ಚಿಟಗುಪ್ಪ: ತಾಲ್ಲೂಕಿನ ಮುಸ್ತರಿ ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ಕರೆದಿದ್ದ ಸಾಮಾನ್ಯ ಸಭೆಯನ್ನು ಪಂಚಾಯಿತಿ ಪಿಡಿಒ ಮುಂದೂಡಿದ್ದಾರೆ ಎಂದು ಪಂಚಾಯಿತಿ ಉಪಾಧ್ಯಕ್ಷ ಮಂಜುನಾಥ್ ರೆಡ್ಡಿ ಆರೋಪಿಸಿದರು.
ಈ ಕುರಿತು ಮಾಧ್ಯಮ ಜೊತೆಗೆ ಮಾತನಾಡಿ ಅವರು,ಸಾಮಾನ್ಯ ಸಭೆಯಲ್ಲಿ ಕ್ರೀಯಾ ಯೋಜನೆ,ತೆರಿಗೆ ಮತ್ತು 15ನೇ ಹಣಕಾಸಿನ ಜಮಾ ಹಾಗೂ ಖರ್ಚು ವೆಚ್ಚದ ಬಗ್ಗೆ ಮಾಹಿತಿ ಕೇಳಿದರೆ ಸಾಕು ಸಾಮಾನ್ಯ ಸಭೆಯನ್ನು ಮುಂದಕ್ಕೆ ಹಾಕುತ್ತಿದ್ದಾರೆ.ಇವರು ಕಾಟಾಚಾರಕ್ಕಾಗಿ ಸಾಮಾನ್ಯ ಸಭೆ ನಡೆಸುತ್ತಿದ್ದಾರೋ ಅಥವಾ ಏನಾದರೂ ಮುಚ್ಚಿಡಲು ಪ್ರಯತ್ನ ಮಾಡುತ್ತಿದಾರೋ ಎಂಬ ಅನುಮಾನ ಮೂಡುತ್ತಿದೆ.
ಪಂಚಾಯತಿಗೆ ಸಂಬಂಧಪಟ್ಟ ದಾಖಲಾತಿ ಕೇಳಿದರೆ ತಮ್ಮ ಮನಬಂದಂತೆ ಮಾಡುತ್ತಿದ್ದಾರೆ. ಮುಸ್ತರಿ ಗ್ರಾಮದಲ್ಲಿ ಚರಂಡಿ ,ಸಿಸಿ ರಸ್ತೆ ಸೇರಿದಂತೆ ಸಾಕಷ್ಟು ಸಮಸ್ಯೆಗಳು ಇಲ್ಲಿಯ ಜನರು ಎದುರಿಸುತ್ತಿದ್ದಾರೆ.ಇಲ್ಲಿಯವರೆಗೆ ಏನು ಅಭಿವೃದ್ಧಿ ಮಾಡಿದ್ದೀರಿ.ಇಲ್ಲಿಯವರೆಗೆ ಎಷ್ಟು ಅನುದಾನ ಬಂದಿದೆ.ಎಷ್ಟು ಖರ್ಚು ಮಾಡಲಾಗಿದೆ ಎಂದು ಪಿಡಿಒ ಅವರಿಗೆ ಕೇಳಿದರೆ ಅವರು ಮಾಹಿತಿ ನೀಡುತ್ತಿಲ್ಲ.
ಬರೀ ಅಧ್ಯಕ್ಷರಿಗೆ ಮಾತ್ರ ಈ ಬಗ್ಗೆ ಹೇಳುತ್ತೇನೆ ಎನ್ನುತ್ತಿದ್ದಾರೆ.ಪಂಚಾಯಿತಿ ಸದಸ್ಯನಾಗಿ ನಾಲ್ಕು ವರ್ಷಗಳು ಕಳೆದಿವೆ.ಇಲ್ಲಿಯವರೆಗೆ ನನ್ನ ಬಡಾವಣೆಯಲ್ಲಿ ಒಂದು ಚರಂಡಿ ಮಾಡುವುದಕ್ಕೂ ಸಹ ಅನುದಾನ ಇವರು ನೀಡುತ್ತಿಲ್ಲ.ನಮ್ಮಗೆ ಚುನಾವಣೆಯಲ್ಲಿ ಮತ ನೀಡದ ಜನರಿಗೆ ಏನು ಉತ್ತರ ನೀಡಬೇಕು ಎಂದು ಪ್ರಶ್ನಿಸಿದರು.
ಈ ಕುರಿತು ಗ್ರಾಮ ಸದಸ್ಯರಾದ ಈರಪ್ಪ ತುಂಗಾವ,ಭೀಮರಾವ್ ಬಿರಾದರ್, ಮೈನೋದ್ದಿನ್ ಮಾತನಾಡಿ.
ಮೇಲಾಧಿಕಾರಿಗಳು ಈಕಡೆ ಗಮನ ಹರಿಸಿ ಯಾವ ಕಾರಣಕ್ಕಾಗಿ ಸಾಮಾನ್ಯ ಸಭೆ ಮುಂದೂಡಿಸುತ್ತಿದ್ದಾರೆ.ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.




