Ad imageAd image

ಕೆಮಿಕಲ್ ಮಿಶ್ರಿತ ಬಂಡಾರ ಮಾರಾಟ ಮಾಡಿದರೆ,ಮುಲಾಜಿಲ್ಲದೆ ಕಠಿಣ ಕ್ರಮ : PSI ಕೆ,ವಾಲಿಕರ

Bharath Vaibhav
ಕೆಮಿಕಲ್ ಮಿಶ್ರಿತ ಬಂಡಾರ ಮಾರಾಟ ಮಾಡಿದರೆ,ಮುಲಾಜಿಲ್ಲದೆ ಕಠಿಣ ಕ್ರಮ : PSI ಕೆ,ವಾಲಿಕರ
WhatsApp Group Join Now
Telegram Group Join Now

ಗೋಕಾಕ : ಕೆಮಿಕಲ್ ಮಿಶ್ರಿತ ಭಂಡಾರ ಮಾರಾಟ ಮಾಡಿದ್ದು ಕಂಡು‌ ಬಂದಲ್ಲಿ ಅಥವಾ ಯಾರಾದರೂ ಮಾರಾಟ ಮಾಡುತಿದ್ದರೆ ಇವತ್ತಿನಿಂದಲ್ಲೆ ನಿಲ್ಲಿಸಬೇಕೆಂದು ಗೋಕಾಕ‌ ನಗರಸಭೆ ಮತ್ತು ಶಹರ ಪೋಲಿಸ್ ಠಾಣೆಯ ನೇತೃತ್ವದಲ್ಲಿ ನಗರಸಭೆ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಮುಂಬರುವ ಗೋಕಾಕ ಗ್ರಾಮದೇವತೆ ಜಾತ್ರೆಯಲ್ಲಿ ಭಂಡಾರ ಮಾರಾಟಗಾರರ ಸಭೆಯಲ್ಲಿ ಪಿಎಸ್ಐ ಕೆ,ವಾಲಿಕಾರ ಖಡಕ ಎಚ್ಚರಿಕೆ ನೀಡಿದರು.

ಗೋಕಾಕ ಗ್ರಾಮದೇವತೆಯ ಜಾತ್ರೆಯಲ್ಲಿ ಲಕ್ಷಕ್ಕೂ ಮೀರಿ ಭಕ್ತರು ಸೇರುತ್ತಾರೆ,ಅಂತಹ ಸಮಯದಲ್ಲಿ ಭಕ್ತರಿಗೆ ಯಾವುದು ಕೆಮಿಕಲ್ ಮಿಶ್ರಿತ ಭಂಡಾರ ಅನ್ನುವುದು ಗೊತ್ತಿರುವುದಿಲ್ಲ ಹೀಗಾಗಿ ಒಬ್ಬರಿಗೊಬ್ಬರು ಕೆಮಿಕಲ್ ಮಿಶ್ರಿತ ಬಂಡಾರ ಎರಚುವದರಿಂದ ಕೆಮಿಕಲನಿಂದ ಹಲವಾರು ರೋಗಗಳು ಬರುತ್ತವೆ,

ಗೋಕಾಕ ಜಾತ್ರೆ ಅಂದರೆ ಪರಿಶುದ್ದವಾದ ಭಂಡಾರದ ಜಾತ್ರೆ ಎಂದು ಸುತ್ತಮುತ್ತಲಿನ ಜನ ಮಾತಾಡಿ ಎಲ್ಲರೂ ನೆನಪಿಡುವಂತೆ ಜಾತ್ರೆಯನ್ನು ಎಲ್ಲರೂ ಮಾಡಬೇಕಾಗಿದೆ, ಅದಕ್ಕಾಗಿ ಯಾರು ಕೆಮಿಕಲ್ ಮಿಶ್ರಿತ ಭಂಡಾರ ಮಾರಾಟ ಮಾಡಿದರೆ ಅಂತವರ ವಿರುದ್ದ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆಂದರು.

ಇನ್ನು ಗೋಕಾಕ ತಾಲೂಕಾ ಆಹಾರ ಸಂರಕ್ಷಣಾ ಅಧಿಕಾರಿ ಬಿ,ಲೋಕೇಶ್ ಇವರು ಕೆಮಿಕಲ್ ಮಿಶ್ರಿತ ಮತ್ತು ಕೆಮಿಕಲ್ ಇಲ್ಲದ ಭಂಡಾರವನ್ನು ಪ್ರಯೋಗ ಮಾಡುವ ಮೂಲಕ ತಿಳಿಸಿದರು.

ಈ ಸಭೆಯಲ್ಲಿ ಕೆಲವು ಕಾಲ ಮಾರಾಟಗಾರರ ನಡುವೆ ಮತ್ತು ಅಧಿಕಾರಿಗಳ ನಡುವೆ ವಾಗ್ವಾದ ನಡೆದಾಗ ಸಿಪಿಆಯ್ ಸುರೇಶಬಾಬು ಇವರು ಮದ್ಯಸ್ಥಿಕೆ ವಹಿಸಿ ಗೊಂದಲ ನಿವಾರಣೆ ಮಾಡಿದರು,

ಒಟ್ಟಾರೆಯಾಗಿ ಗೋಕಾಕ ತಹಸಿಲ್ದಾರ ಡಾ: ಮೊಹಮ ಬಸ್ಮೆ ಇವರು ಬರುವ ಗೋಕಾಕ ಜಾತ್ರೆಯಲ್ಲಿ ಯಾರೂ ಕೂಡ ಕೆಮಿಕಲ್ ಮಿಶ್ರಿತ ಭಂಢಾರ ಮಾಡಿದ್ದು ಕಂಡು ಬಂದಲ್ಲಿಮತ್ತು ಹೆಚ್ಚಿನ ದರದಲ್ಲಿ ಮಾರಾಟ ಮಾಡಿದರೆ ಅಂತವರ ವಿರುದ್ದ ದಂಡ ಸಹಿತ ಅಂತವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿ ಅದ್ದೂರಿಯಾಗಿ ಭಕ್ತಿಯಿಂದ ಸಂತೋಷದಿಂದ ಜಾತ್ರೆ ಮಾಡಲು ವಿನಂತಿಸಿದರು.

ಈ ಸಂದರ್ಭದಲ್ಲಿ ಜಾತ್ರಾ ಕಮೀಟಿ ಸದಸ್ಯರು, ನಗರಸಭೆ ಸದಸ್ಯರು ಸೇರಿದಂತೆ ನೂರಾರು ಮಾರಾಟಗಾರರು ಬಾಗಿಯಾಗಿದ್ದರು.

ವರದಿ:ಮನೋಹರ ಮೇಗೇರಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!