Ad imageAd image

ಒಳ ಮೀಸಲಾತಿ ವೇಳೆ ಹೃದಯಾಘಾತದಿಂದ ಶಿಕ್ಷಕ ಸಾವು 

Bharath Vaibhav
ಒಳ ಮೀಸಲಾತಿ ವೇಳೆ ಹೃದಯಾಘಾತದಿಂದ ಶಿಕ್ಷಕ ಸಾವು 
WhatsApp Group Join Now
Telegram Group Join Now

ಕಲಬುರಗಿ : ಪರಿಶಿಷ್ಟ ಜಾತಿಗಳ ಸಮೀಕ್ಷೆ ಕಾರ್ಯ ನಡೆಸುತ್ತಿದ್ದ ಶಿಕ್ಷಕರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಚಿಂಚೋಳಿ ತಾಲೂಕಿನ ಚತ್ರಸಾಲ ಗ್ರಾಮದಲ್ಲಿ ಗುರುವಾರ ನಡೆದಿದೆ.

ಶಿಕ್ಷಕ ನಾಗಶೆಟ್ಟಿ ಅಮೃತಪ್ಪ ಬಾಸಪಳ್ಳಿ(50) ಮೃತಪಟ್ಟವರು. ಗುರುವಾರ ಸಮೀಕ್ಷೆಗಾಗಿ ಚತ್ರಸಾಲ ಗ್ರಾಮದಲ್ಲಿ ಮನೆಗಳಿಗೆ ಭೇಟಿ ನೀಡಿದ ವೇಳೆ ಬೆಳಗ್ಗೆ 11.30 ಕ್ಕೆ ಘಟನೆ ನಡೆದಿದೆ.ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ.

ನಾಗಶೆಟ್ಟಿ ಅವರು ಬುರಗಪಳ್ಳಿ ಗ್ರಾಮದವರು. 1998 ರಲ್ಲಿ ಶಿಕ್ಷಕರಾಗಿ ನೇಮಕಗೊಂಡಿದ್ದರು. ಮೃತರಿಗೆ ಪತ್ನಿ ಹಾಗೂ ಮೂವರು ಪುತ್ರರು ಇದ್ದಾರೆ. ಅಂತ್ಯಕ್ರಿಯೆ ಶುಕ್ರವಾರ ಸ್ವಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

WhatsApp Group Join Now
Telegram Group Join Now
Share This Article
error: Content is protected !!