Ad imageAd image

ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ನಾನು ಶ್ರಮಿಸುವೆ : ಎಸಡಿಎಂಸಿ ಅಧ್ಯಕ್ಷ ಕಿರಣ ವಾಘಮೋರೆ

Bharath Vaibhav
ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ನಾನು ಶ್ರಮಿಸುವೆ : ಎಸಡಿಎಂಸಿ ಅಧ್ಯಕ್ಷ ಕಿರಣ ವಾಘಮೋರೆ
WhatsApp Group Join Now
Telegram Group Join Now

ಅಥಣಿ: ತಾಲೂಕಿನ ಸನ್ 2025_ 26 ನೇ ಸಾಲಿನ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಬೇವನೂರ ಗ್ರಾಮದಲ್ಲಿ ನೂತನವಾಗಿ ಆಯ್ಕೆಯಾದ ಎಸ್ ಡಿ ಎಂ ಸಿ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರ ಸ್ವಾಗತ ಸಮಾರಂಭದಲ್ಲಿ ತಾಯಿ ಸರಸ್ವತಿ ದೇವಿ ಫೋಟೋ ಪೂಜೆ ದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ನಂತರ ನೂತನವಾಗಿ ಆಯ್ಕೆಯಾದ ಎಸ್ ಡಿ ಎಂ ಸಿ ಅಧ್ಯಕ್ಷರಾದ ಕಿರಣ ಮಾರುತಿ ವಾಘಮೋರೆ ಅವರು ಮಾತನಾಡಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಜೊತೆ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ನಾವೆಲ್ಲರೂ ಸೇರಿ ನಮ್ಮ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಸ.ಶಿ. ಅರುಣ ಜಾದವ್ ಸ್ವಾಗತ ಕೋರಿದರು ಹಿರಿಯ ಪ್ರಧಾನ ಗುರುಗಳಾದ ಭೀಮರಾವ್ ತೇಲಿ ಮತ್ತು ಸ.ಶಿ. ವಿಲಾಸ್ ಎಸ್ ಪೆಡ್ನೇಕರ್ ಅವರು ಮಾತನಾಡಿದರು.

ಕಿರಣ್ ಮಾರುತಿ ವಾಘಮೋರೆ ಎಸ್ ಡಿ ಎಂ ಸಿ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಗೋದಾವರಿ ಶಿವಾಜಿ ಗ್ಯಾಂಡ ಆಯ್ಕೆಯಾಗಿದ್ದಾರೆ ಹಾಗೂ ಸರ್ವ ಸದಸ್ಯರನ್ನು ಗ್ರಾಮಸ್ಥರು ಶಿಕ್ಷಕರು ಸೇರಿ ಸನ್ಮಾನ ಮಾಡಿ ಶುಭ ಹಾರೈಸಿದರು.

ಈ ಕಾರ್ಯಕ್ರಮದ ನೂತನ ಸದಸ್ಯರಾಗಿ ಸದಾಶಿವ ವಾಘಮಾರೆ, ಅಮಸಿದ್ಧ ಚೌಗಲಾ, ಬಾಬುರಾವ್ ಝಂಡೆನ್ನವರ, ಅಮಸಿದ್ಧ ಪೂಜಾರಿ, ರಾಮಚಂದ್ರ ಕಂಬಾರ, ವಿಜಯ್ ಕುಮಾರ್ ಚೌಗಲಾ, ಸಚಿನ್ ಪವಾರ್, ಅಪ್ಪಾಸಾಬ ಭೋಸಲೆ, ಸುನಿತಾ ಪಾಟೀಲ್, ಅಶ್ವಿನಿ ಪಾಟೀಲ್, ಮಹಾದೇವಿ ಯಮಗಾರ, ಚಂದ್ರವ್ವ ಅಗಸರ, ಆಶಾರಾಣಿ ನಾಯಿಕ, ಸಾವಿತ್ರಿ ಪಾಟೀಲ್ ಮತ್ತು ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಅನಿಲ್ ಯಮಗಾರ, ದ್ರಾಕ್ಷಾಯಿಣಿ ಕಿರಳೆ, ವರ್ಷ ಪವಾರ್, ಹಾಗೂ ರಾಜು ವಾಘಮೊರೆ, ರಾಮು ವಾಘಮೊರೆ ಇನ್ನುಳಿದ ಎಲ್ಲಾ ಸದಸ್ಯರು, ಶಿಕ್ಷಕರು, ಶಿಕ್ಷಕಿಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಸ.ಶಿ. ಪಿ.ಎಂ ಸನದಿ ನಿರೂಪಿಸಿ ವಂದಿಸಿದರು.

ವರದಿ: ರಾಜು ವಾಘಮಾರೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!