ಯಾದಗಿರಿ: ಸಚಿವ ಸತೀಶ್ ಜಾರಕಿಹೊಳಿ ಯಾರನ್ನೂ ಸುಮ್ಮನೆ ಭೇಟಿಯಾಗುವವರಲ್ಲ. ಅವರು ಭೇಟಿ ಆಗಿದ್ದಾರೆಂದರೆ ಅದರ ಹಿಂದ ದೊಡ್ಡವಾದ ಕಾರಣ ಇದ್ದೇ ಇರುತ್ತದೆ ಎಂದು ಮಾಜಿ ಸಚಿವ ರಾಜೂಗೌಡ ಹೇಳಿದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾದ ಸಚಿವ ಸತೀಶ್ ಜಾರಕಿಹೊಳಿ ಅವರ ಕುರಿತಾಗಿ ಯಾದಗಿರಿಯಲ್ಲಿ ಗುರುವಾರ (ಮಾ.27) ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಸತೀಶ್ ಅಣ್ಣನವರು ತುಂಬಾ ಶಾರ್ಟ್ ರಾಜಕಾರಣಿ, ಅವರು ಮಾಡುವ ಕೆಲಸ ಹಾಗೂ ಅವರ ನಡೆ ಸೂಕ್ಷ್ಮವಾಗಿರುತ್ತದೆ.
ಯಾರಲ್ಲಿಯೂ ಹೇಳದೆ ಅವರ ಕೆಲಸ ಅತ್ಯಂತ ಪ್ರಭಾವದಿಂದಾಗಿ ಮಾಡುತ್ತಾರೆ. ಈಗ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಭೇಟಿ ಆಗಿದ್ದಾರೆ ಅಂದರೆ ಸಿಎಂ ಕುರ್ಚಿ ಮೇಲೆ ಜಾರಕಿಹೊಳಿ ಸಾಹೇಬರಿಗೆ ಕಣಿರಬಹುದು, ಸಿಎಂ ಸ್ನಾನಕ್ಕೆ ಟ್ರೈ ಮಾಡುತ್ತಿರಬಹುದು, ಸತೀಶ್ ಅಣ್ಣ ಒಂದು ವೇಳೆ ರಾಜ್ಯದ ಮುಖ್ಯಮಂತ್ರಿ ಸ್ನಾನಕ್ಕೆ ಪ್ರಯತ್ನ ಮಾಡಿದಲ್ಲಿ ನೂರಕ್ಕೆ ನೂರರಷ್ಟ ಅವರೇ ಸಿಎಂ ಆಗುವುದು ಎಂದು ಭವಿಷ್ಯ ಮಡಿದಿದ್ದಾರೆ. ಬೆಳಗಾವಿ ಚುನಾವಣಾಯಲ್ಲಿ ತಮ್ಮ ಮಗಳನ್ನು ಹೇಗೆ ಗೆಲ್ಲಿಸಿಕೊಂಡು ಬಂದರು, ಇನ್ನೊಬ್ಬದ ಮಕ್ಕಳನ್ನು ಹೇಗೆ ಸೋಲಿಸಲಾಯಿತು ಎಲ್ಲವೂ ಆಗಿದೆ ಅದರ ಬಗ್ಗೆ ಹೆಚ್ಚು ಮಾತನಾಡುವುದು ಬೇಡ. ಆದರೆ ಸತೀಶ್ ಜಾರಕಿಹೊಳಿ ಅವರು ಮನಸ್ಸು ಮಾಡಿದರೆ 100% ಸಿಎಂ ಆಗುತ್ತಾರೆ ಎಂದು ಹೇಳಿದರು.