2028ರಲ್ಲಿ ನಾನೇ ಮುಖ್ಯಮಂತ್ರಿ : ಸತೀಶ್ ಜಾರಕಿಹೊಳಿ 

Bharath Vaibhav
2028ರಲ್ಲಿ ನಾನೇ ಮುಖ್ಯಮಂತ್ರಿ : ಸತೀಶ್ ಜಾರಕಿಹೊಳಿ 
satish jarkiholi
WhatsApp Group Join Now
Telegram Group Join Now

ರಾಯಚೂರು : ಮುಂದಿನ 2028 ರಲ್ಲಿ ಬರುವ ವಿಧಾನಸಭೆ ಚುನಾವಣೆಯಲ್ಲಿ ನಾನೇ ಮುಖ್ಯಮಂತ್ರಿ ಅಭ್ಯರ್ಥಿಯೆಂದು ಹೇಳಿದ್ದೇನೆ. ಆದರೆ ಸದ್ಯಕ್ಕೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿದ್ದು ಸಿಎಂ ಬದಲಾವಣೆ ವಿಚಾರ ಸದ್ಯಕ್ಕೆ ಇಲ್ಲ ಎಂದು ಪಿಡಬ್ಲ್ಯೂಡಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ರಾಯಚೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ನಮ್ಮ ಸರ್ಕಾರ ಬಂದ ಬಳಿಕ ಅಭಿವೃದ್ಧಿ ಕೆಲಸಗಳು ನಡೆದಿವೆ. ರಾಜ್ಯದಲ್ಲಿ ಶೇ.60ರಷ್ಟು ಪರ್ಸೆಂಟೇಸ್ ಸರ್ಕಾರ ಎಂದು ಬಿಜೆಪಿಯವರು ಆರೋಪ ಮಾಡುತ್ತಾರೆ. ಬರೀ ಆರೋಪ ಮಾಡುವುದಲ್ಲ. ಅದನ್ನು ಸಾಬೀತು ಮಾಡಬೇಕು. ಸುಮ್ಮನೇ ಹೇಳುವುದು ಆಗುವುದಿಲ್ಲ ಎಂದರು.

ಪತ್ರದಲ್ಲಿ ಪ್ರಿಯಾಂಕ ಖರ್ಗೆ ಆಪ್ತನ ಹೆಸರಿದೆ. ಈಶ್ವರಪ್ಪನದ್ದು ನೇರವಾಗಿ ಪತ್ರದಲ್ಲಿ ಹೆಸರು ಉಲ್ಲೇಖವಾಗಿತ್ತು. ಆಪ್ತರು, ಪಿಎಗಳ ಹೆಸರು ಇದ್ದರೆ ಸಚಿವರು ನೇರವಾಗಿ ಹೊಣೆಗಾರರು ಆಗಲ್ಲ. ತನಿಖೆ ನಡೆಯುತ್ತಿದೆ ನಡೆಯಲಿ ಎಂದರು.

 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!