ಕೇನ್ಸ್’ ವಿಶ್ವ ಪ್ರತಿಷ್ಠಿತ ಚಲನಚಿತ್ರೋತ್ಸವ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇಲ್ಲಿ ವಿಶ್ವದ ಸಿನಿಗಣ್ಯರು ತಮ್ಮ ದೇಶವನ್ನು ಪ್ರತಿನಿಧಿಸುತ್ತಾರೆ. ಅದರಂತೆ ಕನ್ನಡದ ಖ್ಯಾತ ನಟಿ ಪ್ರಣಿತಾ ಸುಭಾಷ್ ಕೂಡಾ ಭಾಗಿಯಾಗಿ, ಚಂದನವನದ ಖ್ಯಾತಿ ಹೆಚ್ಚಿಸಿದ್ದಾರೆ.
ಕೇನ್ಸ್‌ನ ‘ಭಾರತ್ ಪೆವಿಲಿಯನ್’ನಲ್ಲಿ (Bharat Pavilion at Cannes) ಕನ್ನಡ ನಟಿ ಪ್ರಣಿತಾ ಸುಭಾಷ್ ಭಾಗವಹಿಸಿರುವುದು ಭಾರತದ ಜಾಗತಿಕ ಚಲನಚಿತ್ರ ಪ್ರಭಾವವನ್ನು ಎತ್ತಿಹಿಡಿದಿದೆ. ತಮ್ಮ ಕಿರಿ ವಯಸ್ಸಿನಲ್ಲೇ ಬಹುಭಾಷಾ ಚಲನಚಿತ್ರಗಳ ಮೂಲಕ ಭಾರತೀಯ ಚಿತ್ರರಂಗದಲ್ಲಿ ಬಹುಮುಖ ಪ್ರತಿಭೆ ಪ್ರದರ್ಶಿಸಿರುವ ಪ್ರಣಿತಾ, ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಚಲನಚಿತ್ರ ವೈವಿಧ್ಯತೆಯನ್ನು ಪ್ರತಿಪಾದಿಸಿದ್ದಾರೆ.




