Ad imageAd image

ಅಂಗೈನಲ್ಲಿ ತುರಿಕೆ ಕಂಡು ಬಂದರೆ ದುಡ್ಡು ಬರಲ್ಲ ರೋಗ ಬರುತ್ತೆ

Bharath Vaibhav
ಅಂಗೈನಲ್ಲಿ ತುರಿಕೆ ಕಂಡು ಬಂದರೆ ದುಡ್ಡು ಬರಲ್ಲ ರೋಗ ಬರುತ್ತೆ
WhatsApp Group Join Now
Telegram Group Join Now

ಕೆಲವೊಮ್ಮೆ ನಮ್ಮ ಅಂಗೈಗಳಲ್ಲಿ ಕಾರಣವಿಲ್ಲದೆ ತುರಿಕೆ ಕಂಡು ಬರುತ್ತದೆ. ಈ ರೀತಿಯಾದರೆ ಹಣ ಬರುತ್ತದೆ ಎಂಬ ನಂಬಿಕೆ ಇದೆ. ಆದರೆ ಇದು ಎಷ್ಟರ ಮಟ್ಟಿಗೆ ನಿಜ ಎಂಬುದು ಯಾರಿಗೂ ತಿಳಿದಿಲ್ಲ. ಹಾಗಾಗಿ ಅಂಗೈನಲ್ಲಿ ತುರಿಕೆ ಕಂಡು ಬಂದಾಗ ದುಡ್ಡು ಬರುತ್ತದೆ ಎಂದು ಸುಮ್ಮನಾಗಬೇಡಿ. ಇದು ನಿಮ್ಮ ದೇಹ ಕೆಲವು ಆರೋಗ್ಯ ಸಮಸ್ಯೆಗಳ ಬರುವ ಬಗ್ಗೆ ನಿಮಗೆ ನೀಡುವ ಮುನ್ಸೂಚನೆ ಆಗಿರಬಹುದು.

ಪ್ರಾಚೀನ ನಂಬಿಕೆಗಳ ಪ್ರಕಾರ, ನಮ್ಮ ಅಂಗೈಗಳಲ್ಲಿ ತುರಿಕೆ (Itching in the palms) ಕಂಡು ಬಂದರೆ ಹಣ ಬರುತ್ತದೆ ಎಂಬ ನಂಬಿಕೆ ಇದೆ. ಈ ಮಾತನ್ನು ನೀವು ಅನೇಕ ಬಾರಿ ಕೇಳಿರಬಹುದು. ಅದರಲ್ಲಿಯೂ ನಮ್ಮ ಅಂಗೈನ ಕೆಲವು ಭಾಗಗಳಲ್ಲಿ ತುರಿಕೆಯಾಗುತ್ತಿದ್ದರೆ, ಅದು ಸಂಪತ್ತು (Wealth) ಬರುವುದರ ಸಂಕೇತವೆಂದು ಹೇಳಲಾಗುತ್ತದೆ. ಆದರೆ ಇದು ಎಷ್ಟು ನಿಜ ಎಂಬುದು ಯಾರಿಗೂ ತಿಳಿದಿಲ್ಲ. ಅದರಲ್ಲಿಯೂ ವೈಜ್ಞಾನಿಕವಾಗಿ ಇದಕ್ಕೆ ಯಾವುದೇ ರೀತಿಯ ಪುರಾವೆಗಳೂ ಕೂಡ ಇಲ್ಲ. ಇದೊಂದು ನಂಬಿಕೆ (Faith) ಅಷ್ಟೇ. ಆದರೆ ವಾಸ್ತವದಲ್ಲಿ ಈ ತುರಿಕೆ ಕಂಡು ಬರುವುದರ ಹಿಂದೆ ಹಲವಾರು ರೀತಿಯ ಆರೋಗ್ಯ (Health) ಸಮಸ್ಯೆಗಳು ಇರಬಹುದು ಎಂದು ತಜ್ಞರು ಹೇಳುತ್ತಾರೆ. ಹಾಗಾದರೆ ಅಂಗೈನಲ್ಲಿ ತುರಿಕೆ ಕಂಡು ಬರುವುದಕ್ಕೆ ಕಾರಣವೇನು ತಿಳಿದುಕೊಳ್ಳಿ.

ಚರ್ಮದ ಶುಷ್ಕತೆ
ಅಂಗೈ ತುಂಬಾ ಸೂಕ್ಷ್ಮವಾದ ಭಾಗ. ಹಾಗಾಗಿ ಆಗಾಗ ಕೈ ತೊಳೆಯವ ಅಭ್ಯಾಸವೂ ಕೂಡ ಚರ್ಮದ ಶುಷ್ಕತೆಗೆ ಕಾರಣವಾಗಬಹುದು. ಇದರಿಂದಲೂ ಕೂಡ ತುರಿಕೆ ಕಂಡು ಬರುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಆದರೆ ಇದು ಸ್ವಾಭಾವಿಕ. ಯಾವುದೇ ರೀತಿಯ ಕ್ರೀಮ್ ಅಥವಾ ಮಾಯಿಶ್ಚರೈಸರ್ ಬಳಸಿ ಇದನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು. ಆದರೆ ನಿರ್ಲಕ್ಷಿಸಬಾರದು.

ಮಧುಮೇಹ
ಮತ್ತೊಂದೆಡೆ, ಅಂಗೈಗಳಲ್ಲಿ ತುರಿಕೆಗೆ ಮಧುಮೇಹವೂ ಕಾರಣವಾಗಿರಬಹುದು. ಏಕೆಂದರೆ ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗಿರುವುದರಿಂದ ನರಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ ಕೈಗಳಲ್ಲಿ ಅಸ್ವಾಭಾವಿಕ ಸಂವೇದನೆಗಳನ್ನು ಉಂಟು ಮಾಡುತ್ತದೆ. ಉದಾಹರಣೆಗೆ, ಸೆಳೆತ, ಕಿರಿಕಿರಿ ಅಥವಾ ತುರಿಕೆಯಂತಹ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು. ಇವುಗಳನ್ನು ಕೆಲವರು ಸಾಮಾನ್ಯ ಎಂದು ಹೇಳುತ್ತಾರೆ. ಆದರೆ ಇವು ಮಧುಮೇಹಕ್ಕೆ ಸಂಬಂಧಿಸಿದ ದೈಹಿಕ ಎಚ್ಚರಿಕೆಯೂ ಆಗಿರಬಹುದು.

ಚರ್ಮದ ಅಲರ್ಜಿ
ಅಂಗೈಗಳಲ್ಲಿ ತುರಿಕೆ ಕಂಡು ಬರಲು ಮತ್ತೊಂದು ಕಾರಣವೆಂದರೆ ಚರ್ಮದ ಅಲರ್ಜಿ. ನಾವು ಪ್ರತಿನಿತ್ಯ ಬಳಕೆ ಮಾಡುವ ಬಾಡಿ ವಾಶ್, ಡಿಟರ್ಜೆಂಟ್, ಹ್ಯಾಂಡ್ ಸೋಪ್, ಸ್ಯಾನಿಟೈಸರ್ ಇತ್ಯಾದಿಗಳಲ್ಲಿರುವ ರಾಸಾಯನಿಕಗಳು ಚರ್ಮದ ಅಲರ್ಜಿಯನ್ನುಂಟು ಮಾಡುತ್ತವೆ. ಹೊಸ ಉತ್ಪನ್ನವನ್ನು ಬಳಸಿದ ತಕ್ಷಣ ತುರಿಕೆ ಕಂಡು ಬಂದರೆ, ಅದು ಅಲರ್ಜಿಯ ಲಕ್ಷಣವಾಗಿರಬಹುದು. ಅದಲ್ಲದೆ ಕೆಲವು ಔಷಧಿಗಳು ಕೂಡ ಚರ್ಮದ ಮೇಲೆ ಪರಿಣಾಮ ಬೀರಬಹುದು. ಈ ಸಂದರ್ಭಗಳಲ್ಲಿ ವೈದ್ಯರ ಸಲಹೆ ಪಡೆಯುವುದು ಬಹಳ ಅವಶ್ಯಕ.

ಯಕೃತ್ತಿನ ಸಮಸ್ಯೆ
ಕೆಲವು ಸಂದರ್ಭಗಳಲ್ಲಿ, ಯಕೃತ್ತಿನ ಕಾರ್ಯ ಕಡಿಮೆಯಾದರೆ, ಅದು ತುರಿಕೆಗೆ ಕಾರಣವಾಗಬಹುದು. ಸಾಮಾನ್ಯವಾಗಿ ಯಕೃತ್ತು ದೇಹದಲ್ಲಿನ ಪಿತ್ತರಸ ಅಂಶವನ್ನು ನಿಯಂತ್ರಿಸುವ ಅಂಗವಾಗಿದೆ. ಇದು ಸರಿಯಾಗಿ ಕೆಲಸ ಮಾಡದಿದ್ದರೆ, ಅದು ಚರ್ಮದ ಮೇಲೂ ಪರಿಣಾಮ ಬೀರಬಹುದು. ಆಗ ಅಂಗೈಗಳಲ್ಲಿ ಮತ್ತು ದೇಹದ ಇತರ ಭಾಗಗಳಲ್ಲಿ ತುರಿಕೆಗೆ ಕಾರಣವಾಗಬಹುದು. ಅಲ್ಲದೆ, ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ದೇಹದಲ್ಲಿನ ಜೀವಾಣುಗಳು ಪರಿಣಾಮಕಾರಿಯಾಗಿ ಹೊರಹೋಗುವುದಿಲ್ಲ. ಇದರ ಪರಿಣಾಮವಾಗಿ, ಅವು ದೇಹದಲ್ಲಿ ಸಂಗ್ರಹವಾಗಬಹುದು ಮತ್ತು ಚರ್ಮದ ಮೇಲೆ ಪರಿಣಾಮ ಬೀರಬಹುದು ಇದರಿಂದ ತುರಿಕೆಯೂ ಹೆಚ್ಚಾಗಬಹುದು.

ಥೈರಾಯ್ಡ್ ಸಂಬಂಧಿತ ಸಮಸ್ಯೆ
ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ ಸಂಬಂಧಿತ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಈ ರೀತಿ ಆರೋಗ್ಯ ಸಮಸ್ಯೆಗಳು ಇರುವವರಿಗೆ ಅಂಗೈಗಳಲ್ಲಿ ತುರಿಕೆ ಕಂಡು ಬರುತ್ತದೆ. ಅದರಲ್ಲಿಯೂ ಹೈಪೋಥೈರಾಯ್ಡಿಸಮ್ ಇರುವವರಲ್ಲಿ ಒಣ ಚರ್ಮದ ಸಮಸ್ಯೆ ಹೆಚ್ಚಾಗಿರುತ್ತದೆ ಜೊತೆಗೆ ದೇಹದಲ್ಲಿ ತೇವಾಂಶ ಕಡಿಮೆಯಾಗುತ್ತದೆ. ಇದರ ಪರಿಣಾಮವು ಕೈಗಳ ಮೇಲೆ ಹೆಚ್ಚು ಗೋಚರಿಸುತ್ತದೆ. ಹಾಗಾಗಿ ಈ ರೀತಿಯ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡದೆಯೇ ಚರ್ಮರೋಗ ತಜ್ಞರನ್ನು ಸಂಪರ್ಕಿಸುವುದು ಬಹಳ ಉತ್ತಮ.

WhatsApp Group Join Now
Telegram Group Join Now
Share This Article
error: Content is protected !!