ಗೋಕಾಕ: ಭಾರತದ ಅತ್ಯಂತ ಕಠಿಣವಾದ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಅಂತಾನೆ ಬಿಂಬಿತವಾಗಿರುವ ಯುಪಿಎಸ್‌ಸಿ ಪರೀಕ್ಷೆಯನ್ನು ಪಾಸ್ ಮಾಡೋದು ಸುಲಭದ ಸವಾಲಂತೂ ಅಲ್ಲವೇ ಅಲ್ಲ. ಪ್ರತಿ ವರ್ಷ ಲಕ್ಷಾಂತರ ಅಭ್ಯರ್ಥಿಗಳು ಕೊಚಿಂಗ ಪಡೆದು ಈ ಪರೀಕ್ಷೆಗೆ ತಯಾರಿ ನಡೆಸಿ ಪರೀಕ್ಷೆಯನ್ನು ಸಹ ಬರೆಯುತ್ತಾರೆ. ಎಷ್ಟೋ ಜನ ಪಾಸಾಗದೆ ಸಾಕಪ್ಪ ಅಂತ ಹಿಂದೆ ಸರಿದವರು ಉಂಟು,
ಡಿಗ್ರಿ ಮುಗಿದ ನಂತರ ಆರ್ಮಿಯಲ್ಲಿ ಲೆಪ್ಟಿನೆಂಟ ಹುದ್ದೆ ಬಂದರು ನಿರಾಕರಿಸಿ ಎನೆ ಆಗಲಿ ನಾನು ನನ್ನ ತಂದೆ ತಾಯಿ ಕನಸು ನನಸು ಮಾಡಬೇಕೆಂಬ ಚಲದಿಂದ ಒಂದಲ್ಲ ಎರಡಲ್ಲ ಸತತ ನಾಲ್ಕು ಬಾರಿ ಪ್ರಯತ್ನ ಪಟ್ಟು ಕೊನೆಗೆ ಐದನೆ ಬಾರಿಗೆ ಕರದಂಟು ನಾಡಿನ ಯುವಕ ಸಂಜಯ ಶಶಿಕಾಂತ ಕೌಜಲಗಿ ಇವರು 690 ನೆ ರ್ಯಾಂಕ ಪಡೆದು ತಂದೆ ತಾಯಿ ಗೌರವ ಹೆಚ್ವಿಸಿ ಗೋಕಾಕ,ಮೂಡಲಗಿ ತಾಲೂಕಿಗೆ ಕೀರ್ತಿ ತಂದಿದ್ದಾರೆ.
ತಮ್ಮ ಮಗ IAS ಪಾಸಾಗಿ ಗೋಕಾಕಕ್ಕೆ ಆಗಮಿಸುತಿದ್ದಂತೆ ಸಂಜಯ ತಾಯಿ ಜಯಶ್ರೀ ಯವರು ತಮ್ಮ ಬಂದು ಬಳಗದ ಜೊತೆಯಲ್ಲಿ ಆರತಿ ಎತ್ತಿ ಸಿಹಿ ತಿನ್ನಿಸುವುದರ ಮೂಲಕ ಪುತ್ರ ಸಂಜಯ ಇವರನ್ನು ಆತ್ಮಿಯವಾಗಿ ಬರಮಾಡಿಕೊಂಡು ಸತತ ಪ್ರಯತ್ನ ಮಾಡುತ್ತಿರಬೇಕು,ಸದಾ ಜಾಗೃತರಾಗಿರಬೇಕು ಅಂದಾಗ ಮಾತ್ರ ಯಶಸ್ಸು ಖಂಡಿತ ಅದಕ್ಕೆ ನನ್ನ ಮಗ ಸಂಜಯ ಸಾಕ್ಷಿ ಎಂದು ಹೆಮ್ಮೆಯಿಂದ ಹೇಳಿದರು.
ಸುದ್ದಿ ತಿಳಿದ ಗೋಕಾಕ ,ಮೂಡಲಗಿಯ ಬಿಇಓಗಳು ಅರಭಾಂವಿ ಶಾಸಕರ ಆಪ್ತಸಹಾಯಕರು,ಗೋಕಾಕ ಶಾಸಕರ ಆಪ್ತಸಹಾಯಕರು ಗೋಕಾಕ ನಾಡಿಗೆ ಕೀರ್ತಿ ತಂದಿರುವ ಸಂಜಯ ಇತನಿಗೆ ಸಿಹಿ ತಿನಿಸಿ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿ ಶುಭ ಹಾರೈಸಿದರು.
ಇನ್ನು IAS ಪಾಸಾದ ಸಂಜಯ ಕೌಜಲಗಿಯವರು ಮಾದ್ಯಮದವರ ಜೊತೆ ಮಾತನಾಡಿ ಮುಂದಿನ ದಿನಮಾನಗಳಲ್ಲಿ ಬಡಜನರಿಗೆ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಿಕೊಡುವಂತಹ ಅಧಿಕಾರಿಯಾಗಿ ಕೆಲಸ ಮಾಡುತ್ತೇನೆ,ಶೃದ್ದೆ ಭಕ್ತಿಯಿಂದ ಕಾರ್ಯನಿರ್ವಹಿಸಿ ತಂದೆ ತಾಯಿಯ ಗೌರವವನ್ನು ಹೆಚ್ಚಿಸುತ್ತೆನೆಂದರು.
ಅದರ ಜೊತೆಯಲ್ಲಿ ಎರಡು ಬಾರಿ ಪೇಲಾದರೂ ಸಹ ನನ್ನ ತಾಯಿಯು ನನಗೆ ನೀಡಿದ ದೈರ್ಯ ಮತ್ತು ಚಿಕ್ಕ ವಯಸ್ಸಿನಲ್ಲಿಯೆ ನನ್ನ ತಂದೆ ತಾಯಿಯ ಪ್ರೇರಣೆಯಿಂದ ಇವತ್ತು IAS ಪಾಸಾಗಿದ್ದೇನೆಂದು ಸಂತೋಷ ವ್ಯಕ್ತಪಡಿಸಿದರು.
ಈಗಿನ ಯುವಕರು ಒಂದು ಕನಸನ್ನು ಇಟ್ಟುಕೊಳ್ಳಬೇಕು,ನಮ್ಮ ಮೇಲೆ ನಂಬಿಕೆ ಇಟ್ಟುಕೊಳ್ಳಬೇಕು,ಮಾಡುವ ಕೆಲಸದ ಬಗ್ಗೆ ಶೃದ್ದೆ ಇದ್ದರೆ ಪ್ರತಿಫಲ ಸಿಕ್ಕೆ ಸಿಗುತ್ತೆ ಎಂದರು.
ಇನ್ನು ಸನ್ಮಾನಿಸಲು ಆಗಮಿಸಿದ್ದ ಗೋಕಾಕ ಬಿಇಓ ಜಿ,ಬಿ,ಬಳಗಾರ ಇವರು ಭಾರತದ ಗೋಕಾಕ ನಾಡಿಗೆ ಹೆಮ್ಮೆಯ ವಿಷಯ, ಯುಪಿಎಸ್,ಸಿ, ಪರೀಕ್ಷೆ ಪಾಸಾಗುವ ಮೂಲಕ ಗ್ರಾಮಿಣ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ.ಅದರ ಜೊತೆಯಲ್ಲಿ ಈಗಿನ ಯುವಕರು ಸಂಜಯ ಕೌಜಲಗಿಯವರನ್ನು ಮಾರ್ಗದರ್ಶಿಯಾಗಿಟ್ಟುಕೊಂಡು ಪಾಲಕರಿಗೆ ಕೀರ್ತಿ ತರಬೇಕೆಂದು ಶುಭ ಹಾರೈಸಿದರು.
ಇನ್ನು ಈ ಸಂದರ್ಭದಲ್ಲಿ ಪುಂಡಲೀಕ ಕಂಬಳಿ,ಕಮಾಂಡರ ವಿಜಯ ಕಂಬಳಿ,ರಮೇಶ ಮುರಗುಂಡಿ ,ಮೂಡಲಗಿ ಸಿಪಿಆಯ್ ಶ್ರೀಶೈಲ ಬ್ಯಾಕೂಡ, ಸೇರಿದಂತೆ ನೂರಾರು ಜನ ಶುಭ ಹಾರೈಸಿದರು.
ಮನೋಹರ ಮೇಗೇರಿ