ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ತನ್ನ ಕಡೆಯ ಲೀಗ್ ಪಂದ್ಯದ ಮೂಲಕ ಅಭಿಯಾನ ಮುಗಿಸಿದ ಬಾಂಗ್ಲಾ ದೇಶ ತಂಡದ ಪರ ಆಡಿದ ಅನುಭವಿ ಬ್ಯಾಟರ್ ಹಾಗೂ ವಿಕೆಟ್್ ಕೀಪರ್ ಮುಶ್ಫಕೀರ ರಹೀಮ್ ಏಕದಿನ ಕ್ರಿಕೆಟ್ ವಿದಾಯ ಹೇಳಿದ್ದು ತಮಗೆಲ್ಲ ಗೊತ್ತು. ಬಾಂಗ್ಲಾದ ಈ ಕುಳ್ಳನೆಯ ಾಟಗಾರ ಬಾಂಗ್ಲಾ ಕಂಡ ಯಶಸ್ವಿ ಆಟಗಾರರಲ್ಲಿ ಒಬ್ಬರು. ಅವರು ಬಹುತೇಕ ತಾವು ಆಡಿದ ಪಂದ್ಯಗಳಿಂದ 6 ನೇ ಕ್ರಮಾಂಕದಲ್ಲಿ ಬ್ಯಾಟ್್ ಮಾಡಿದ್ದಾರೆ.
ವಿಕೆಟ್ ಕೀಪರ್ ಬ್ಯಾಟುಗಾರ ನಾಲ್ಕನೇ ಕ್ರಮಾಂಕದಲ್ಲಿಯೂ ಬ್ಯಾಟ್ ಮಾಡಿ ಹೆಚ್ಚು ಯಶಸ್ಸು ಕಂಡಿದ್ದರು. ಅವರು ನಾಲ್ಕನೇ ಕ್ರಮಾಂಕದಲ್ಲಿಯೇ ಆಡಿದ್ದರೆ ಮತ್ತಷ್ಟು ಯಶಸ್ಸು ಸಾಧಿಸುತ್ತಿದ್ದರು ಎಂದು ಅವರನ್ನು ಸಮೀಪದಿಂದ ಕಂಡ ಕ್ರಿಕೆಟ್ ಗೆಳೆಯರು ಮಾತನಾಡಿಕೊಳ್ಳುತ್ತಾರೆ. ಹೌದು ಮುಶ್ಪಕೀರ್ ರಹೀಮ್ ಅತ್ಯುತ್ತಮ ವಿಕೆಟ್ ಕೀಪರ್ ಆಗಿದ್ದರ ಹೊರತು ಶ್ರೇಷ್ಠ ಬ್ಯಾಟುಗಾರ ಕೂಡ ಎಂದು ಅವರ ಬ್ಯಾಟಿನಿಂದ ಮೂಡಿದ ರನ್ಗಳ ಸಾಧನೆಗಳೇ ಬಹಿರಂಗ ಪಡಿಸುತ್ತವೆ.




