Ad imageAd image

ಊಟದ ಮೊದಲು – ನಂತರ ಚಹಾ, ಕಾಫಿ ಸೇವನೆ ಮಾಡಬೇಡಿ : ಐಸಿಎಂಆರ್ ಖಡಕ್ ಸೂಚನೆ

Bharath Vaibhav
ಊಟದ ಮೊದಲು – ನಂತರ ಚಹಾ, ಕಾಫಿ ಸೇವನೆ ಮಾಡಬೇಡಿ : ಐಸಿಎಂಆರ್ ಖಡಕ್ ಸೂಚನೆ
TEA
WhatsApp Group Join Now
Telegram Group Join Now

ಆರೋಗ್ಯಕಾರಿ ಜೀವನಕ್ಕಾಗಿ ಭಾರತೀಯ ಮೆಡಿಕಲ್ ಕೌನ್ಸಿಲ್ ಅಂಡ್ ರಿಸರ್ಚ್ (ICMR) 17 ಆಹಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಭಾರತೀಯ ಮೆಡಿಕಲ್ ಕೌನ್ಸಿಲ್ ಅಂಡ್ ರಿಚರ್ಚ್ ನೀಡಿದ ಮಾರ್ಗಸೂಚಿಯಲ್ಲಿ ಊಟ ಮೊದಲು ಅಥವಾ ನಂತರ ಚಹಾ ಅಥವಾ ಕಾಫಿ ಸೇವಿಸುವುದು ಆರೋಗ್ಯಕಾರಿ ಅಲ್ಲ.ಈ ಅಭ್ಯಾಸ ತೊರೆಯುವಂತೆ ಸೂಚಿಸಿದೆ.

ಭಾರತೀಯರು ಸಾಮಾನ್ಯವಾಗಿ ಬಿಸಿ ಪಾನೀಯವಾಗಿ ಹೆಚ್ಚಾಗಿ ಟೀ ಮತ್ತು ಕಾಫಿಯನ್ನು ಸೇವಿಸುತ್ತಾರೆ. ಆದರೆ ಊಟದ ಮೊದಲು ಅಥವಾ ನಂತರ ಸೇವನೆ ಅಭ್ಯಾಸ ಅನಾರೋಗ್ಯಕ್ಕೆ ಹಾದಿ ಮಾಡಿಕೊಡುತ್ತದೆ ಎಂದು ಐಸಿಎಂಆರ್ ವಿವರಿಸಿದೆ.

ಕಾಫಿ ಮತ್ತು ಟೀಯಲ್ಲಿ ಕೆಫೆನ್ ಅಂಶ ಇದ್ದು, ಇದು ದೇಹದ ನರ ಮಂಡಲಗಳ ಮೇಲೆ ಪ್ರಭಾವ ಬೀರುತ್ತದೆ. ಇದರಿಂದ ಪಾರ್ಶ್ವವಾಯು ಮುಂತಾದ ನರ ದೌರ್ಬಲ್ಯದಂತಹ ಸಮಸ್ಯೆಗಳು ಕಾಡಬಹುದು ಎಂದು ಎಚ್ಚರಿಸಿದೆ. ಆದರೆ ಕಾಫಿ ಮತ್ತು ಟೀ ಸೇವಿಸಲೇಬಾರದು ಎಂದು ಹೇಳಿಲ್ಲ.

ಒಂದು ಕಪ್ (150ml) ಕುದಿಸಿದ ಕಾಫಿಯು 80-120mg ಕೆಫೀನ್ ಅನ್ನು ಹೊಂದಿರುತ್ತದೆ, ತ್ವರಿತ ಕಾಫಿ 50-65mg ಅನ್ನು ಹೊಂದಿರುತ್ತದೆ ಮತ್ತು ಚಹಾವು 30-65mg ಕೆಫೀನ್ ಅನ್ನು ಹೊಂದಿರುತ್ತದೆ.

“ಚಹಾ ಮತ್ತು ಕಾಫಿ ಸೇವನೆಯಲ್ಲಿ ಮಿತವಾಗಿರುವಂತೆ ಸಲಹೆ ನೀಡಲಾಗುತ್ತದೆ, ಆದ್ದರಿಂದ ಕೆಫೀನ್ ಸೇವನೆಯು ಸಹಿಸಬಹುದಾದ ಮಿತಿಗಳನ್ನು (300mg/day) ಮೀರುವುದಿಲ್ಲ, ಒಬ್ಬ ವ್ಯಕ್ತಿಯು ಹೊಂದಬಹುದಾದ ಕೆಫೀನ್‌ನ ದೈನಂದಿನ ಮಿತಿ ಹೊಂದಿರುತ್ತಾರೆ ಎಂದು ವರದಿ ತಿಳಿಸಿದೆ.

ಊಟಕ್ಕೆ ಕನಿಷ್ಠ ಒಂದು ಗಂಟೆ ಮೊದಲು ಮತ್ತು ನಂತರ ಕಾಫಿ ಮತ್ತು ಚಹಾವನ್ನು ಸೇವಿಸುವ ಅಭ್ಯಾಸ ತೊರೆಯುವಂತೆ ವರದಿ ಸಲಹೆ ನೀಡಿದೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!