Ad imageAd image

ಮತಗಳ್ಳತನದ ದಾಖಲೆ ಇದ್ದರೆ ಬಿಡುಗಡೆ ಮಾಡಲಿ : ಬೊಮ್ಮಾಯಿ 

Bharath Vaibhav
ಮತಗಳ್ಳತನದ ದಾಖಲೆ ಇದ್ದರೆ ಬಿಡುಗಡೆ ಮಾಡಲಿ : ಬೊಮ್ಮಾಯಿ 
BOMMAI
WhatsApp Group Join Now
Telegram Group Join Now

ಬೆಂಗಳೂರು: ಮತಗಳ್ಳತನದ ಹೆಸರಿನಲ್ಲಿ ಕಾಂಗ್ರೆಸ್ ರಾಜಕೀಯ ಉದ್ದೇಶಕ್ಕಾಗಿ ಸಾಂವಿಧಾನಿಕ ಸಂಸ್ಥೆ ಮೇಲೆ ಆರೋಪ ಮಾಡುವುದು ಸರಿಯಲ್ಲ. ದಾಖಲೆ ಇದ್ದರೆ ಕ್ಷಣವೂ ಕಾಯದೆ ಬಿಡುಗಡೆ ಮಾಡಲಿ, ಆಟಂ ಬಾಂಬ್ ಇದ್ದರೆ ಬಿಡಿ, ನಿಮಲ್ಲೆ ಇದ್ದರೆ ಅಲ್ಲೇ ಸ್ಪೋಟ ಆಗಬಹುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸರವಾಜ ಬೊಮ್ಮಾಯಿ ಹೇಳಿದ್ದಾರೆ‌.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮತಗಳ್ಳತನದ ಹೆಸರಿನಲ್ಲಿ ಸಂವಿಧಾನ ಬದ್ದ ಸಂಸ್ಥೆಗಳ ಮೇಲೆ ಸಂಶಯ ಬರುವ ಹಾಗೆ ಕಾಂಗ್ರೆಸ್ ನಡುಕೊಳ್ಳುತ್ತಿದೆ. ಮೊದಲು ಇವಿಎಂ ಮೇಲೆ, ಈಗ ಚುನಾವಣಾ ಆಯೋಗದ ಮೇಲೆ ಅನುಮಾನ ವ್ಯಕ್ತಪಡೆಸುತ್ತಿದ್ದಾರೆ.

ಇವಿಎಂ ಹ್ಯಾಕ್ ಗೊಂದಲ ನಿವಾರಣೆಗೆ ಪ್ರಾತ್ಯಕ್ಷಿಕೆಗೆ ಕರೆದಾಗ ಕಾಂಗ್ರೆಸ್ ನವರು ಬಂದಿಲ್ಲ. ರಾಜ್ಯ ಸರ್ಕಾರದ ಅಧಿಕಾರಿಗಳೇ ರಾಜ್ಯದಲ್ಲಿ ಚುನಾವಣೆ ಮುಖ್ಯಸ್ಥರು. ರಾಜಕೀಯ ಪಕ್ಷಗಳಿಗೂ ಬೂತ್ ಗಳಲ್ಲಿ ವ್ಯಕ್ತಿ ನೇಮಕಕ್ಕೆ ಅವಕಾಶ ಇದೆ.

ಇದರಲ್ಲಿ ಚುನಾವಣಾ ಆಯೋಗ ಭಾಗಿ ಆಗಿದೆ ಅನ್ನುವುದು ಸರಿಯಲ್ಲ. ಮತದಾರರ ಹೆಸರು ಡಿಲೀಟ್ ಅಥವಾ ಸೇರ್ಪಡೆ ಆಗಿರುವ ಬಗ್ಗೆ ಅಂದೇ ಕೇಳಬೇಕಿತ್ತು ಎಂದು ಹೇಳಿದರು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಾ. ಮಂಜುನಾಥ್ ಚುನಾವಣೆ ವೇಳೆ ರಾಜಕೀಯಕ್ಕೆ ಬಂದವರು. ಚುನಾವಣೆ ಆಯೋಗದ ಮೇಲೆ ಆರೋಪ ಸರಿಯಲ್ಲ. ಅಧಿಕಾರಿಗಳ ಹಸ್ತಕ್ಷೇಪ ಇದ್ದರೆ ಸಾಕ್ಷಿ ಕೊಡಿ, ಚುನಾವಣಾ ಆಯೋಗದ ವಿಶ್ವಾಸರ್ಹತೆಗೆ ಧಕ್ಕೆ ತರುವ ಕೆಲಸ ಮಾಡಬಾರದು.

ಚುನಾವಣಾ ಆಯೋಗ ಏನಾಗಿದೆ ಹೇಳಿ ಎಂದು‌ ಕೇಳಿದೆ‌. ಆದರೆ, ಕಾಂಗ್ರೆಸ್ ಲಿಖಿತ ದೂರನ್ನೂ ಕೊಟ್ಟಿಲ್ಲ. ಇವಿಎಂ ಮೇಲಿನ ಆರೋಪಕ್ಕೆ ಕೋರ್ಟ್ ಉತ್ತರ ಕೊಟ್ಟಿದೆ.

ನರೇಂದ್ರ ಮೋದಿ ಮೂರನೆ ಬಾರಿ ಪ್ರಧಾನಿ ಆಗಿದ್ದು, ಆ ಆಘಾತ ಕಾಂಗ್ರೆಸ್ ಗೆ ಆಗಿದೆ. ಚುನಾವಣಾ ಆಯೋಗವೇ ಆರೋಪಿ ಎಂದು ಹೇಳುವ ಯತ್ನದಿಂದ ಸಂವಿಧಾನಕ್ಕೆ ಧಕ್ಕೆ ಯಾಗುವ ಸಾಧ್ಯತೆ ಇದೆ. ಆ ಕಾರಣಕ್ಕಾಗಿ ಬಿಜೆಪಿ ವಿರೋಧಿಸುತ್ತಿದೆ ಎಂದು ಹೇಳಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!