ಬೆಂಗಳೂರು: ‘ಭ್ರಷ್ಟಾಚಾರದ ಪಂದ್ಯ’ ಏರ್ಪಡಿಸಿದ್ರೆ ಸಿಎಂ ಸಿದ್ದರಾಮಯ್ಯಗೆ ಚಿನ್ನದ ಪದಕ ಸಿಗುವುದು ಖಚಿತ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಟ್ವೀಟ್ ಮಾಡಿರುವ ಬಿಜೆಪಿ ‘ ಒಲಂಪಿಕ್ಸ್ನಲ್ಲಿ ಭ್ರಷ್ಟಾಚಾರದ ಪಂದ್ಯ ಏರ್ಪಡಿಸಿದಲ್ಲಿ ಭ್ರಷ್ಟಾಚಾರದ ಪಿತಾಮಹನಿಗೆ ಚಿನ್ನದ ಪದಕ ಖಚಿತ-ನಿಶ್ಚಿತ-ಖಂಡಿತ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ವ್ಯಂಗ್ಯವಾಡಿದೆ.
ಕಾಂಗ್ರೆಸ್ ಆಡಳಿತದ ಭ್ರಷ್ಟಾಚಾರ ಕಾಲಕ್ಕೂ ಬಿಜೆಪಿಯ ಅಮೃತ ಕಾಲಕ್ಕೂ ಇರುವ ವ್ಯತ್ಯಾಸ!ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ನೀತಿಗಳಿಂದಾಗಿ 10 ವರ್ಷಗಳಲ್ಲಿ ದೇಶದಲ್ಲಿ ಸಿಎನ್ಜಿ ಸ್ಟೇಷನ್ಗಳ ಸಂಖ್ಯೆ 938 ರಿಂದ 6959ಕ್ಕೆ ಏರಿಕೆಯಾಗಿದೆ ಎಂದಿದೆ.
ನೆರೆಯಿಂದ ಹಾನಿಗೊಳಗಾದ ಕನ್ನಡಿಗರ ಕಂಬನಿ ಒರೆಸುವದಕ್ಕಿಂತಲೂ, ಹೈಕಮಾಂಡ್ ಗೆ ಕಪ್ಪ ತಲುಪಿಸುವ ಕಾರ್ಯದಲ್ಲಿ ಸಿಎಂ-ಡಿಸಿಎಂ ಮಗ್ನವಾಗಿದ್ದಾರೆ ಎಂದು ಬಿಜೆಪಿ ಕಿಡಿಕಾರಿದೆ.