ಬಾಗಲಕೋಟ :ಬಾದಾಮಿ ತಾಲೂಕ ಪಟ್ಟಣದ ಶ್ರೀ ವೀರ ಪುಲಕೇಶಿ ಎಂಬ ಸಂಸ್ಥೆಯಲ್ಲಿ ಇಂದು ದಿನಾಂಕ.5.8.2024 ಸೋಮುವಾರ ರಂದು ಚಾಲುಕ್ಯರ ನಾಡಿನ ದೊರೆ ಇಮ್ಮಡಿ ಪುಲಕೇಶಿ ಮಹಾರಾಜರ ಮೂರ್ತಿ ಪ್ರತಿಷ್ಟಾಪನೆ ಡಿಗ್ರಿ ಕಾಲೇಜ್ ಎದುರು ಗಾರ್ಡನಲ್ಲಿ ಐತಿಹಾಸಿಕ ಸ್ಥಳ ಬಾದಾಮಿಯ ಒಂದನೇ ಗುಹೆ ನಿರ್ಮಾಣ ಮಾಡಿ ಅದರ ಎದುರು ಚಾಲುಕ್ಯರ ದೊರೆಯ ಮೂರ್ತಿ ಪ್ರತಿಷ್ಠಾಪನೆ ಮಾಡಿದರು. ನಗರದ ಬಸವೇಶ್ವರ ವೃತ್ತದಿಂದ ಮೆರವಣಿಗೆ ಮೂಲಕ ಸಕಲ ವಾಧ್ಯ ಮೇಳದೊಂದಿಗೆ ಧ್ವನಿ ವರ್ಧಕ ಹಚ್ಚಿ ಅದ್ದೂರಿಯಾಗಿ ಡೊಳ್ಳು ಕುಣಿತ, ವಿದ್ಯಾರ್ಥಿಗಳು ಕೋಲಾಟ ಆಡುವುದರ ಮೂಲಕ, ಮೆರವಣಿಗೆ ಮಾಡಿ ಕಾರ್ಯಕ್ರಮ ಯಶಸ್ವಿ ಗೊಳಿಸಿದರು.
ಬಾದಾಮಿ ಸಮಸ್ತ ಜನ ತಿರುಗಿ ನೋಡುವ ಒಂದು ಸಾಹಸ ಮಾಡಿದ ಒಂದು ದೊಡ್ಡ ಒಂದು ಸಾಹಸ ಅಂದರು ತಪ್ಪಾಗಲಿಕ್ಕಿಲ್ಲಾ ಸಂಸ್ಥೆಗೆ ಒಂದು ಮೆಚ್ಚುಗೆ ಕಾರ್ಯ ಮಾಡಿದೆ ಎನ್ನುವದು ಜನರಲ್ಲಿ ಕೇಳಿ ಬರ್ತಾ ಇರುವ ಹೆಮ್ಮೆಯ ವಿಷಯ ವಾಗಿದೆ.ಚಿತ್ರಕಲಾ ಶಿಕ್ಷಕ ಮೌನೇಶ್ ಕಂಬಾರ ಅವರಿಗೆ ಕಾರ್ಯಕ್ರಮ ದಲ್ಲಿ ಮೌನೇಶ್ ಹಾಗೂ ಅವರ ತಂದೆ ತಾಯಿಗೆ ಶಾಲ್ ಹಾಕಿ ಸನ್ಮಾನ ಮಾಡಲಾಯಿತು.ಈ ಸಂದರ್ಭದಲ್ಲಿ ಶ್ರೀ ವಿರಪುಲಕೇಶಿ ಸಂಸ್ಥೆಯ ಪ್ರತಿಯೊಬ್ಬ ಸಿಬ್ಬಂದಿಗಳು, ಪಧಾಧಿಕಾರಿಗಳು, ಶಾಲೆಯ ವಿದ್ಯಾರ್ಥಿಗಳು ಭಾಗಿಯಾಗಿದ್ದರು,ಬಾದಾಮಿ ಪೊಲೀಸ್ ಇಲಾಖೆ ಕ್ರೈಮ್ ಪಿ, ಎಸ್, ಐ ವಿಜಯ್ ರಾಠೋಡ, ಪಿ, ಎಸ್, ಐ ವಿಠ್ಠಲ್ ನಾಯಿಕ್,ಹೊಳೆ ಹೂಚೆಶ್ವರ ಮಠಸ್ವಾಮಿಗಳು. ಎ. ಸಿ. ಪಟ್ಟಣ.ಎಮ್. ಕೆ. ಪಟ್ಟಣಶೆಟ್ಟಿ.ಮಹಾಂತೇಶ್ ಮಮದಾಪುರ. ಬಿ. ಜೆ. ಪಿ. ಜಿಲ್ಲಾ ಅಧ್ಯಕ್ಷರು ಎಸ್. ಟಿ. ಪಾಟೀಲ್.ನಾಗರಾಜ್ ಕಾಚಟ್ಟಿ ಬಿ ಜೆ ಪಿ ಬಾದಾಮಿ ಘಟಕದ ತಾಲೂಕ ಅಧ್ಯಕ್ಷರು ಉಪಸ್ಥಿತರಿದ್ದರು.
ವರದಿ:ಎಸ್. ಎಸ್. ಕವಲಾಪುರಿ