ಮಸ್ಕಿ :– ಒಳ ಮೀಸಲಾತಿ ಜಾರಿಗಾಗಿ ಐಕ್ಯ ಹೋರಾಟ ಸಮಿತಿ. ಮಸ್ಕಿ. ಜಿಲ್ಲಾ ರಾಯಚೂರು ವತಿಯಿಂದ. ಬೃಹತ್ ರ‍್ಯಾಲಿ ಹಾಗೂ ಬ್ರಮರಾಂಬ ಕಲ್ಯಾಣ ಮಂಟಪದಲ್ಲಿ ಬಹಿರಂಗ ಸಭೆ..
ಗೌರವಾನ್ವಿತ ಮುಖ್ಯಮಂತ್ರಿಗಳೇ.. ಒಳ ಮೀಸಲಾತಿ ಅನುಷ್ಠಾನ 100% ಪಕ್ಕ ಎಂದು ನಿರೀಕ್ಷಿಸಿದ ಅಸ್ಪೃಶ್ಯ ಸಮುದಾಯಗಳು ಇಂದು ಅತ್ಯಂತ ಆತಂಕದಿಂದ ನೋಡುಬೇಕಾಗಿದೆ ಚುನಾವಣೆಗೂ ಮುನ್ನ ಘೋಷಿಸಿದ ಚಿತ್ರದುರ್ಗದ ಡಿಕ್ಲರೇಷನ್ ಎತ್ತ ಹೋಯಿತು ಕಳೆದ 10 ವರ್ಷಗಳಿಂದಲೂ ಒಳ ಮೀಸಲಾತಿ ಹೋರಾಟಗಾರರು ತಮ್ಮನ್ನು ಭೇಟಿಯಾದಗಲೆಲ್ಲ ನಾನೇ ಮೀಸಲಾತಿ ಜಾರಿ ಮಾಡೋದು ಕಣಯ್ಯ ಎಂಬ ಸಹಜ ಉತ್ತರ ನೀಡುತ್ತಿದ್ದ ತಾವು ಕಳೆದ ಒಂದುವರೆ ತಿಂಗಳಿನಿಂದ ಒಳ ಮೀಸಲಾತಿ ಕುರಿತಂತೆ ಅನುಸರಿಸುತ್ತಿರುವ ಮೃದುದೋರಣೆಯ ನಡೆಯು ನೊಂದ ಸಮುದಾಯಗಳಿಗೆ ಮತ್ತೆ ಅನಿರ್ದಿಷ್ಟಾವಧಿ ಮುಂದೂಡಲ್ಪಡುತ್ತದೆ
ಎಂಬ ಅನುಮಾನ ಮೂಡಿದೆ ಇದುವರೆಗೂ ಕಾನೂನಿನ ತೊಡಕಿದೆ ಎಂದು ಏಳುತ್ತ ಬಂದ ಎಲ್ಲಾ ಸರ್ಕಾರಗಳಿಗೆ ಆಗಸ್ಟ್ 1ರ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಚಂದ್ರ ಚೂಡ್ ರವರ ನೇತೃತ್ವದ ಏಳು ಜನರ ಪೀಠವು ಐತಿಹಾಸಿಕವಾದ ತೀರ್ಪನ್ನು ನೀಡುವ ಮೂಲಕ ರಾಜ್ಯ ಸರ್ಕಾರಗಳಿಗೆ ಪರಮಾಧಿಕಾರವನ್ನು ನೀಡಿರುವುದು ಇದುವರೆಗಿನ ಎಲ್ಲಾ ತರಹದ ಊಹಾ ಪೋಹಗಳಿಗೆ ತೆರೆ ಬಿದ್ದಿದೆ. ಏಳು ಜನರ ಪೀಠದ ನ್ಯಾಯಾಧೀಶರ ತೀರ್ಪಿನ ನಂತರವೂ ಮತ್ತೊಂದು ಸಮಿತಿ ಮತ್ತೊಬ್ಬ ತಜ್ಞರ ಸಲಹೆ ಬೇಕೆನ್ನುವುದು ಬೇಸರದ ವಿಚಾರವಾಗಿದೆ ಹಾಗಾಗಿ ಅನಗತ್ಯ ಕೆನೆ ಪದರದ ನೆಪದಲ್ಲಿ ಮೊಸರಲ್ಲಿ ಕಲ್ಲು ಹುಡುಕುವ. ದುಷ್ಕೃತ್ಯಕ್ಕೆ ಅವಕಾಶ ನೀಡದೇ ವಿನಾಕಾರಣ ವಿಳಂಬ ಧೋರಣೆಗೆ ಅವಕಾಶ ನೀಡದೆ ಈ ಕೂಡಲೇ ಒಳ ಮೀಸಲಾತಿ ನೀತಿಯನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸುವ ಐತಿಹಾಸಿಕ ನಿರ್ಧಾರಕ್ಕೆ ತಮ್ಮ ಸರ್ಕಾರ ದೇಶದಲ್ಲೆ ಮೊದಲು ಮಾದರಿಯಾಗಲಿ.
ಅವಕಾಶ ವಂಚಿತ ಸಮುದಾಯಗಳು ಬೀದಿ ಹೋರಾಟಕ್ಕೆ ಮುಂದಾಗದಿರಲಿ ಎಂಬ ಎಚ್ಚರ ವಹಿಸಿಬೇಕೆಂಬ ಈ ಬೃಹತ್ ಜನಾಂದೋಲನದ ಆಗ್ರಹವಾಗಿದೆ..ಈ ಸಂದರ್ಭದಲ್ಲಿ ಹಿರಿಯ ಹೋರಾಟಗಾರರಾದ – ಶ್ರೀ ಹರಿರಾಮ್. ಹೈಕೋರ್ಟ್ ವಕೀಲರು. ಬೆಂಗಳೂರು -ಬಾಸ್ಕರ್. ಪ್ರಸಾದ್. ಬೆಂಗಳೂರು.. ಸಿ.ದಾನಪ್ಪ ನೀಲಗಲ್.. ಬಾಲ ಸ್ವಾಮಿ ಕೊಡ್ಲಿ.. ಅಂಬಣ್ಣ ಹಾರೋಲಿ.. ಆರ್. ಮಾನಸಯ್ಯ.. ಎಂ.ಆರ್. ಬೇರಿ..ಎಂ. ವಿರುಪಾಕ್ಷಿ.. ಎಚ್.ಎನ್.ಬಡಿಗೇರ್.ಜೆ ಬಿ. ರಾಜು.. ಹನುಮಂತಪ್ಪ ಮುದ್ದಾಪುರ.. ಹುಲುಗಪ್ಪ ಉಪ್ಪದೊಡ್ಡಿ.. ಅಶೋಕ್ ನಂಜಲದಿನ್ನಿ.. ಇನ್ನು ಅನೇಕರಿದ್ದರು.
ವರದಿ:- ಬಸವರಾಜ. ಬುಕ್ಕನಹಟ್ಟಿ.