Ad imageAd image

ವೀರಶೈವ ಲಿಂಗಾಯತ ಸಮಾಜ ವತಿಯಿಂದ ಇಫ್ತಾರ ಕೂಟ

Bharath Vaibhav
ವೀರಶೈವ ಲಿಂಗಾಯತ ಸಮಾಜ ವತಿಯಿಂದ ಇಫ್ತಾರ ಕೂಟ
WhatsApp Group Join Now
Telegram Group Join Now

ಚಿಂಚೋಳಿ :ಪಟ್ಟಣದ ಚಂದಾಪುರದ ಪಟೇಲ್ ಕಾಲೋನಿಯ ಮದರ್ಸಾದಲ್ಲಿ ಮುಸ್ಲಿಂ ಬಾಂಧವರ ಪವಿತ್ರ ರಂಜಾನ ಹಬ್ಬ ಅಂಗವಾಗಿ ತಾಲೂಕಾ ವೀರಶೈವ ಲಿಂಗಾಯತ ಸಮಾಜ ವತಿಯಿಂದ ಇಫ್ತಾರ ಕೂಟ ಹಮ್ಮಿಕೊಳ್ಳಲಾಯಿತು ಕಾರ್ಯಕ್ರಮ ಉದ್ದೇಶಿಸಿ ಮುಸ್ಲಿಂ ಸಮಾಚಾರ ಹಿರಿಯ ಮುಖಂಡರಾದ ಅಬ್ದುಲ್ ಬಾಸಿದ, ಅವರು ಮಾತನಾಡಿ ತಾಲೂಕಾ ವೀರಶೈವ ಲಿಂಗಾಯತ ಸಮಾಜ ವತಿಯಿಂದ ಇಫ್ತಾರ ಕೂಟ ಪ್ರತಿ ವರ್ಷ ನೀಡುತ್ತಿದೆ ಬಹಳ ಸಂತೋಷವಾಗುತ್ತದೆ ಯಾಕೆಂದರೆ ಚಿಂಚೋಳಿ ತಾಲೂಕಿನಲ್ಲಿ ಹಿಂದೂ ಮತ್ತು ಮುಸ್ಲಿಂ ಬಾಂಧವ್ಯ ಅಣ್ಣತಮ್ಮದಂತೆ ಇದೆ ಅದೇ ರೀತಿ ಇಂತಹ ಕಾರ್ಯಕ್ರಮಗಳು ಮಾಡೋರಿಂದ ಹಿಂದೂ ಮತ್ತು ಮುಸ್ಲಿಂ ಬಾಂಧವ್ಯ ಒಗ್ಗಟ್ಟಿನಿಂದ ಇದ್ದೇವೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಬಿಜೆಪಿಯ ಹಿರಿಯ ಮುಖಂಡರಾದ ಕೆ ಎಂ ಬಾರಿ, ಅಖಿಲ ಭಾರತ ಮಹಾಸಭಾ ತಾಲೂಕಾಧ್ಯಕ್ಷರಾದ ಶರಣು ಪಾಟೀಲ್ ಮೋತಕಪಳ್ಳಿ, ಅವರು ಮಾತನಾಡಿ ಕಾರ್ಯಕ್ರಮದಲ್ಲಿ ತಾಲೂಕ ಅರೋಗ್ಯ ಅಧಿಕಾರಿ ಡಾ.ಮಹಮ್ಮದ್ ಗಫರ್,ಪುರಸಭೆ ನಿಕಟ ಪೂರ್ವ ಅಧ್ಯಕ್ಷರಾದ ಆನಂದಕುಮಾರ ಟೈಗರ, ಬಿಜೆಪಿ ಪಕ್ಷದ ಹಿರಿಯ ಮುಖಂಡರಾದ ಗೋಪಾಲರಾವ್ ಕಟ್ಟಿಮನಿ, ವೀರಶೈವ ಲಿಂಗಾಯತ ಸಮಾಜದ ತಾಲೂಕ ಅಧ್ಯಕ್ಷರಾದ ಸಂಜೀವಕುಮಾರ ಪಾಟೀಲ್, ತಾಲೂಕ ವೀರಶೈವ ಸಮಾಜದ ಉಪಾಧ್ಯಕ್ಷರಾದ ಪ್ರದೀಪ್ ದೇಶಮುಖ್,ವೀರಶೈವ ಲಿಂಗಾಯತ ಸಮಾಜದ ಹಿರಿಯ ಮುಖಂಡರಾದ ಶಿವಶರಣಪ್ಪ ಡೆಂಗಿ, ರೇವಣಸಿದ ದಾದಾಪುರ, ವಿಜಯಕುಮಾರ ಬೆಳಕೇರಿ, ಚಂದ್ರಶೇಖರ್ ಪರ,ಸಿದ್ದಣ್ಣ ಪಾಟೀಲ,ಚನ್ನವೀರ ಗೌಡನೂರ್ ದೇಗಲಮಡಿ, ಸೂರಿ ಸುಂಕದ, ಮುಸ್ಲಿಂ ಸಮಾಜದ ಮುಖಂಡರಾದ ಮಕಸೂದ ಸೌದಾಗರ್, ಸತ್ತರ್ ಖುರೇಷಿ, ಸೈಯದ್ ಶಬ್ಬೀರ್, ಮಹಮ್ಮದ ನಯುಂ ಪಟೇಲ್, ಕಲಿಲ ಪಟೇಲ್, ಮತ್ತೀನ್ ಸೌದಾಗರ್,ಚಾಂದ, ಬಬ್ಬು ಖಾನ್, ಅಝರ್ ಸೌದಾಗರ್, ಶೇಕ್ ಫಾರಿನ್, ಜಿಯಾ, ಮತ್ತು ಅನೇಕ ಮಡಿನ ಮಸ್ಜಿದ್ ಕಮಿಟಿಯ ಸದಸ್ಯರು ಇಫ್ತಾರ ಕೂಟದಲ್ಲಿ ಭಾಗಿಯಾಗಿದ್ದರು.

ವರದಿ :ಸುನಿಲ್ ಸಲಗರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!