Ad imageAd image

ರಾಜಕೀಯ ಮಾಡಿ, ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ಮಾಡದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ:ಮಾಳದಕರ್

Bharath Vaibhav
ರಾಜಕೀಯ ಮಾಡಿ, ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ಮಾಡದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ:ಮಾಳದಕರ್
WhatsApp Group Join Now
Telegram Group Join Now

ಹುಬ್ಬಳ್ಳಿ:ಕಳೆದ ವರ್ಷಗಳಿಂದ ಇಲ್ಲಿನ ಹು-ಧಾ ಮಹಾನಗರ ಪಾಲಿಕೆ ಪಕ್ಕದಲ್ಲಿರುವ ಗಾರ್ಡನ್’ನಲ್ಲಿನ ಛತ್ರಪತಿ ಶಿವಾಜಿ ಮೂರ್ತಿ ತೆರವಾಗಿದೆ. ಆದರೆ ಈವರೆಗೆ ಮೂರ್ತಿ ಸ್ಥಾಪನೆ ಮಾಡದೇ ಶಿವಾಜಿಗೆ ಅಪಮಾನ ಮಾಡಿರುವ ಪಾಲಿಕೆ ಕ್ರಮ ಖಂಡನೀಯ ಎಂದು ಹಿಂದು ಪರಿಶದ್ ನ ಸಂಸ್ಥಾಪಕ ಅಧ್ಯಕ್ಷ
ವಿನಾಯಕ ಮಾಳವದಕರ ಹೇಳಿದರು.

ತೆರವಾದ ಶಿವಾಜಿ ಮೂರ್ತಿ ಸ್ಥಳಕ್ಕೆ ಮಹಾನಗರ ಪಾಲಿಕೆ ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕೆಂದು ಹಲವಾರು ಹೋರಾಟ, ಮನವಿ ಕೊಡಲಾಗಿದೆ. ಆದ್ರೆ ಯಾವುದೇ ಸ್ಪಂದನೆ ದೊರತ್ತಿಲ್ಲ, ಬರುವ ಫೆಬ್ರವರಿ 19 ರಂದು ಶಿವಾಜಿ ಮಹಾರಾಜರ ಜಯಂತಿಯಿದೆ. ಈ ಕಾರಣ ಅದರೊಳಗೆ ಪಾಲಿಕೆ ಶಿವಾಜಿ ಮೂರ್ತಿ ಸ್ಥಾಪಿಸಿ ಶಿವಾಜಿ ಮಹಾರಾಜರ ಉತ್ಸವವನ್ನು ಅತಿ ವಿಜೃಂಭಣೆಯಿಂದ ಆಚರಿಸಲು ಅವಕಾಶ ಮಾಡಿಕೊಡಬೇಕು.

ಒಂದು ವೇಳೆ ಇದರಲ್ಲಿ ರಾಜಕೀಯ ಮಾಡಿ, ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ಮಾಡದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ವರದಿ:ಸುಧಿರ ಕುಲಕರ್ಣಿ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!