Ad imageAd image

ಅರಸು ನಂತರ ಹೆಚ್ಚು ಕಾಲ ಮುಖ್ಯಮಂತ್ರಿ ಆಗಿದ್ದವನು ನಾನೇ : ಸಿದ್ದರಾಮಯ್ಯ

Bharath Vaibhav
WhatsApp Group Join Now
Telegram Group Join Now

ಬೆಂಗಳೂರು : ದಿ. ದೇವರಾಜ ಅರಸು 8 ವರ್ಷಗಳ ಕಾಲ ಸಿಎಂ ಅಗಿದ್ದರು. ಅರಸು ನಂತರ ಹೆಚ್ಚು ಕಾಲ ಮುಖ್ಯಮಂತ್ರಿ ಆಗಿದ್ದವನು ನಾನೇ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವರಾಜ ಅರಸು ಬದುಕಿದ್ದಾಗ ನಾನು ಅವರ ಪಕ್ಷದಲ್ಲಿ ಇರಲಿಲ್ಲ.ಜನತಾ ಪಾರ್ಟಿ, ಸಮಾಜವಾದಿ, ಜೆಡಿಎಸ್ ನಂತರ ಕಾಂಗ್ರೆಸ್ ಸೇರಿದೆ. 2006 ರಲ್ಲಿ ನಾನು ಕಾಂಗ್ರೆಸ್ ಪಕ್ಷ ಸೇರಿದೆ.

ದಿ. ದೇವರಾಜ ಅರಸು 8 ವರ್ಷಗಳ ಕಾಲ ಸಿಎಂ ಅಗಿದ್ದರು. ಅರಸು ನಂತರ ಹೆಚ್ಚು ಕಾಲ ಮುಖ್ಯಮಂತ್ರಿ ಆಗಿದ್ದವನು ನಾನೇ, 8 ವರ್ಷ ಪೂರೈಸಿದ್ದ ಅವರೇ, ಈಗ ನಾನು 5 ವರ್ಷ ಪೂರೈಸಿದ್ದೇನೆ.

ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥ ಬರಬೇಕು ಅಂದ್ರೆ ಸಾಮಾಜಿಕ ಹಾಗೂ ಆರ್ಥಿಕ ಸ್ವಾತಂತ್ರ್ಯ ಇರಬೇಕೆಂದು ದೇವರಾಜ ಅರಸು ನಂಬಿಕೊಂಡಿದ್ದರು. ಇದನ್ನೇ ಬಾಬಾಸಾಹೇಬ್ ಅಂಬೇಡ್ಕರ್ ಸಹ ಹೇಳಿದ್ದರು.

ಸಾಮಾಜಿಕ ಪರಿವರ್ತನೆಯ ಹರಿಕಾರ, ಮಾಜಿ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸುರವರ 110ನೇ ಜನ್ಮ ದಿನಾಚರಣೆ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ಅರಸು ಅವರ ಪ್ರತಿಮೆಯ ಬಳಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಗೌರವ ನಮನ ಸಲ್ಲಿಸಿದ್ದಾರೆ.

 

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!