ಸರ್ವಧರ್ಮ ಸಮಾನತೆ ಯಿಂದ ನೋಡುವ ಎಮ್ ಡಿ ಆರ್ ಬ್ರದರ್ಸ್
ಯುಗಾದಿ ಹಾಗೂ ಪವಿತ್ರ ರಂಜಾನ್ ಹಬ್ಬದ ಇಫ್ತಾರ್ ಕೂಟ.
ಹಟ್ಟಿ ಚಿನ್ನದ ಗಣಿ: ಸರ್ವಧರ್ಮ ಸಮನ್ವಯ ಸಾರುವ ಹಟ್ಟಿ ಚಿನ್ನದ ಗಣಿಯ ಮದೀನಾ ಮಸೀದಿ ಕಾಕಾನಗರ ಹಟ್ಟಿ ಪಟ್ಟಣದಲ್ಲಿ ಮುಸ್ಲಿಂ ಸಮುದಾಯದ ಕಾಂಗ್ರೆಸ್ ಮುಖಂಡರು ಮಾಜಿ ಎಪಿಎಂಸಿ ನಿರ್ದೇಶಕರು ಅಮ್ಜದ್ ಸೆಟ್, ಹಟ್ಟಿ ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಸಂಧಾನಿ ಎಂ ಡಿ ಇವರು.ಹಟ್ಟಿ ಹಾಗೂ ಸುತ್ತಮುತ್ತಲಿನ ಎಲ್ಲಾ ಧರ್ಮಿಯರನ್ನು.ಜಾತಿ ಮತ ಪಂಥವೆನ್ನದೆ ಎಲ್ಲರಿಗೂ ಆಹ್ವಾನ ನೀಡಿದ್ದು ಈ ಶುಭ ಸಂದರ್ಭದಲ್ಲಿ ಎಲ್ಲರೂ ಭಾಗಿಯಾಗಿ.
ದೂದ್ ಕುರ್ಮಾ – ಬೇವು ಬೆಲ್ಲದ ಜೊತೆಗೆ ಹೋಳಿಗೆ ತುಪ್ಪ ಹಾಗೂ ವಿವಿಧ ತರಹದ ಹಣ್ಣು ಹಂಪಲುಗಳು ಹಾಗೂ ವಿಶೇಷವಾಗಿ ಖರ್ಜೂರ ಸೇರಿದಂತೆ ಹಲವು ಖಾದ್ಯಗಳನ್ನು ಇಫ್ತಿಯಾರ್ ಕೂಟದಲ್ಲಿ ಏರ್ಪಡಿಸಲಾಗಿತ್ತು.
ಇಫ್ತಾರ್ ಕೂಟದಲ್ಲಿ ಹಿಂದೂ ಮುಸ್ಲಿಂ ಕ್ರೈಸ್ತರು ಎನ್ನದೆ ಎಲ್ಲಾ ಧರ್ಮಿಯರು ಪ್ರೀತಿಯ ಭೋಜನ ಸವಿದರು,
ವಿಶೇಷವಾಗಿ ಲಿಂಗಸುಗೂರು ಕ್ಷೇತ್ರದ ಮಾಜಿ ಶಾಸಕರಾದ ಡಿ ಎಸ್ ಹುಲಿಗೇರಿ ಹಾಗೂ ಬ್ಲಾಕ್ ಅಧ್ಯಕ್ಷ ಗೋವಿಂದ ನಾಯಕ ಹಾಗೂ ಅನೇಕ ಕಾಂಗ್ರೆಸ್ ಮುಖಂಡರು.ಇತರ ಪಕ್ಷಗಳ ನಾಯಕರು ಮತ್ತು ಮುಸ್ಲಿಂ ಬಾಂಧವರು ಈ ಇಪ್ತರ್ ಕೂಟದಲ್ಲಿ ಭಾಗವಹಿಸಿದ್ದರು.ಯುನೈಟೆಡ್ ಮೆತೊಡಿಸ್ಟ್ ಚರ್ಚಿನ ರೆವರೆಂಡ್ ದೇವದನ್ ಆನಂದಪ್ಪ ಮಾತನಾಡಿ,ವಿವಿಧತೆಯಲ್ಲಿ ಏಕತೆ ಸಾರುವ ಜಗತ್ತಿನ ಏಕೈಕ ದೇಶ ಭಾರತ.ಇಲ್ಲಿ ಪ್ರೀತಿ.ಸೌಹಾರ್ದತೆಯಿಂದ ಸಹಬಾಳ್ವೆ ಮಾಡುತ್ತಿರುವ ನಾವು ಯಾವುದೇ ಕಾರಣಕ್ಕೂ ಪರಸ್ಪರ ದ್ವೇಷ ಮನೋಭಾವನೆ ತೋರಬಾರದು ಎಂದು ಮಾತನಾಡಿದರು.ಅಮ್ಜದ್ ಸೇಟ್ ಹಾಗೂ ಕುಟುಂಬದ ಸದಸ್ಯರು ಇಪ್ತಾರ್ ಕೂಟವನ್ನು ಪ್ರಾರ್ಥನೆ ಭಕ್ತಿ ಭಾವದಿಂದ ನೆರವೇರಿಸಿ ಕೊಟ್ಟರು ಈ ಸಂದರ್ಭದಲ್ಲಿ ನರಸಪ್ಪ ಯಾದವ್, ಶಂಶುದ್ದೀನ್ ವಕೀಲರು, ಮೌಲಾಲಿ ಮಾಸ್ಟರ್, ಶಾಂತಪ್ಪ ಆನ್ವರಿ, ಎಚ್ ಎ ಲಿಂಗಪ್ಪ, ಶ್ರೀನಿವಾಸ್ ಮಧುಶ್ರೀ, ಮೌನೇಶ್ ಕಾಕಾ ನಗರ, ಯೋಗಪ್ಪ ದೊಡ್ಮನಿ, ಊರಿನ ಮುಖಂಡರು ಪ್ರೀತಿ ಬಾಂಧವರು ಉಪಸಿತರಿದ್ದರು.
ವರದಿ: ಶ್ರೀನಿವಾಸ ಮಧುಶ್ರೀ ಹಟ್ಟಿ ಚಿನ್ನದ ಗಣಿ