Ad imageAd image

2028ರಲ್ಲಿ ನಿಖಿಲ್ ಕುಮಾರ್ ಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ : ಟಿ.ಎನ್ ಜವರಾಯಿಗೌಡ ಭವಿಷ್ಯ ನುಡಿದರು

Bharath Vaibhav
2028ರಲ್ಲಿ ನಿಖಿಲ್ ಕುಮಾರ್ ಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ : ಟಿ.ಎನ್ ಜವರಾಯಿಗೌಡ ಭವಿಷ್ಯ ನುಡಿದರು
WhatsApp Group Join Now
Telegram Group Join Now

ಬೆಂಗಳೂರು : ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರ್ ಸ್ವಾಮಿ ಅವರ ನೇತೃತ್ವದಲ್ಲಿ ಜನರೊಂದಿಗೆ ಜನತಾದಳ’ಎಂಬ ವಿನೂತನ ಕಾರ್ಯಕ್ರಮ ಕೈಗೊಂಡಿದ್ದಾರೆ ಅದರ ಜೊತೆಗೆ ಜನರು ಕೈಜೋಡಿಸುತ್ತಿದ್ದಾರೆ. ಜೆಡಿಎಸ್ ಪಕ್ಷ 2028ರಲ್ಲಿ ಅಧಿಕಾರಕ್ಕೆ ಬರುತ್ತದೆ ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಟಿ.ಎನ್ ಜವರಾಯಿಗೌಡ ಭವಿಷ್ಯ ನುಡಿದರು.



ಅವರು ಯಶವಂತಪುರ ವಿಧಾನಸಭಾ ಕ್ಷೇತ್ರದ ದೊಡ್ಡ ಬಿದರಿಕಲ್ಲು ವಾರ್ಡಿನ ಅಂದ್ರಹಳ್ಳಿ ಮುಖ್ಯ ರಸ್ತೆಯಲ್ಲಿರುವ ಎಜಿಎನ್ ಕನ್ವ ನಷನ್ ಹಾಲ್ ನಲ್ಲಿ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಜವರಾಯಿಗೌಡ ನೇತೃತ್ವದಲ್ಲಿ ಜೆಡಿಎಸ್ ಸದಸ್ಯತ್ವ ಅಭಿಯಾನ ಮತ್ತು ಯುವ ನಾಯಕ ನಿಖಿಲ್ ಕುಮಾರ್ ಸ್ವಾಮಿ ಆಗಮನದ ಹಿನ್ನೆಲೆಯಲ್ಲಿ ಜೆಡಿಎಸ್ ಮುಖಂಡರ ಮಹಿಳೆಯರು ಕಾರ್ಯಕರ್ತರ ಪೂರ್ವಭಾವಿ ಸಭೆಯನ್ನು ಜ್ಯೋತಿ ಬೆಳಗಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ 28 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಭದ್ರಕೋಟೆಯಾಗಿರುವ ಯಶವಂತಪುರ ಕ್ಷೇತ್ರದಲ್ಲಿ ನಾಲ್ಕು ಕಡೆ ಜೆಡಿಎಸ್ ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ.

ಸೆಪ್ಟೆಂಬರ್ 07ರಂದು ಜೆಡಿಎಸ್ ಬೃಹತ್ ಸಮಾವೇಶ ನಡೆಯಲಿದೆ ಪಕ್ಷದ ಮುಖಂಡರು ಮಹಿಳೆಯರು ಕಾರ್ಯಕರ್ತರು ಮತ್ತು ಜೆಡಿಎಸ್ ಅಭಿಮಾನಿಗಳು ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿ ಸಮಾವೇಶ ಯಶಸ್ವಿ ಗೊಳಿಸಬೇಕು ಎಂದು ಜವರಾಯಿಗೌಡ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ರಮೇಶ್ ಗೌಡ್ರು ಮಾತನಾಡಿ ಎಂತಹ ಸನ್ನಿವೇಶ ಬಂದರು ಜವರಾಯಿಗೌಡ್ರು ಪಕ್ಷಾಂತರ ಮಾಡಿದೆ ಪಕ್ಷಕ್ಕೆ ಪ್ರಾಮಾಣಿಕತೆ, ವಿಶ್ವಾಸ,ಶ್ರದ್ದೆ ತೋರಿಸಿದ ಎಕೈಕ ವ್ಯಕ್ತಿ ಜವರಾಯಿಗೌಡ್ರು ಅವರಿಗೆ 2028ರಲ್ಲಿ ವಿಧಾನಸಭೆ ಸದಸ್ಯರಾಗಿ ಆಯ್ಕೆ ಮಾಡಲು ಕ್ಷೇತ್ರದ ಜನತೆ ಚುನಾವಣೆ ಬರುವುದೇ ಕಾಯುತ್ತಿದ್ದಾರೆ ಎಂದರು.

ಮಾಜಿ ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ ಮಾತನಾಡಿ ಜೆಡಿಎಸ್ ಸದಸ್ಯತ್ವ ಅಭಿಯಾನದ ಬಗ್ಗೆ ಮಾರ್ಗದರ್ಶನ ನೀಡಿದರು.

ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪ್ರಭಲವಾಗಿ ಮುಖಂಡರಾದವರು ನಾವುಗಳು ಭೂತ್ ಮಟ್ಟದಿಂದ ಪದಾಧಿಕಾರಿಗಳು ನೇಮಕ ಮಾಡಿ ಪಕ್ಷ ಇನ್ನೂ ಬಲಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಒಂದಾಗಿ ಒಗ್ಗಟ್ಟಾಗಿ ಕೆಲಸ ಮಾಡಬೇಕಾಗಿದೆ ಅದಕ್ಕೆಲ್ಲಾ ನಮ್ಮೇಲ್ಲರ ಸಹಕಾರ ಇದ್ದೆ ಇರುತ್ತದೆ ಎಂದು ಮಾಜಿ ಪಾಲಿಕೆ ಸದಸ್ಯ ಹನುಮಂತೇಗೌಡ್ರು ಸಲಹೆ ನೀಡಿದರು.

ಜೆಡಿಎಸ್ ಯುವ ಮುಖಂಡ ಮಂಜಣ್ಣ ಟ್ರಾವೆಲ್ಸ್ ಸರ್ವರಿಗೂ ಸ್ವಾಗತಿಸಿ ಕಾರ್ಯಕ್ರಮ ನಿರೂಪಣೆ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಜವರಾಯಿಗೌಡ ಅವರ ಸುಪುತ್ರ ಸಂತೋಷ್ ಜವರಾಯಿಗೌಡ, ನಾರಾಯಣಪ್ಪ, ಭೈರೇಗೌಡ, ಹೊಸಹಳ್ಳಿ ಚೆಲುವರಾಜು, ಅಜಯ್ ಕುಮಾರ್,ಸತೀಶ್, ಧನಂಜಯ, ಅಂದ್ರಹಳ್ಳಿ ಗೋಪಾಲ್, ನಟರಾಜು, ಚಿಕ್ಕಣ್ಣ, ಜೆಡಿಎಸ್ ಕ್ಷೇತ್ರದ ಮಹಿಳಾ ಅಧ್ಯಕ್ಷೆ ಸಾಕಮ್ಮ,ಶೈಲಾ,ಅರುಣಕುಮಾರಿ, ಜಿಬಿ ಶಾಂತಾ ಸೇರಿದಂತೆ ಜೆಡಿಎಸ್ ಮುಖಂಡರು ಮಹಿಳೆಯರು ಕಾರ್ಯಕರ್ತರು ಅಭಿಮಾನಿಗಳು ಮುಂತಾದವರು ಇದ್ದರು.

ವರದಿ : ಅಯ್ಯಣ್ಣ ಮಾಸ್ಟರ್ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!