ಹುಮನಾಬಾದ: ಶಿಕ್ಷಣದ ಜೊತೆಗೆ ಸಂಸ್ಕಾರ ಕೂಡ ಅಷ್ಟೇ ಬಹು ಮುಖ್ಯವಾಗಿದೆ ಎಂದು ಹಳ್ಳಿಖೇಡ ಬಿ ಪೊಲೀಸ್ ಠಾಣೆಯ ಪಿಎಸ್ಐ ವಿಜಯಕುಮಾರ ನಾಯಕ ಅಭಿಪ್ರಾಯ ಪಟ್ಟರು.
ಹುಮನಾಬಾದ ತಾಲ್ಲೂಕಿನ ಹಳ್ಳಿಖೇಡ ಬಿ ಪಟ್ಟಣದ RG ಹಿಬಾರೆ ಮತ್ತು ಹಿಬಾರೆ ಹೈಟೆಕ್ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗ್ರಾಜುಷನ್ ಡೇ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶಿಕ್ಷಣ ಎಲ್ಲಾ ಶಾಲೆಯಲ್ಲಿ ನೀಡುತ್ತಾರೆ.ಪೋಷಕರು ಮನೆಯಲ್ಲಿ ಸಂಬಂಧಗಳ ಬಗ್ಗೆ ತಿಳುವಳಿಕೆ ಮೂಡಿಸಬೇಕು.ಮಕ್ಕಳಿಗೆ ಹೆಚ್ಚಿನ ಸಮಯ ಮೊಬೈಲ್ ನೀಡಬೇಡಿ.RG ಹಿಬಾರೆ ಶಾಲೆ ಉತ್ತಮ ಶಿಕ್ಷಣ ನೀಡುತ್ತಿದೆ ಎಂಬದಕ್ಕೆ ಈ ವಿದ್ಯಾರ್ಥಿಗಳ ಶಿಸ್ತು ನೋಡಿದಾಗ ತಿಳಿದು ಬರುತ್ತಿದೆ ಎಂದು ಹೇಳಿದರು.
ಹಿಬಾರೆ ಶಾಲೆ ಅಧ್ಯಕ್ಷ ನಾಗರಾಜ ಹಿಬಾರೆ ಮಾತಾಡಿ,ಮುದ್ದು ವಿದ್ಯಾರ್ಥಿಗಳಿಗೆ ಇಂದು ಪದವಿ ನೀಡಿ ಮುಂದಿನ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಲಾಗಿದೆ.ಭವಿಷ್ಯದಲ್ಲಿ ಉತ್ತರ ನಾಗರೀಕರಾಗಿ ಹೊರಹೋಮ್ಮಲ್ಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ರುಚಿತಾ ಹಿಬಾರೆ,ಸುಮನ್ ಬೆಹೆಂಜಿ,ಪೃತ್ವಿರಾಜ ಹಿಬಾರೆ,ಅಂಬುಬಾಯಿ ಹಿಬಾರೆ,ಎಂಡಿ ಮಕ್ಸುದ್,ವೈಜೀನಾಥ ನಾಟಿಕರ್, ಶರಣಪ್ಪ ಪೊಲೀಸ್ ಸೇರಿ ಅನೇಕರು ಇದ್ದರು.