Ad imageAd image

ಜುಲೈ 19ಕ್ಕೆ ಇಳಕಲ್ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ

Bharath Vaibhav
ಜುಲೈ 19ಕ್ಕೆ ಇಳಕಲ್ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ
WhatsApp Group Join Now
Telegram Group Join Now

ರೋಟರಿ ಕ್ಲಬ್ ಸಂಸ್ಥೆಯ ಸನ್ 2025 26 ನೇ ಸಾಲಿನ ನೂತನ ಅಧ್ಯಕ್ಷರಾಗಿ ಮಹಾಂತೇಶ ಬಿ ಜಕ್ಕಲಿ, ಕಾರ್ಯದರ್ಶಿಯಾಗಿ ಶರಣಬಸಪ್ಪ ಎಂ ಸಜ್ಜನ, ಖಜಾಂಚಿಯಾಗಿ ಬಸವರಾಜ ಆರ್ ಯಲ್ಲಟ್ಟಿ , ಆವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ರೋಟರಿ ಕ್ಲಬ್ ಸದಸ್ಯರಾದ ಮುತ್ತಣ್ಣ ಬೆಂಗಳೂರು ಸುದ್ದಿಗೋಷ್ಠಿಯ ಮೂಲಕ ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ಮಹಾಂತೇಶ ಜಕ್ಕಲಿ ನಮ್ಮ ಸಂಸ್ಥೆ ಇಪ್ಪತ್ತನೇ ವರ್ಷಕ್ಕೆ ಪಾದರ್ಪಣೆ ಮಾಡಿದ ಸಂದರ್ಭದಲ್ಲಿ ನನಗೆ ಸನ್ 2025- 2026 ಸಾಲಿನ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ ಮತ್ತು ಕಾರ್ಯದರ್ಶಿಯಾಗಿ ಶರಣಬಸಪ್ಪ ಸಜ್ಜನ್ ಖಜಾಂಚಿಯಾಗಿ ಬಸವರಾಜ ಯಲ್ಲಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ನೂತನ ಪದಗ್ರಹಣ ಸಮಾರಂಭ ಜುಲೈ 19 ಶನಿವಾರ ದಂದು ಸಾಯಂಕಾಲ 5:30 ಗಂಟೆಗೆ ಸ್ಥಳ ಬಸವ ಪ್ಯಾಲೇಸ್ ನಲ್ಲಿ ನಡೆಯಲಿದೆ ಮತ್ತು ಮ,ನಿ, ಪ್ರ ಗುರು ಮಹಾಂತ ಸ್ವಾಮೀಜಿಗಳು ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠ ಇಳಕಲ್ ಹಾಗೂ ಅನಿಲ್ ಸಿ ಜೈನ್ ಜಿಲ್ಲಾ ಗವರ್ನರ್ ರೋಟರಿ ಕ್ಲಬ್ ಸೌತ್ ಹುಬ್ಬಳ್ಳಿ,ಮತ್ತು ನಾರಾಯಣ ಎಚ್ ಹೆರಕಲ್ ರೋಟರಿ ಕ್ಲಬ್ ಬಾಗಲಕೋಟೆ ಇವರ ಉಪಸ್ಥಿತಿಯಲ್ಲಿ ಸಮಾರಂಭ ನಡೆಯಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಇಳಕಲ್ ನಿಕಟ ಪೂರ್ವ ಅಧ್ಯಕ್ಷ ಬಾಬು ಎಸ್ ರಾಜೋಳಿ ಮತ್ತು ಕಾರ್ಯದರ್ಶಿ ಬಸಲಿಂಗಪ್ಪ ತೋಟದ ಖಜಾಂಚಿ ಮತ್ತು ಸದಸ್ಯರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!