ಚಿಟಗುಪ್ಪ: ತಾಲ್ಲೂಕಿನ ತಾಳಮಡಗಿ ಗ್ರಾಮದ ಪಿಕೆಪಿಎಸ್ ಸಂಸ್ಥೆಯಲ್ಲಿ ಮಾಹಿತಿ ಕೇಳಿದರೆ ಸಂಸ್ಥೆ ಕಾರ್ಯದರ್ಶಿ ಕೊಡುತ್ತಿಲ್ಲ ಎಂದು ಗ್ರಾಮ ಮುಖಂಡರಾದ ಮಲ್ಲಿಕಾರ್ಜುನ ಪೊಲೀಸ್ ಪಾಟೀಲ ಆರೋಪ ಮಾಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಮಲ್ಲಿಕಾರ್ಜುನ ಪಾಟೀಲ,ಪಿಕೆಪಿಎಸ್ ಸಂಸ್ಥೆಯಲ್ಲಿ 2020 ರಿಂದ 2024 ವರೆಗೆ ಬಿಡಿಪಿ ಲೋನ್ ಕೊಟ್ಟಿರುವ ಬಗ್ಗೆ ಮಾಹಿತಿ ಹಕ್ಕು ಅಡಿಯಲ್ಲಿ ಮಾಹಿತಿ ಕೇಳಿದರೆ ಕಾರ್ಯದರ್ಶಿ ಕೊಡುತ್ತಿಲ್ಲ.
ಮಾಹಿತಿ ಕೊಡಲು ಬರುವುದಿಲ್ಲ,ಇದು ವಯಕ್ತಿಕ ದಾಖಲೆ ಇರುವುದರಿಂದ ಪತ್ರದಲ್ಲಿ ಕೊಡಲು ಅವಕಾಶವಿಲ್ಲ,ಬೇಕಾದರೆ ಸಂಸ್ಥೆಗೆ ಬಂದು ವೀಕ್ಷಣೆ ಮಾಡಬಹುದು ಎಂದು ಕಾರ್ಯದರ್ಶಿ ಹಿಂಬರಹ ನೀಡಿದ್ದಾರೆ.
ಮಾಹಿತಿ ಕೊಡಲು ಹಿಂದೇಟು ಹಾಕುತ್ತಿರುವುದನ್ನು ನೋಡಿದರೆ ಆ ಅವಧಿಯಲ್ಲಿನ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಬಿಡಿಪಿ ಲೋನಿನಲ್ಲಿ ಅವ್ಯವಹಾರ ಆಗಿರುವ ಅನುಮಾನ ಬರುತ್ತಿದೆ.
ಹೀಗಾಗಿ ಸಂಬಂಧ ಪಟ್ಟ ಅಧಿಕಾರಿಗಳು 2020 ರಿಂದ 2024 ವರೆಗಿನ ಬಿಡಿಪಿ ಲೋನ್ ಗಳ ಬಗ್ಗೆ ತನಿಖೆ ಕೈಗೊಳ್ಳಬೇಕು ಎಂದು ಹೇಳಿದರು.




