——————————————–ಕಾಂಗರೂಗಳಿಗೆ ಹರಿಣಿಗಳ ಸವಾಲು

ಲಾಡರ್ಸ (ಲಂಡನ್): ಸತತ ಎರಡನೇ ಬಾರಿಗೆ ಐಸಿಸಿ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಗೆಲ್ಲಬೇಕೆಂಬ ಮಹಾದಾಸೆಯಿಂದ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಈಗಾಗಲೇ ಇಲ್ಲಿಗೆ ಬಂದಿಳಿದಿದ್ದು, ಪ್ರಶಸ್ತಿಗಾಗಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.
ಕಳೆದ ಬಾರಿ 2023 ರಲ್ಲಿ ಭಾರತ ತಂಡವನ್ನು ಸೋಲಿಸಿ ಪ್ರಶಸ್ತಿ ಗೆದ್ದಿದ್ದ ಆಸ್ಟ್ರೇಲಿಯಾ ತಂಡ ಪಾಟ್ ಕಮ್ಮಿನ್ಸ್ ನೇತೃತ್ವದಲ್ಲಿ ಸದೃಢವಾಗಿದ್ದು, ಯುವ ಪಡೆಯನ್ನು ಹೊಂದಿರುವ ಮತ್ತೊಂದು ತಂಡ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಪಂದ್ಯ ನಾಳೆ ಭಾರತದ ಕಾಲಮಾನ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ.




