ಬೆಂಗಳೂರು: ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಹಿನ್ನೆಲೆಯಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲಿ ಉಪ ಚುನಾವಣೆಯ ಕಾವು ಜೋರಾಗಿದೆ. ಇನ್ನು ಸಿ.ಪಿ. ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಾಗಿರುವ ಹಿಂದೆ ಡಿಸಿಎಂ ಡಿ.ಕೆ. ಶಿವಕುಮಾರ್ ಸಿಡಿ ರಹಸ್ಯ ಇದೆ ಎನ್ನುವ ಆರೋಪ ಕೇಳಿ ಬಂದಿದೆ.
ಈ ಬಗ್ಗೆಇದೀಗ ಯೋಗೇಶ್ವರ್ ಅವರ ಪುತ್ರಿ ನಿಶಾ ಯೋಗೇಶ್ವರ್ ಪ್ರತಿಕ್ರಿಯಿಸಿದ್ದು, ಈ ಆರೋಪಗಳಿಗೆ ನೀವು ಸ್ಪಷ್ಟನೆ ನೀಡಬೇಕಿದೆ. ನನ್ನ ಸಿಡಿ ನಿಮ್ಮ ಬಳಿ ಇದ್ದರೆ ಯಾವುದೇ ರೀತಿ ಯೋಚನೆ ಮಾಡದೇ ರಿಲೀಸ್ ಮಾಡಿ ಡಿಕೆಶಿಯವರಿಗೆ ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ನಿಶಾ ಯೋಗೇಶ್ವರ್ ಅವರು, ಖಾಸಗಿ ಸುದ್ದಿ ವಾಹಿನಿಯಲ್ಲಿ ಸಿಡಿ ವಿಚಾರವಾಗಿ ಪ್ರಸ್ತಾಪವಾಗಿದ್ದು, ಪುತ್ರಿಯ ಮಾನ ರಕ್ಷಣೆಗಾಗಿ ಸಿ.ಪಿ. ಯೋಗೇಶ್ವರ್ ಅವರು ಕಾಂಗ್ರೆಸ್ ಸೇರುವ ನಿರ್ಧಾರ ತೆಗೆದುಕೊಂಡರೇ ಎಂಬ ಮಾತುಗಳು ಕೇಳಿಬರುತ್ತಿವೆ
ಮಗಳ ಸಿಡಿ ಬಳಸಿಕೊಂಡು ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸಿ.ಪಿ.ಯೋಗೇಶ್ವರ್ ಅವರನ್ನು ಕರೆ ತಂದಿದ್ದಾರೆ ಎಂದು ನಿಮ್ಮ ಮೇಲೆ ಆರೋಪಗಳು ಕೇಳಿಬಂದಿವೆ. ಇದು ತಮಾಷೆಯ ವಿಷಯವಲ್ಲ, ಇದಕ್ಕೆ ನೀವು ದಯವಿಟ್ಟು ಸ್ಪಷ್ಟನೆ ನೀಡಬೇಕು ಎಂದು ಡಿ.ಕೆ. ಶಿವಕುಮಾರ್ ಅವರನ್ನು ಒತ್ತಾಯಿಸಿದ್ದಾರೆ.
ಡಿ.ಕೆ. ಶಿವಕುಮಾರ್ ಸರ್ ನಿಮ್ಮ ಮೇಲೆ ಈ ರೀತಿಯಾದ ಆರೋಪ ಇದೆ. ನೀವು ನನ್ನ ಸಿಡಿ ಇಟ್ಟುಕೊಂಡು ನನ್ನ ತಂದೆಯನ್ನು ನಿಮ್ಮ ಪಕ್ಷಕ್ಕೆ ಕರೆದುಕೊಂಡಿದ್ದೀರಿ ಎನ್ನುವ ಆರೋಪ ಇದೆ. ನೀವು ಯಾವುದಕ್ಕೂ ಹೆದರುವುದು ಬೇಡ, ನಿಮ್ಮ ಬಳಿ ಸಿಡಿ ಇದ್ದರೆ ಹಿಂಜರಿಯದೇ ಸಿಡಿ ಬಿಡುಗಡೆ ಮಾಡಿ ಸರ್ ಎಂದು ನಿಶಾ ಯೋಗೇಶ್ವರ್ ಮನವಿ ಮಾಡಿದ್ದಾರೆ.
ನನ್ನ ಅಗ್ನಿ ಪರೀಕ್ಷೆ ನಡೆಯುತ್ತಿದೆ. ಆ ಸಿಡಿ ಇಲ್ಲ ಎನ್ನುವುದಾದರೆ ಅದನ್ನೂ ಜನರಿಗೆ ಬಂದು ತಿಳಿಸಿ ಸರ್. ಇದು ದೊಡ್ಡ ಆರೋಪ ನಿಮ್ಮ ಮೇಲಿದೆ. ನೀವು ದೊಡ್ಡವರು ಸರ್, ನಿಮ್ಮಲ್ಲಿ ಸಿಡಿ ವಿಷಯ ಮಾಮೂಲಿ, ಆದರೆ ನೀವು ಹೆಣ್ಣು ಮಕ್ಕಳನ್ನು ಇಂತಹ ವಿಷಯನ್ನು ಎಳೆಯುತ್ತಿದೀರಾ ಎಂದು ನನಗೆ ಶಾಕ್ ಆಗುತ್ತಿದೆ. ನೀವು ಒಬ್ಬ ತಂದೆ. ನಿಮಗೂ ಹೆಣ್ಣು ಮಕ್ಕಳಿದ್ದಾರೆ.
ಸರ್, ನಮ್ಮ ಪೀಳಿಗೆಗೆ ಸ್ಪಷ್ಟತೆ ಬೇಕು. ಆ ಸ್ಪಷ್ಟತೆಯನ್ನ ನೀವೇ ಕೊಡಿ ಸರ್. ನನ್ನ ಸಿಡಿ ನಿಜವಾಗಿಯೂ ನಿಮ್ಮ ಬಳಿ ಇದ್ರೆ, ಬಿಡುಗಡೆ ಮಾಡಿ. ನಿಮ್ಮ ಉತ್ತರಕ್ಕೆ ನಾನು ಕಾಯುತ್ತಿರುತ್ತೇನೆ ಎಂದು ನಿಶಾ ಯೋಗೇಶ್ವರ್ ಹೇಳಿದ್ದಾರೆ.
ಯೋಗೇಶ್ವರ್ ವಿರುದ್ಧವೂ ಆಕ್ರೋಶ
ಮಗಳಿಗೋಸ್ಕರ ನಾನು ಕಾಂಗ್ರೆಸ್‌ಗೆ ಹೋದೆ ಎಂದು ನೀವು ಹೇಳಿದ್ದೀರಿ. ಬೆಳಗ್ಗೆ ನನ್ನ ಸಿಡಿ ವಿಷಯ ಬಂದಿದೆ, ಇದನ್ನೂ ನೀವೇ ಮಾಧ್ಯಮಗಳಿಗೆ ಹಾಕಿಸಿದ್ದೀರಿ. ನೀವು ಎಷ್ಟು ನನ್ನನ್ನು ಉಪಯೋಗಿಸಿಕೊಳ್ಳುತ್ತೀರಿ.
ಬರೀ ನನ್ನ ಪ್ರಾಪರ್ಟಿ ಮೇಲೆ ಯಾಕೆ ನೀವು ಕೇಸ್ ಹಾಕುತ್ತೀರಾ?, ನನ್ನ ಪ್ರಾಪರ್ಟಿ ಮಾರಿಕೊಳ್ಳಲು ಯಾಕೆ ಅಡ್ಡಿಪಡಿಸುತ್ತೀರಿ? ನಾನು ಹೇಗೆ ಬದುಕಲಿ ಎಂದು ಸಿ.ಪಿ.ಯೋಗೇಶ್ವರ್ ಅವರ ವಿರುದ್ಧ ಪುತ್ರಿ ನಿಶಾ ಯೋಗೇಶ್ವರ್ ಕಿಡಿಕಾರಿದ್ದಾರೆ.