ರೊಣ: ದೂರು ನೀಡಲು ಬಂದ ವ್ಯಕ್ತಿಯನ್ನು ಬೆದರಿಸಿದ ಸಿಪಿಐ, ಆತನಿಂದಲೇ 15 ಲಕ್ಷ ರೂ ಬೇಡಿಕೆ ಇಟ್ಟಿರುವಂತಹ ಘಟನೆ ನಗರಲ್ಲಿ ನಡೆದಿದೆ.
ಗದಗ ಜಿಲ್ಲೆಯ ರೋಣ ಸಿಪಿಐ (CPI) ಸಿದ್ದಪ್ಪ ಬೀಳಗಿ ವಿರುದ್ಧ ಗಜೇಂದ್ರಗಡದ ರಾಘವೇಂದ್ರ ರಾಠೋಡ ಎಂಬಾತ ಗಂಭೀರ ಆರೋಪ ಮಾಡಿದ್ದಾರೆ.
ಈಗಾಗಲೇ ಹೆದರಿಸಿ 3 ಲಕ್ಷ ರೂ. ಹಣ ವಸೂಲಿ ಮಾಡಿದ್ದು, ಉಳಿದ ಹಣಕ್ಕಾಗಿ ನಿತ್ಯ ಕಿರುಕುಳ ನೀಡುತ್ತಿದ್ದಾರೆ.
ಈ ಬಗ್ಗೆ SP ಕಚೇರಿಗೆ ಲಿಖಿತ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದ್ದಾರೆ. ಸದ್ಯ ಸಿದ್ದಪ್ಪ ಬೀಳಗಿ ಕಿರುಕುಳಕ್ಕೆ ರಾಘವೇಂದ್ರ ಕಂಗಾಲಾಗಿದ್ದಾರೆ.
ಘಟನೆ ಹಿನ್ನಲೆರಾಘವೇಂದ್ರ ರಾಠೋಡಗೆ ಇನ್ಸ್ಟಾಗ್ರಾಂನಲ್ಲಿ ಓರ್ವ ಯುವತಿ ಪರಿಚಯವಾಗಿದ್ದಾಳೆ.
ದಿನಕಳೆದಂತೆ ಪರಿಚಯ ಬಳಿಕ ಪ್ರೀತಿಗೆ ತಿರುಗಿತ್ತು. ಬಳಿಕ ಕಷ್ಟ ಹೇಳಿಕೊಂಡ ಯುವತಿಗೆ ರಾಘವೇಂದ್ರ ಹಂತ ಹಂತವಾಗಿ ಬರೋಬ್ಬರಿ 25 ಲಕ್ಷ ರೂ ನೀಡಿದ್ದಾರೆ. ಬಳಿಕ ಹಣ ವಾಪಸ್ ಕೇಳಿದರೆ ಯುವತಿ ನೀಡಿಲ್ಲ. ಹೀಗಾಗಿ ರಾಘವೇಂದ್ರ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದನು.
ವರದಿ: ರಾಜು ಮುಂಡೆ