ಚೇಳೂರು : ದೇಹ ಹಾಗೂ ಮನಸ್ಸಿನ ಶುದ್ಧಿಯ ಜೊತೆಗೆ ಸತ್ಯ, ನಿಷ್ಠೆಯಿಂದ ಕಾಯಕದಲ್ಲಿ ತೊಡಗಲು ರಂಜಾನ್ ಹಬ್ಬ ಪ್ರೇರಣೆ ನೀಡುತ್ತದೆ ಎಂದು ಪಿಡಿಒ ಕೆ ವೆಂಕಟಾಚಲಪತಿ ಹೇಳಿದರು.
ತಾಲೂಕಿನ ಪಟ್ಟಣದ ಎರಡನೇ ವಾರ್ಡ್ ನಲ್ಲಿರುವ ಮದೀನಾ ಮಾಸ್ ಜಿದ್ ನಲ್ಲಿ ಸೋಮವಾರ ಆಯೋಜಿಸಲಾಗಿದ್ದ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿ ಮಾತನಾಡಿದ ಅವರು
ಇಫ್ತಾರ್ ಕೂಟವು ಹಿಂದೂ ಮುಸ್ಲಿಮರ ಸೌಹಾರ್ದತೆಯ ಸಂಕೇತವಾಗಿದೆ. ಹಿಂದುಗಳು ಹಾಗೂ ಮುಸ್ಲಿಂ ಭಾಂದವರು ಒಟ್ಟಾಗಿ ಊಟ ಮಾಡಿದಾಗ ಪರಸ್ಪರ ಪ್ರೀತಿ ವಿಶ್ವಾಸ ಹಾಗೂ ಭಾವೈಕ್ಯತೆಯು ಹೆಚ್ಚಾಗಿ ನಾವೆಲ್ಲರೂ ಒಂದೇ ಎನ್ನುವ ಭಾವೈಕ್ಯತೆಯನ್ನು ಸಾರುತ್ತದೆ ಎಂದರು.
ಪಿಎಸ್ಐ ಹರೀಶ್ ಮಾತನಾಡಿ ಜನರು ಒಳ್ಳೆಯವರಾದರೆ ಸಮಾಜವು ಒಳ್ಳೆಯದಾಗುತ್ತದೆ. ಈ ನಿಟ್ಟಿನಲ್ಲಿ ಧರ್ಮಗಳ ಸಂದೇಶಗಳನ್ನು ತಿಳಿಯಲು ನಾವೆಲ್ಲರೂ ಪ್ರಯತ್ನಿಸಬೇಕು, ಇಂತಹ ಸೌಹಾರ್ದ ಸಭೆಗಳು ಸಮಾಜಕ್ಕೆ ಮಾದರಿಯಾಗಲಿ” ಎಂದರು.
ದೇಶದಲ್ಲಿ ಹಿಂದೂ ಮುಸ್ಲಿಮರ ಮಧ್ಯೆ ಸಮಾಜದಲ್ಲಿ ಯಾವುದೇ ಕೋಮುಗಲಭೆಗಳು ನಡೆಯದೆ ಸೌಹಾರ್ದತೆಯಿಂದ ಜೀವನವು ಸಂತೋಷಮಯವಾಗಿ ಸಾಗಲಿ ಎಂಬುದು ನನ್ನ ಆಶಯವಾಗಿದೆ ಎಂದು ಸುರೇಂದ್ರ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ಪಿ ಆರ್ ಚಲಂ,ಮದೀನಾ ಮಸೀದಿಯ ಅಧ್ಯಕ್ಷರಾದ ಅಲೀಂ ಭಾಷಾ, ಮೆಕ್ಯಾನಿಕ್ ನಯಾಜ್,ಜೆ ಎನ್ ಜಾಲಾರಿ,ಸುರೇಂದ್ರ, ಅಪ್ಪಿ, ಸುಬ್ಬಿರೆಡ್ಡಿ,ಕೆಜಿ ವೆಂಕಟರಮಣ,ಕಾಪಿ ಪ್ರಸಾದ್, ಚೇತನ್ , ರಾಮಚಂದ್ರ, ಖಾದರ್ ವಲಿ, ಸಾದಿಕ್ ಸೈಬರ್,ಅಜರುದ್ದೀನ್,ನಿಜಾಮ್, ಚಾಂದ್ ಭಾಷಾ, ಶಬೀರ್, ಮಾ ಭಾಷಾ, ಸ್ಟುಡಿಯೋ ಮುನ್ನ ಕಲೀಂವುಲ್ಲಾ, ಇನಾಯತುಲ್ಲ, ಎಸ್ ಪಿ ನವಾಜ್,ರಹಮತುಲ್ಲಾ, ಅಮಾನುಲ್ಲಾ,ಮೆಕ್ಯಾನಿಕ್ ಮುಜಾಹೀದ್,ಅಸ್ಲಾಂ, ಇಲಿಯಾಜ್, ಯಾರಬ್, ಹುಸೇನಾ, ಬಾಬಾಜಾನ್, ಇತರರು ಹಾಜರಿದ್ದರು.
ವರದಿ :ಯಾರಬ್. ಎಂ.