Ad imageAd image

ತಕ್ಷಣದಿಂದಲೇ ಮಾಧ್ಯಮಗಳಲ್ಲಿ ಸೈರನ್ ಸೌಂಡ್ ನಿಲ್ಲಿಸಿ : ಕೇಂದ್ರ ಸರ್ಕಾರ ಆದೇಶ 

Bharath Vaibhav
ತಕ್ಷಣದಿಂದಲೇ ಮಾಧ್ಯಮಗಳಲ್ಲಿ ಸೈರನ್ ಸೌಂಡ್ ನಿಲ್ಲಿಸಿ : ಕೇಂದ್ರ ಸರ್ಕಾರ ಆದೇಶ 
Breaking News
WhatsApp Group Join Now
Telegram Group Join Now

ನವದೆಹಲಿ : ಭಾರತ-ಪಾಕ್ ನಡುವೆ ಉದ್ವಿಗ್ನತೆ ಹೆಚ್ಚಾಗಿದ್ದು, ಇದರ ನಡುವೆಯೇ ಸೂಕ್ಷ್ಮವಾದ ಸಲಹೆಯನ್ನು ಕೇಂದ್ರ ಸರ್ಕಾರ ಮಾಧ್ಯಮಗಳಿಗೆ ತಿಳಿಸಿದೆ.ಯಾವುದೇ ಮಾಧ್ಯಮಗಳಲ್ಲಿ ಸೈರನ್ ಸೌಂಡ್ ಅನ್ನು ತಮ್ಮ ಕಾರ್ಯಕ್ರಮದಲ್ಲಿ ಬಳಸದಂತೆ ಆದೇಶಿಸಿದೆ.

ಸಮುದಾಯ ಜಾಗೃತಿ ಅಭಿಯಾನಗಳನ್ನು ಹೊರತುಪಡಿಸಿ, ತಮ್ಮ ಕಾರ್ಯಕ್ರಮಗಳಲ್ಲಿ ನಾಗರಿಕ ರಕ್ಷಣಾ ವಾಯುದಾಳಿ ಸೈರನ್‌ಗಳ ಸೌಂಡ್​​​​​​​​ಗಳನ್ನು ಬಳಸದಂತೆ ಕೇಂದ್ರ ಗೃಹ ಸಚಿವಾಲಯ ಸಲಹೆ ನೀಡಿದೆ.

ಶುತ್ರುರಾಷ್ಟ್ರ ಪಾಕಿಸ್ತಾನ ಪದೇ ಪದೇ ಭಾರತವನ್ನು ಕೆಣಕುವ ದುಸ್ಸಾಹವನ್ನ ಮುಂದುವರಿಸಿದೆ. ಕಳೆದ ರಾತ್ರಿಯೂ ಸೆಡೆ ಪಾಕಿಸ್ತಾನ ಭಾರತದ 3 ರಾಜ್ಯಗಳನ್ನು ಟಾರ್ಗೆಟ್ ಮಾಡಿದ್ದು, ಪಾಕ್ ಡ್ರೋನ್ಗಳಿಗೆ ಮಣ್ಣು ಮುಕ್ಕಿಸಿದ ಭಾರತ ಪಾಪಿಸ್ತಾನಕ್ಕೆ ಕಳೆದ ರಾತ್ರಿಯೇ ತಕ್ಕ ಶಾಸ್ತಿ ಮಾಡಿದೆ. ಇದರ ಮಧ್ಯೆ ಮಾಧ್ಯಮಗಳಿಗೆಂದೇ ಕೇಂದ್ರ ಗೃಹ ಇಲಾಖೆ ಕೆಲ ಸೂಚನೆ ನೀಡಿದೆ.

ಗಡಿಯಲ್ಲಿ ಭಾರತ-ಪಾಕ್ ನಡುವೆ ಉದ್ವಿಗ್ನತೆ ನೆಲೆಸಿರುವುದರಿಂದ ರಕ್ಷಣಾ ಪಡೆಗಳ ಕಾರ್ಯಾಚರಣೆಗಳು ಹಾಗೂ ಭದ್ರತಾಪಡೆಗಳ ಚಲನವಲನಗಳ ಕುರಿತು ನೇರ ಪ್ರಸಾರ ಮಾಡಬಾರದು.

ಸೇನಾ ಕಾರ್ಯಾಚರಣೆಗಳ ಬಗ್ಗೆ LIVE ಕವರೇಜ್ ಮಾಡಬೇಡಿ ಎಂದು ಕೇಂದ್ರ ರಕ್ಷಣಾ ಸಚಿವಾಲಯ ಎಲ್ಲಾ ಮಾಧ್ಯಮಸಂಸ್ಥೆಗಳು, ಡಿಜಿಟಲ್ ಪ್ಲಾಟ್‌ಫಾರಂಗಳು ಹಾಗೂ ವರದಿಗಾರರಿಗೆ ಸೂಚನೆ ನೀಡಿದೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಎಚ್ಚರಿಕೆ ನೀಡಿರುವ ಕೇಂದ್ರ ರಕ್ಷಣಾ ಸಚಿವಾಲಯ, ಸೂಕ್ಶ್ಮವಾದ ಮಾಹಿತಿಗಳನ್ನು ಬಹಿರಂಗಪಡಿಸುವುದರಿಂದ ಯೋಧರು, ಸೇನಾ ಕಾರ್ಯಾಚರಣೆಗಳಿಗೆ ತೊಂದರೆಯಾಗಲಿದೆ ಎಂದು ಹೇಳಿದೆ.

ಕಾರ್ಗಿಲ್ ಯುದ್ಧ, 26/11 ಮುಂಬೈ ಭಯೋತ್ಪಾದಕ ದಾಳಿ ಹಾಗೂ ಕಂದಹಾರ್ ವಿಮಾನ ಅಪಹರಣ ಪ್ರಕರಣ ಸಮಯದಲ್ಲಿ ಮಾಧ್ಯಮಗಳ ವರದಿಯಿಂದ ಸಿಕ್ಕಾಪಟ್ಟೆ ಸಮಸ್ಯೆಯಾಗಿತ್ತು. ಆದ್ದರಿಂದ ಮತ್ತದೇ ತಪ್ಪು ಮರುಕಳಿಸದಂತೆ ನೋಡಿಕೊಳ್ಳಿ ಎಂದು ಕೇಂದ್ರ ರಕ್ಷಣಾ ಸಚಿವಾಲಯ ಸೂಚನೆ ನೀಡಿದೆ.

WhatsApp Group Join Now
Telegram Group Join Now
Share This Article
error: Content is protected !!