ಸೇಡಂ: ದಿನಾಂಕ: 30-10-2025 ರಂದು ತಾಲ್ಲೂಕಿನ ಮದನ ಮತ್ತು ಮುಧೋಳ ಗ್ರಾಮದ ರಸ್ತೆಯಲ್ಲಿ ಗಸ್ತು ಮಾಡುತ್ತಿದ್ದಾಗ ಮದನ ಗ್ರಾಮದಲ್ಲಿ ಶಾಮಪ್ಪ ತಂದೆ ಸಾಬಪ್ಫ ಎಂಬುವರ ಮನೆಯಲ್ಲಿ ಅಕ್ರಮ ಕಲಬೆರಿಕೆ ಸೇಂದಿ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಹೋಗಿ ಮನೆಯನ್ನು ಶೋಧನೆ ಮಾಡಿದಾಗ ಅಕ್ರಮವಾಗಿ ಸುಮಾರು 200 ಲೀಟರ ಸೇಂಧಿಯನ್ನು ಸಂಗ್ರಹಣೆ ಮಾಡಿರುವುದು ಮತ್ತು ಅವರದೆ ಹೊಸ ಮನೆಯನ್ನು ಶೋಧನೆ ಮಾಡಿದಾಗ ಸದರಿ ಮನೆಯಲ್ಲಿ ಒಂದು ಪ್ಲಾಸ್ಟಿಕ ಚೀಲದಲ್ಲಿ 26 ಕೆ.ಜಿ. ಸಿ.ಹೆಚ್ ಪೌಡರ್ ಇರುವುದು ಕಂಡುಬಂದಿದೆ ಪ್ರಯಕ್ತ 1 ಶಾಂತಪ್ಪ ತಂದೆ ಸಾಬಪ್ಫ ಮತ್ತು 2 ಶರಣಪ್ಪ ತಂದೆ ಶಾಮಪ್ಪ ಎಂಬುವರ ಮೇಲೆ ಕರ್ನಾಟಕ ಅಬಕಾರಿ ಕಾಯ್ದೆ ಪ್ರಕಾರ ಗುನ್ನೆ ಸಂಖ್ಯೆ: 29/2025-26 ನೇದರಡಿ ಘೋರ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಸೇಡಂ ಅಬಕಾರಿ ನಿರೀಕ್ಷಕರಾದ ಓಂಪ್ರಕಾಶ್ ಮಠಪತಿ ಅವರು ತಿಳಿಸಿದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




