ಕುಡಿಯಲು ನೀರು ಕೊಡಿ ನಾವು ಮನುಷ್ಯರೆ ನೀರಿಗಾಗಿ ದಲಿತ
ಮಹಿಳೆಯರ ಪರದಾಟ ಗಮನ ಕೊಡದ ಇರಸವಾಡಿ ಪಿಡಿಓ
ಯಳಂದೂರು: ಚಾಮರಾಜನಗರ ತಾಲ್ಲೂಕಿನ ಇರಸವಾಡಿ ಗ್ರಾಮದ ದಲಿತರ ಕಾಲೋನಿಯಲ್ಲಿ ದಲಿತ ಮಹಿಳೆಯರು ಖಾಲಿ ಬಿಂದಿಗೆಯನ್ನು ಇರಿಸಿ ಪಿಡಿಒಗೆ ಇಡೀ ಶಾಪ ಹಾಕಿ ಶನಿವಾರ ಆಕ್ರೋಶ ವ್ಯಕ್ತಪಡಿಸಿದರು.
ದಲಿತರ ಕಾಲೋನಿಯಲ್ಲಿ ಕಳೆದ 30ರಿಂದ 40 ದಿನಗಳು ಕಳೆದರು ಕುಡಿಯುವ ನೀರಿಲ್ಲದೇ ಬೇರೆ ಸಮುದಾಯದ ಬೀದಿಗಳಿಗೆ ದಲಿತ ಮಹಿಳೆಯರು ತೆರಳಿ ನೀರು ತರುವಂತಾಗಿದೆ ಹಾಗೂ ಇಲ್ಲಿನ ನಿವಾಸಿಗಳು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ.
ಈ ಸಂಬಂಧ ಗ್ರಾಮಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಅನೇಕ ಬಾರಿ ದೂರು ನೀಡಿದರು ಯಾವುದೇ ಕ್ರಮವನ್ನು ಕೈಗೊಳ್ಳದೆ ತಮ್ಮ ನಿರ್ಲಕ್ಷ್ಯ ತನ ತೋರುತ್ತಿದ್ದಾರೆ.
ವಾಟರ್ ಮನ್ ಗೆ ಹೇಳಿದರೆ ಪಿಡಿಒ ಕೇಳಿ. ಪಿಡಿಒ ಕೇಳಿದರೆ ವಾಟರ್ ಮನ್ ಗೆ ಹೇಳಿದಿನಿ ಅವರು ಮಾಡಿಲ್ಲವೆಂದು ಹೇಳುತ್ತಾರೆ.
ಬೇರೆ ಸಮುದಾಯದ ಪರ ಇಲ್ಲಿ ನ ಪಿಡಿಒ ಹೆಚ್ಚು ಗಮನಹರಿಸುತ್ತಾರೆ. ದಲಿತರು ಅಂದರೆ ಯಾವುದೇ ಕೆಲಸವನ್ನು ಮಾಡದೆ ತಾರತಮ್ಯ ಮಾಡುತ್ತಿದ್ದಾರೆಂದು ದಲಿತ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.
ನೀರಿನ ಸಮಸ್ಯೆಯನ್ನು ಬಗೆಹರಿಸದಿದ್ದರೆ ಚಾಮರಾಜನಗರ ಜಿಲ್ಲಾಡಳಿತ ಭವನದ ಮುಂದೆ ಖಾಲಿ ಬಿಂದಿಗೆಯನ್ನು ಇರಿಸಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವರದಿ: ಸ್ವಾಮಿ ಬಳೇಪೇಟೆ