ಬಹುದಿನಗಳ ಜನತೆಯ ಬೇಡಿಕೆಯಂತೆ ಚಾಲುಕ್ಯ ಚಕ್ರವರ್ತಿ ಇಮ್ಮಡಿ ಪುಲಿಕೇಶಿ ಭವ್ಯ ಪುತ್ತಳಿಗೆ ಚಾಲುಕ್ಯ ಉತ್ಸವದ ಸಂದರ್ಭಲ್ಲಿ ಶಂಕುಸ್ಥಾಪನೆ ನೆರವೇರಲಿದ್ದು, ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇರವೇರಿಸಲಿದ್ದಾರೆ ಹಾಗೂ ಮೂರ್ತಿಯ ಸಂಪೂರ್ಣ ರೋಪುರೋಶ ಹಾಗೂ ಪ್ರತಿಷ್ಠಾಪನೆಯ ಜವಾಬ್ದಾರಿಯನ್ನು ಶಾಸಕ ಭೀಮಸೇನ ಬಿ ಚಿಮ್ಮನಕಟ್ಟಿ ಅವರು ವಹಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ ಅವರು ತಿಳಿಸಿದರು.

“ಇಮ್ಮಡಿ ಪುಲಿಕೇಶಿ ಅವರಂತಹ ಮಹಾನ್ ಚಕ್ರವರ್ತಿ ಅವರ ಪುತ್ತಳಿ ಬಾದಾಮಿಯಲ್ಲಿ ನಿಲ್ಲುವುದು ನಮ್ಮ ಜಿಲ್ಲೆಯ ಹೆಮ್ಮೆ. ಈ ಕೆಲಸವನ್ನು ಯಾವುದೇ ತಡೆಯಿಲ್ಲದೆ, ಗುಣಮಟ್ಟದೊಂದಿಗೆ ಪೂರ್ಣಗೊಳಿಸಲು ಸರ್ಕಾರದ ಪರವಾಗಿ ನಾನು ಸಂಪೂರ್ಣ ಬೆಂಬಲ ನೀಡುತ್ತೇನೆ. ಮುಂದಿನ ಚಾಲುಕ್ಯ ಉತ್ಸವದ ವೇಳೆಗೆ ಪುತ್ತಳಿ ಉದ್ಘಾಟನೆಯಾಗುವಂತೆ ಎಲ್ಲ ವ್ಯವಸ್ಥೆ ಮಾಡಲಾಗುವುದು” ಎಂದು ಶಾಸಕರಾದ ಬಿ.ಬಿ ಚಿಮ್ಮನಕಟ್ಟಿ ಅವರು ವಹಿಸಲಿದ್ದಾರೆ.
ಜಿಲ್ಲಾಧಿಕಾರಿ, ಉತ್ಸವ ಸಮಿತಿ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಬಾದಾಮಿ ಗುರು ಹಿರಿಯರು ಯುವಕ ಮಿತ್ರರು ಮುಖಂಡರು ಉಪಸ್ಥಿತರಿದ್ದರು.
ವರದಿ: ಎಸ್. ಎಸ್. ಕವಲಾಪುರಿ




