ಕಾಗವಾಡ: ಕಬ್ಬಿನ ಬೆಲೆ ಆಗ್ತಹಿಸಿ ಕಾಗವಾಡ, ಶೇಡಬಾಳ ಪಟ್ಟಣದಲದಲಿ ರಸ್ತೆಗೆ ಟೈಯರ್ ಬೆಂಕಿ ಹಚ್ಚಿ ರೈತರು ಸೇರಿದ ವಿವಿಧ ಸಂಘನೆಯವರು ಪ್ರತಿಭಟಿಸಿದರು.ಇನ್ಜು ಕಾಗವಾಡ ಪಟ್ಟಣದಲ್ಲಿ ವಕೀಲರ ಸಂಘ ಸೇರಿ ಕನ್ನಡ ಪರ ಸಂಘಟನೆಯವರು ಧರಣಿ ನಿರತ ರೈತರಿಗೆ ಸಾಥ ನೀಡಿದರು.
ಇನ್ಬು ಈ ಸಮಯದಲ್ಲಿ ಮಾತನಾಡಿದ ಶೀತಲ ಪಾಟೀಲ. ಕರ್ನಾಟಕದಲ್ಲಿ ಕಳೆದ ಎಂಟು ದಿನದಿಂದ ರೈತರು ಬಿಸಿಲು, ಚಳಿ ಲೆಕ್ಕಿಸದೆ ಪ್ರತಿಭಟನೆ ನಡೆಸುತ್ತಿದ್ದು. ಇದೀಗ ಸರಕಾರ ಎಚ್ಚೇತ್ತುಗೊಂಡು ಬೆಂಬಲ ಬೆಲೆಯಾಗಿ 3500 ರೂ ಘೋಷಿಸಬೇಕು ಎಂದರು.
ಗಡಿಭಾಗದಲ್ಲಿ ರೈತರು ಮಹಾರಾಷ್ಟ್ರದಲ್ಲಿ ಸಕ್ಕರೆ ಕಾರ್ಖಾನೆ 3700 ರೂ ಕೊಡಿ ರೈತರು ಪಟ್ಟು ಹಿಡದಿದ್ದು, ಒಂದು ವೇಳೆ ಯೋಗ್ಯ ದರ ಕೊಟ್ಟರೆ ಈ ಭಾಗದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಕಳಿಸುವ ರೈತರು ಮಹಾರಾಷ್ಟ್ರಕ್ಕೆ ಕಳಿಸಲು ನಿರ್ಧಿಸಲಾಗುವುದು ಎಂದರು ಈ ಸಮಯದಲ್ಲಿ ರೈತರು ಎತ್ತಿನ ಬಂಡಿ, ಹಾಗೂ ಬಾರುಕೋಲು ರಸ್ತೆಗೆ ಬಾರಿಸುವ ಮೂಲಕ ಸರಕಾರ ಏಟು ಕೊಡ್ತಾ ಇದ್ದೇವೆ ಎಂದು ಪ್ರತಿಭಟಿಸಿದರು.
ವರದಿ: ಚಂದ್ರಕಾಂತ್ ಕಾಂಬಳೆ



