ರಾಮದುರ್ಗ : ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಭಾಗ್ಯ ನಗರದ 22ನೆ ವಾರ್ಡಿನ ಚರಂಡಿಯ ಪರಿಸ್ಥಿತಿ ಹದಗೆಟ್ಟಿದೆ ಬಿದ್ದರೆ ಮುಗಿತು ಕೈಲಾಸ ಸೇರುದು ಗ್ಯಾರಂಟಿ.
ಈ ರಸ್ತೆ ಭಾಗ್ಯ ನಗರದ ಮುಖ್ಯ ರಸ್ತೆಯಾಗಿದೆ ಸುಮಾರು ವರ್ಷಗಳಿಂದ ಸರಿಯಾದ ರಸ್ತೆ ಇರಲಿಲ್ಲ ಈ ಮುಖ್ಯರಸ್ತೆಯಾದ ಹದಗೆಟ್ಟ ರಸ್ತೆ ಪ್ರಯಾಣಿಕರ ಪರದಾಟಯಾಗಿತ್ತು ಈಗ ಪಕ್ಕಾ CC ರಸ್ತೆ ಆಗಿದೆ ಇಲ್ಲಿ ಕೆಲವೊಂದು ಕಡೆಗೆ ಚರಂಡಿ ಮತ್ತು ಹೊಸ ಬಸ್ ನಿಲ್ದಾಣ ಪಕ್ಕ ರಸ್ತೆ ಕಾಮಗಾರಿ ಅರ್ಧ ಮುರ್ದ ಮಾಡಿ ಬಿಟ್ಟಿದ್ದಾರೆ.

ಈ ರಸ್ತೆ ಭಾಗ್ಯನಗರ ಮತ್ತು ಶ್ರೀಪತಿ ನಗರದ ಕಡೆಗೆ ಹೋಗುವ ಮುಖ್ಯ ರಸ್ತೆಯಾಗಿದೆ ಈ ರಸ್ತೆ ದುರಿಸ್ತಿಲ್ಲದೆ ಹಾಳಾಗಿ ಹೋಗಿತ್ತು ಮಳೆಯಾದರೆ ಹೇಳುದು ಬೇಡಾ ಮೊದಲೇ ತೆಗ್ಗು ದಿನ್ನು ರಸ್ತೆಯಾಗಿತ್ತು.
ಕರ್ನಾಟಕ ಸರ್ಕಾರ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಅನುದಾನದ ಒಂದು ಕೋಟಿ ರೊಪಾಯಿ ವೆಚ್ಚದಲ್ಲಿ ಕಾಮಗಾರಿ ಶಾಸಕ ಅಶೋಕ್ ಪಟ್ಟಣ ಭೂಮಿ ಪೂಜೆ ನೇರವರಿಸಿದರು.
ಈಗ ಈ ರಸ್ತೆ ಕಾಮಗಾರಿ ಸಂಪೂರ್ಣ CC ರಸ್ತೆಯಾಗಿ ಪರಿವರ್ತನೆಯಾಗಿದೆ ಆದರೆ, ಈ ರಸ್ತೆ ಕಾಮಗಾರಿ ಅವೈಜ್ಞಾನಿಕವಾಗಿದೆ, ಮೊದಲು ಚರಂಡಿ ಮತ್ತು ಕುಡಿಯುವ ನೀರಿನ ಮನೆ ಮನೆಗೆ ಪೈಪಲೈನ ಹಾಕಬೇಕು, ಅದಕ್ಕೆ ಮೊದಲು ಚರಂಡಿ ಮತ್ತು ಪೈಪಲೈನ್ ಮಾಡಬೇಕಿತ್ತು ನಂತರ ರಸ್ತೆ ಕಾಮಗಾರಿಯಾಗಬೇಕು, ಈಲ್ಲಿ ಚರಂಡಿ ಹಾಳಾಗಿ ಹೋಗಿದೆ ಚರಂಡಿ ತುಂಬ ಕಸ ಕಡ್ಡಿ ಪ್ಲಾಸ್ಟಿಕ್ ಬಾಟಲ್ ತುಂಬ ಸಿಲಿಕಿಕೊಂಡು ಚರಂಡಿ ನೀರು ರಸ್ತೆ ಮೇಲೆ ಬರತ್ತೆ ಮತ್ತು ಚರಂಡಿಯ ನೀರು ಮೆನೆಗಳಿಗೆ ನುಗ್ಗಿ ಮನೆಗಳು ಹಾಳಾಗಿ ಹೋಗಿದ್ದವೇ ಎಲ್ಲಿ ನೋಡಿದರು ಚರಂಡಿ ತುಂಬಿ ತುಳಕುತ್ತೆ.
ಇದರ ಭಾಗವಾಗಿ ಕೆಲವೊಂದು ಕಡೆಗೆ ಚರಂಡಿಗಾಗಿ ಕಾಮಗಾರಿ ಮೂಟಕುಗೋಳಸಿದ್ದಾರೆ, ಇನ್ನೂವರೆಗೂ ಚರಂಡಿ ಸರಿಯಾಗಿ ಆಗಲಿ ಅಂತಾ ಹಿಡಿಶಾಪ ಹಾಕುತ್ತಿರುವ ಸಾರ್ವಜನಿಕರು, ಕಾಮಗಾರಿ ಮುಗಿದು ಸುಮಾರು 6ರಿಂದ 8ತಿಂಗಳು ಕಳದು ಹೋಗಿದೆ ಇನ್ನೂವರೆಗೂ ಯಾವುದೆ ಚರಂಡಿಯ ಕಾಮಗಾರಿಯಾಗಿಲ್ಲ.
6ತಿಂಗಳ ಹಿಂದೆ ವಯಸ್ಸಾದ ಬಡ ಮಹಿಳೆ ಹಿಟ್ಟಿನ ಗಿರಣಿಗೆ ಹೋಗಿ ಬರುವಾಗ ಈ ಚರಂಡಿಯಲ್ಲಿ ಬಿದ್ದು ತನ್ನ ದುಡಿಯುವ ಕೈ ಮುರಿದುಕೊಂಡು ಮನೆಯಲ್ಲಿ ಇದ್ದಾಳೆ, ಸರಿಸುಮಾರು 8ರಿಂದ 10ಸಾವಿರ ರೊಪಾಯಿ ಆಸ್ಪತ್ರೆಗೆ ಖರ್ಚುಗಿತ್ತು, ಈ ಬಡ ಮಹಿಳೆ ಎಲ್ಲಿಂದ ಕೊಡಬೇಕು?.
ಸ್ಥಳೀಯ ಶಾಸಕರೇ ಎಲ್ಲಿದ್ದೀರಾ ಇಂಥಹ ಕಳಪೆ ಕಾಮಗಾರಿ ಬಗ್ಗೆ ಸ್ಥಳಕ್ಕೆ ಹೋಗಿ ಸ್ವಲ್ಪಾದರೂ ಪರಿಶೀಲನೆ ಮಾಡ್ತೀರೋ ಅಥವಾ ಇಲ್ವೋ? ಕಾದು ನೋಡೋಣ
ವರದಿ: ಮಂಜುನಾಥ ಕಲಾದಗಿ




