ಅಥಣಿ: 1975 ರಲ್ಲಿ ದೇಶದ ಪ್ರಧಾನಮಂತ್ರಿಯಾದ ಶ್ರೀಮತಿ ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿ ಘೋಷಣೆ ಮಾಡುವ ಉದ್ದೇಶ ಅಂದು ದೇಶದಲ್ಲಿ ಪ್ಯಾಸಿಸ್ಟ್ ಗುಂಪುಗಳ ಚಟುವಟಿಕೆಗಳು ನಮ್ಮ ದೇಶದಲ್ಲಿರುವ ಕೋಮುವಾದ ಸಂಘಟನೆಗಳು, ಕೋಮುವಾದ ವ್ಯಕ್ತಿಗಳ ಜೊತೆಗೆ ಸೇರಿ ದೇಶದಲ್ಲಿ ಪ್ರಜಾಪ್ರಭುತ್ವ ಕಗ್ಗೊಲೆ ಮಾಡುವ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು, ಇವರಿಂದ ಆರ್ಥಿಕ ದಕ್ಕೆಯನ್ನು ಉಂಟು ಮಾಡುವುದು, ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿಕೊಳ್ಳುವುದು, ದೇಶದಲ್ಲಿ ಅಶಾಂತಿಯನ್ನು ರೂಪಿಸುವ ಚಟುಕೋಟಿಕೆಗಳಲ್ಲಿ ಭಾಗವಹಿಸುವುದು, ಅದೇ ರೀತಿಯಾಗಿ ಹಿಂದೂ ಮಹಾಸಭಾ, ಹಾಗೂ ಆರ್ ಎಸ್ ಎಸ್ ರಂತಹ ಕೋಮು ಸಂಘಟನೆಗಳು ಸೇರಿ ದೇಶದಲ್ಲಿ ಧರ್ಮ ಧರ್ಮಗಳನ್ನು ನಡುವೆ ದ್ವೇಷ ಹಚ್ಚುವ ಮನಸ್ಥಿತಿಯಲ್ಲಿ ತೊಡಗಿಕೊಂಡಿದ್ದರು, ಇವೆಲ್ಲ ಮನಗೊಂಡ ಪ್ರಧಾನಮಂತ್ರಿಯಾಗಿ ಇಂದಿರಾಗಾಂಧಿಜಿಯವರು ದೇಶದ ನಾಗರಿಕ ಸಂರಕ್ಷಣೆಗಾಗಿ ಪ್ರಜಾಪ್ರಭುತ್ವ ರಕ್ಷಣೆಗಾಗಿ, ದೇಶದಲ್ಲಿ ಶಾಂತಿಯನ್ನು ರೂಪಿಸುವುದಕ್ಕಾಗಿ, ಭಾರತ ದೇಶವನ್ನು ಭದ್ರತೆಯನ್ನ ರೂಪಿಸುವುದಕ್ಕಾಗಿ ಕೋಮುವಾದ ಸಂಘಟನೆಗಳು ಮತ್ತು ಪ್ಯಾಸಿಸ್ಟ್ ಚಟುವಟಿಕೆಗಳನ್ನು ಮಟ್ಟ ಹಾಕಲು ತುರ್ತು ಪರಿಸ್ಥಿತಿಯ ಘೋಷಣೆಯನ್ನು ಜಾರಿ ಮಾಡಿದರು ಎಂದು ಕಾಂಗ್ರಸ್ ಚಿಕ್ಕೊಡಿ ಜಿಲ್ಲಾ ಪರಿಶಿಷ್ಟ ವಿಭಾಗದ ಮಾಧ್ಯಮ ವಕ್ತಾರ ರಾವಸಾಬ ಐಹೊಳೆ ಹೇಳಿದರು.
ಅವರು ಅಥಣಿ ಯಲ್ಲಿ ಮಾತನಾಡಿ ಇದನ್ನು ಅರ್ಥ ಮಾಡಿಕೊಳ್ಳದ ಬಿಜೆಪಿ ನಾಯಕರು ಇಂದು ದೇಶದಲ್ಲಿ ಅಶಾಂತಿಯನ್ನು ರೂಪಿಸುವ ಪ್ರಯತ್ನ, ತುರ್ತು ಪರಿಸ್ಥಿತಿಯ ಘೋಷಣ ಬಗ್ಗೆ ತಪ್ಪು ಮಾಹಿತಿಯನ್ನು ಜನರಲ್ಲಿ ತುಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ, ಇವತ್ತಿಗೂ ಬಿಜೆಪಿ ನಾಯಕರುಗಳು ಎದೆ ತಟ್ಟಿ ಹೇಳು ಕೊಳ್ಳುತ್ತಾರೆ ನಾನು ತುರ್ತು ಪರಿಸ್ಥಿತಿ ಘೋಷಣೆಯಲ್ಲಿ ಭಾಗವಹಿಸಿದ್ದೇನೆ, ಈಶ್ವರಪ್ಪ, ಯಡಿಯೂರಪ್ಪ, ರೇಣುಕಾಚಾರ್ಯ, ಸಿಟಿ ರವಿ, ಆರ್ ಅಶೋಕ್, ಹೀಗೆ ಹಲವಾರು ಹಿರಿಯ ಬಿಜೆಪಿ ನಾಯಕರುಗಳು ತುರ್ತು ಪರಿಸ್ಥಿತಿ ಘೋಷಣೆಯ ಸಂದರ್ಭದಲ್ಲಿ ಆಂದೋಲದಲ್ಲಿ ನಾನು ಭಾಗವಹಿಸಿದ್ದೆ ಎಂದು ನನ್ನನ್ನು ಜೈಲಿಗೆ ಹಾಕಿದ್ದರು ಎಂದು ಘಂಟಾಘೋಷವಾಗಿ ಹೇಳಿಕೊಳ್ಳುತ್ತಾರೆ,. ಅಲ್ಲಿನ ಪರಿಸ್ಥಿತಿಯಲ್ಲಿ ಬಿಜೆಪಿ ನಾಯಕರುಗಳಲ್ಲೂ ಸಹ ಪ್ಯಾಸಿಸ್ಟ್ ಮಾಡಿಸುತ್ತಿಗಳನ್ನ ಕೋಮುವಾದ ಮನಸ್ಥಿತಿಗಳನ್ನು ಹೊಂದಿರುವುದರಿಂದ ಇದನ್ನು ಮಟ್ಟ ಹಾಕಲು ಮಾಜಿ ಪ್ರಧಾನಮಂತ್ರಿಯದ ಇಂದಿರಾ ಗಾಂಧಿಯವರು ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡಿದ್ದರು ಎಂಬುದನ್ನು ಇವತ್ತಿನ ಪ್ರಜೆಗಳು ಅರ್ಥ ಮಾಡಿಕೊಳ್ಳಬೇಕಾಗಿದೆ.
ಇದು ನಿಜವಾದ 2015 ನಿಂದ ಈಚೆಗೆ ನಿಜವಾದ ದೇಶವನ್ನು ನಷ್ಟಪಡಿಸುವ ತುರ್ತುಪರಿಸ್ಥಿತಿಯನ್ನು ಘೋಷಣೆ ಆಗಿರುವುದು ಸಾರ್ವಜನಿಕರ ಬದುಕು ನಾಶವಾಗುತ್ತಿರುವುದು ಮೋದಿ ಸರ್ಕಾರದ ತೀರ್ಮಾನಗಳೆಂದು ಇಂದಿನ ಯುವಕರು ಮತ್ತು ನಾಗರಿಕರು, ಮತದಾರರು ಅರ್ಥಮಾಡಿಕೊಳ್ಳಬೇಕೆಂದು ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ವತಿಯಿಂದ ಮನವಿ ಮಾಡಿಕೊಳ್ಳುತ್ತೇವೆ.
ಎಂದು ಹೇಳಿದರು
ವರದಿ: ಆಕಾಶ ಮಾದರ




