Ad imageAd image

ಶಾರ್ದೂಲ್ ಮೇಲೆ ನಂಬಿಕೆ ಇಲ್ಲದಿದ್ದರೆ ಅವರನ್ನು ಆಡಿಸಿದ್ದು ಯಾಕೇ?

Bharath Vaibhav
ಶಾರ್ದೂಲ್ ಮೇಲೆ ನಂಬಿಕೆ ಇಲ್ಲದಿದ್ದರೆ ಅವರನ್ನು ಆಡಿಸಿದ್ದು ಯಾಕೇ?
WhatsApp Group Join Now
Telegram Group Join Now

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಅವರನ್ನು ಸರಿಯಾಗಿ ಬಳಸಿಕೊಂಡಿಲ್ಲ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ನಾಯಕ ಶುಭ್‌ಮನ್ ಗಿಲ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಶಾರ್ದೂಲ್ ಅವರನ್ನು ಆಲ್‌ರೌಂಡರ್ ಆಗಿ ತಂಡದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸೇರಿಸಲಾಯಿತು. ಆದರೆ, ಅವರು ಬ್ಯಾಟಿಂಗ್‌ನಲ್ಲಿ ರನ್ ಗಳಿಸುವಲ್ಲಿ ವಿಫಲರಾದರು. ಬೌಲಿಂಗ್ ವಿಷಯಕ್ಕೆ ಬಂದರೂ, ಅವರು 6 ಓವರ್‌ಗಳಲ್ಲಿ ಒಂದೇ ಒಂದು ವಿಕೆಟ್ ಪಡೆಯದೆ 38 ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ತಂಡದ ಆಡಳಿತವು ಶಾರ್ದೂಲ್ ಅವರ ಬೌಲಿಂಗ್ ಮೇಲೆ ನಂಬಿಕೆ ಇಲ್ಲದಿದ್ದರೆ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದರಲ್ಲಿ ಅರ್ಥವಿಲ್ಲ ಎಂದು ಕಾರ್ತಿಕ್ ಹೇಳಿದರು.

‘ಶಾರ್ದೂಲ್ ಠಾಕೂರ್ ಅವರ ಬೌಲಿಂಗ್ ಮೇಲೆ ನಂಬಿಕೆ ಇಲ್ಲದಿದ್ದರೆ, ಅವರು ಅವರನ್ನು ಏಕೆ ಆಡಿಸುತ್ತಿದ್ದಾರೆ? ಅದು ಖಂಡಿತವಾಗಿಯೂ ಒಂದು ಸಮಸ್ಯೆ. ನೀವು ಒಬ್ಬ ಬೌಲರ್ ಅನ್ನು ನಂಬದಿದ್ದರೆ, ನೀವು ಅವರನ್ನು ಏಕೆ ಆಡಿಸಿದ್ದೀರಿ?. ಆದರೆ, ಇತ್ತ ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಗಮನ ಹರಿಸಬೇಕಿದೆ. ನೀವು ನಾಲ್ಕು ವೇಗದ ಬೌಲರ್‌ಗಳನ್ನು ಆಡಿಸಿದಾಗ, ನೀವು ಶಾರ್ದೂಲ್‌ಗೆ ಸಮಾನ ಅವಕಾಶವನ್ನು ನೀಡಲು ಆಗುವುದಿಲ್ಲ ಎಂಬುದು ನನಗೆ ಅರ್ಥವಾಗಿದೆ’ ಎಂದು ಕಾರ್ತಿಕ್ ಕ್ರಿಕ್‌ಬಜ್‌ನಲ್ಲಿ ಹೇಳಿದರು.

‘ಅವರು ಬೌಲಿಂಗ್ ಮಾಡಿದಾಗ, ಚೆನ್ನಾಗಿ ಮಾಡಿಲ್ಲ. ಆದರೆ, ನೀವು ಇಷ್ಟೊಂದು ಬೌಲಿಂಗ್ ಆಯ್ಕೆ ಇರುವಾಗಲೂ ಅವರಿಗೆ ಕೇವಲ ಆರು ಓವರ್‌ಗಳನ್ನು ನೀಡುವುದು ಉತ್ತಮವಲ್ಲ. ನನಗೆ ಶಾರ್ದೂಲ್ ಬಗ್ಗೆ ಬೇಸರವಾಗುತ್ತಿದೆ. ಆದರೆ, ಶುಭ್‌ಮನ್ ಏನು ಯೋಚಿಸುತ್ತಿದ್ದಾರೆಂದು ನನಗೆ ಅರ್ಥವಾಗುತ್ತದೆ. ಇತರ ಬೌಲರ್‌ಗಳು ಬೌಲಿಂಗ್ ಮಾಡುವಾಗ ಶಾರ್ದೂಲ್ ಕೂಡ ಇಂಗ್ಲೆಂಡ್ ಮೇಲೆ ಹೆಚ್ಚಿನ ಒತ್ತಡ ಸೃಷ್ಟಿಸಲು ಸಮರ್ಥರಾಗಿದ್ದಾರೆ’ ಎಂದು ಅವರು ಹೇಳಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!