿಲ್ಲೆ ಭದ್ರವಾತಿಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವ ಘಟನೆ ನಡೆದಿದೆ. ಪ್ರಕರಣ ಸಂಬಂಧ ಎಫ್‌ಐಆರ್ ಕೂಡ ದಾಖಲಾಗಿದೆ.

ಈ ನಡುವೆ ಭದ್ರವಾತಿ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ತಾನು ಮುಂದಿನ ಜನ್ಮದಲ್ಲಿ ಮುಸ್ಲಿಂನಾಗಿ ಹುಟ್ಟಬೇಕು ಎಂದು ಹೇಳಿಕೆ ನೀಡಿದ್ದಾರೆ.

ಶಿವಮೊಗ್ಗದಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ಸಂಗಮೇಶ್, ನನ್ನನ್ನು ನಾಲ್ಕು ಬಾರಿ ಗೆಲ್ಲಿಸಿದ್ದಾರೆ.

ನಾನು ಎಂದಿಗೂ ನಿಮ್ಮ ಮನೆ ಮಗನಾಗಿ ಇರುತ್ತೇನೆ. ನನಗೆ ಮುಂದಿನ ಜನ್ಮ ಅಂತಿದ್ದರೆ ನಾನು ಸಾಬರಾಗಿಯೇ ಹುಟ್ಟಿಲು ಇಚ್ಛಿಸುತ್ತೇನೆ. ನಾನು ಮುಸ್ಲೀಂನಾಗಿ ಹುಟ್ಟಬೇಕು ಎಂದು ಹೇಳಿಕೆ ನೀಡಿದ್ದಾರೆ. ಶಾಸಕರ ಈ ಹೇಳಿಕೆ ವಿಡಿಯೋ ಭಾರಿ ವೈರಲ್ ಆಗಿತ್ತಿದೆ.

ಇದೇ ವೇಳೆ ಶಾಸಕ ಸಂಗಮೇಶ್ ತಮ್ಮ ಪುತ್ರ ಗಣೇಶನ ಮೇಲೂ ನಿಮ್ಮ ಆಶಿರ್ವಾದ ಇರಲಿ ಎನ್ನುವ ಮೂಲಕ ಮುಂದಿನ ಚುನಾವಣೆಯಲ್ಲಿ ಮಗನನ್ನು ಕಣಕ್ಕಿಳಿಸುವ ಸುಳಿವು ನೀಡಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!