ಹುಬ್ಬಳ್ಳಿ:ಧಾನ್ಯ ಮತ್ತು ಅಕ್ಕಿಗಳ ವ್ಯಾಪಾರ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ನಗರದ ಎಂಡಬ್ಲೂಬಿ ಗ್ರುಪ್ ತಂತ್ರಜ್ಞಾನ ಕ್ಷೇತ್ರದಲ್ಲೂ ಸಾಧನೆ ಮಾಡಿದ್ದು, ಎಂಡಬ್ಲೂಬಿ ಟೆಕ್ನಾಲಜೀಸ್ ಅಂತರಾಷ್ಟ್ರೀಯ ಮಟ್ಟದ ಐಜಿಎ-ಇಂಟರ್ ನ್ಯಾಷನಲ್ ಗ್ಲೋರಿ ಅವಾರ್ಡ್-2025 ಪ್ರಶಸ್ತಿ ಪಡೆದುಕೊಂಡ ಸಾಧನೆ ಮಾಡಿದೆ.
ಈ ಕುರಿತು ಮಾತನಾಡಿದ ಸಂಸ್ಥೆಯ ಮುಖ್ಯಸ್ಥ ರಮೇಶ ಬಾಫ್ನಾ, ಜೂನ್ 30 ರಂದು ಮುಂಬೈನ ಖಾಸಗಿ ಹೊಟೆಲ್ ನಲ್ಲಿ ನಡೆದ ಸಮಾರಂಭದಲ್ಲಿ ಎಮ್ ಡಬ್ಲೂ ಬಿ ಟೆಕ್ನಾಲಜೀಸ್ ಘಟಕದಿಂದ ಅಭಿವೃದ್ಧಿ ಪಡಿಸಲಾದ ಇಜಿ ಪಗಾರ್ -ಪೆರೋಲ್ ಸಾಫ್ಟವೇರ್ ಅನ್ನು ಅತ್ಯುತ್ತಮ ಪೆರೋಲ್ ಸಾಫ್ಟ್‌ವೇರ್ ಎಂದು ಗುರುತಿಸಿ ಪ್ರತಿಷ್ಟಿತ ಇಂಟರ್ನ್ಯಾಷನಲ್ ಗ್ಲೋರಿ ಅವಾರ್ಡ್ – 2025 ನ್ನು ನೀಡಿ ಗೌರವಿಸಲಾಗಿದೆ ಎಂದು ತಿಳಿಸಿದರು.

ಇನ್ನೂ ಈ ಪ್ರಶಸ್ತಿಯನ್ನು ಎಮ್ ಡಬ್ಲೂ ಬಿ ಗ್ರೂಪ್ ನಿರ್ದೇಶಕ ಗೌತಮ್ ಬಾಫ್ನಾ ಅವರು ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರಿಂದ ಪ್ರಶಸ್ತಿ ಸ್ವೀಕಾರ ಮಾಡಿದ್ದಾರೆ. ಇದು ಉತ್ತರ ಕರ್ನಾಟಕ ಮತ್ತು ಇಡೀ ಎಮ್ ಡಬ್ಲೂ ಬಿ ಸಮೂಹಕ್ಕೆ ಅತ್ಯಂತ ಹೆಮ್ಮೆಯ ವಿಚಾರವಾಗಿದೆ ಎಂದರು.
ಇನ್ನು ಇಜಿ ಪಗಾರ್ -ಪೆರೋಲ್ ಸಾಪ್ಟ್ ವೇರ್ ದೇಶದಾದ್ಯಂತ ಪೆರೋಲ್ ಮತ್ತು ಮಾನವ ಸಂಪನ್ಮೂಲದ ಎಲ್ಲ ಕಾರ್ಯಗಳನ್ನು ಅತ್ಯುತ್ತಮ ರೀತಿಯಲ್ಲಿ ನಿರ್ವಹಣೆ ಮಾಡಲು ಸಹಕಾರಿಯಾಗಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ದಿನೇಶ ಜೈನ್, ಮುಖೇಶ್ ಬಾಫ್ನಾ, ಗೌತಮ್ ಬಾಪ್ನಾ ಪಾಲ್ಗೊಂಡಿದ್ದರು.
ವರದಿ:ಸುಧೀರ್ ಕುಲಕರ್ಣಿ




