ಗೋಕಾಕ: ಒಳ್ಳೆಯ ಸರಕಾರಿ ಆಸ್ಪತ್ರೆ ಕಟ್ಟಿಸಿದ್ದರಿಂದ ಸಾಲು ಸಾಲಾಗಿ ಇದ್ದ ಖಾಸಗಿ ಆಸ್ಪತ್ರೆಗಳು ಮುಚ್ವಿ ಹೊಗಿವೆ ಅದನ್ನೆ ಬಂಡವಾಳವಾಗಿ ಇಟ್ಟುಕೊಂಡು ಪ್ರತಿ ಭಾರಿ ಚುನಾವಣೆ ಬಂದಾಗ ಸಂಭಂದಿ ಎಂದು ಹೇಳಿ ಮತ ಹಾಕಿ ವಿರೋದ ಮಾಡುತ್ತಾರೆಂದು ಗೋಕಾಕ ತಾಲೂಕಿನ ಅಂಕಲಗಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ ಮತ್ತು ಚಿಕ್ಕೋಡಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಗೋಕಾಕ ತಾಲೂಕಿನ ಅಂಕಲಗಿ 30 ಹಾಸಿಗೆಗಳಿಗೆ ಮೇಲ್ದರ್ಜೆಗೆರಿಸಲಾದ ಸಮುದಾಯ ಆರೋಗ್ಯ ಕೇಂದ್ರವನ್ನು ಅಂಕಲಗಿ ಶ್ರೀ ಅಡವಿಸಿದ್ದೇಶ್ವರ ಮಠದ ಶ್ರೀ ಅಮರೇಶ್ವರ ಮಹಾಸ್ವಾಮಿಗಳು ಹಾಗೂ ಶಾಸಕ ರಮೇಶ ಜಾರಕಿಹೋಳಿ ಸಸಿಗೆ ನೀರು ಉಣಿಸಿ ರಿಬ್ಬನ್ ಕಟ್ಟ ಮಾಡುವ ಮೂಲಕ ಉದ್ಘಾಟಿಸಿ ಸತ್ಕಾರ ಸ್ವಿಕರಿಸಿ ಮಾತನಾಡಿದರು.

ಆಸ್ಪತ್ರೆಗಳನ್ನು ಕಟ್ಟಿಸೊದು ಮುಖ್ಯವಲ್ಲ ಅವುಗಳಿಗೆ ಸಿಬ್ಬಂದಿಗಳನ್ನು ಪೊರೈಸುವ ಕೆಲಸ ಮಾಡಬೇಕು.ಅಂದು ನಾಯಿಗಳು ಮಲಗುತಿದ್ದ ಆಸ್ಪತ್ರೆ ಇವತ್ತು ಅದೆ ಆಸ್ಪತ್ರೆ ರಾಜ್ಯದಲ್ಲಿಯೆ ಅತಿ ಹೆಚ್ಚು ಹೆರಿಗೆ ಮಾಡುವ ಆಸ್ಪತ್ರೆಯೆಂದು ಹೆಗ್ಗಳಿಕೆ ಪಡೆದಿದೆ ಎಂದರು.
ಅಂಕಲಗಿಯಲ್ಲಿ ಒಳ್ಳೆಯ ಸುಸಜ್ಜಿತ ಸರಕಾರಿ ಆಸ್ಪತ್ರೆ ಕಟ್ಟಿಸಬೇಕೆಂದು ನಿರ್ಣಯ ಮಾಡಿದ್ದು ಇವತ್ತು ನೇರವೆರಿದೆ.
ಎಲ್ಲರೂ ಕೈ ಜೊಡಿಸಿ ತಮ್ಮ ರಾಜಕೀಯ ವೈಮಸ್ಸನ್ನು ಬದಿಗಿಟ್ಟು ಕೊಟ್ಟಂತಹ ಸರಕಾರಿ ಆಸ್ಪತ್ರೆಯ ಸೌಲಬ್ಯವನ್ನು ಎಲ್ಲರು ಪಡೆದುಕೊಳ್ಳುವಂತೆ ತಿಳಿಸಿ ಸರಕಾರಿ ಆಸ್ಪತ್ರೆಯಲ್ಲಿ ಅವದಿ ಮುಗಿದ ಮಾತ್ರೆಗಳನ್ನು ಯಾವುದೆ ಕಾರಣಕ್ಕೂ ನೀಡಬಾರದೆಂದು ಸೂಚಿಸಿದರು.
ಇನ್ನು ಜಿಲ್ಲಾ ವೈದ್ಯಾದಿಕಾರಿ ಈಶ್ವರ ಗಡದ ಮಾತನಾಡಿ ಬೇರೆ ಜಿಲ್ಲೆ ಹೊಂದಿಸಿನೋಡಿದರೆ ಗೋಕಾಕ ತಾಲೂಕಾವೆ ಒಂದು ಜಿಲ್ಲೆಯಷ್ಟು ದೊಡ್ಡದಿದೆ. ಸಾಕಷ್ಟು ಜನರ ಬೇಡಿಕೆಗಳ ಅಣುಗುನವಾಗಿ ಒಳ್ಳೆಯ ಆರೋಗ್ಯ ಕೆಂದ್ರಗಳಕನ್ನು ಸ್ಥಾಪಿಸಿ ಎಲ್ಲರಿಗೂ ಆರೋಗ್ಯ ನೀಡುವಂತೆ ಮಾಡಿದ್ದಾರೆ.ರಾಜ್ಯದಲ್ಲಿಯೆ 600 ವರೆಗೆ ಹೇರಿಗೆ ಆಗುವ ಎಕೈಕ ಸುಸಜ್ಜಿತ ಆಸ್ಪತ್ರೆಯನ್ನು ಮಾಡಿಸಿದ್ದಕ್ಕಾಗಿ ಶಾಸಕ ರಮೇಶ ಜಾರಕಿಹೋಳಿಯವರಿಗೆ ಅಬಿನಂದನೆ ತಿಳಿಸಿದರು.
ಸ್ಥಳಿಯ ಅಂಕಲಗಿ ಮಠದ ಶ್ರೀಗಳು ಮಾತನಾಡಿ ನಾವೆಲ್ಲ ಹೆಮ್ಮೆ ಪಡುವಂತಹ ಆರೋಗ್ಯ ಕೇಂದ್ರ ಆಗಿದೆ,ಹೆರಿಗೆ ಸಮಯದಲ್ಲಿ ಹಳ್ಳಿಯವರು ನಗರಕ್ಕೆ ಹೊಗುವ ಪರಿಸ್ಥಿತಿ ಇತ್ತು,ಆದರೆ ಈಗ ಯಾರಿಗೂ ತೊಂದರೆ ಆಗಬಾರದೆಂದು ಎಲ್ಲ ಸೌಲಬ್ಯಗಳನ್ನು,ಸಿಬ್ಬಂದಿಗಳ ಇರುವ ಆಸ್ಪತೆ ಅಂಕಲಗಿ ಅನ್ನೊದಕ್ಕೆ ಹೆಮ್ಮೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಅಪರ ವೈದ್ಯಾಧಿಕಾರಿ ಡಾ: ಗಡೆದ, ಗೋಕಾಕ ತಾಲೂಕಾ ವೈದ್ಯಾಧಿಕಾರಿ ಡಾ: ಮುತ್ತಪ್ಪ ಕೊಪ್ಪದ, ಡಾ: ಆ್ಯಂಟಿನ್, ಶಾಸಕರ ಅಪ್ತಸಹಾಯಕ ಬೀಮಗೌಡ್ರ ಬಿ.ಪಾಟೀಲ, ಅಂಕಲಗಿ ಪಿಎಸ್ ಐ ಯಮನಪ್ಪ ಮಾಂಗ ಸೇರದಂತೆ ಅಂಕಲಗಿಯ ಹಿರಿಯರು ಗ್ರಾಮಸ್ಥರು ಮತ್ತು ಆರೋಗ್ಯ ಕೆಂದ್ರದ ಸರ್ವ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವರದಿ: ಮನೋಹರ ಮೇಗೇರಿ




