Ad imageAd image

ವಿಭಜನೆಯಾದ್ರೆ ಹೊಸ ಜಿಲ್ಲೆಯ ಹೆಸರು ಕಿತ್ತೂರು ಜಿಲ್ಲೆ ಅಂತಾ ಘೋಷಣೆ ಆಗುತ್ತಂತೆ..

Bharath Vaibhav
ವಿಭಜನೆಯಾದ್ರೆ ಹೊಸ ಜಿಲ್ಲೆಯ ಹೆಸರು ಕಿತ್ತೂರು ಜಿಲ್ಲೆ ಅಂತಾ ಘೋಷಣೆ ಆಗುತ್ತಂತೆ..
WhatsApp Group Join Now
Telegram Group Join Now

ಕಿತ್ತೂರು:-ರಾಣಿ ಚನ್ನಮ್ಮನವರ 200 ನೇ ವಿಜಯೋತ್ಸವ ಅದ್ದೂರಿಯಾಗಿ ಹಾಗೂ ಯಶಸ್ವಿಯಾಗಿ ಮುಕ್ತಾಯವಾಗಿದ್ದು, ರಾಣಿ ಚನ್ನಮ್ಮನವರ 200 ನೇ ವಿಜಯೋತ್ಸವದ ಸವಿನೆನಪಿಗಾಗಿ ಬೆಳಗಾವಿ ಜಿಲ್ಲೆ ವಿಭಜನೆಯಾಗಿ ಹೊಸ ಜಿಲ್ಲಾ ಕೇಂದ್ರ ಘೋಷಣೆ ಆಗುವುದಾದ್ರೆ ಅದಕ್ಕೆ ಕಿತ್ತೂರು ಜಿಲ್ಲೆ ಎಂದು ಹೆಸರಿಡಬೇಕು ಎಂಬ ಕೂಗನ್ನು ಪತ್ರಕರ್ತ ಹಾಗೂ ಹೋರಾಟಗಾರ ಬಸವರಾಜು ರವರು ಕರ್ನಾಟಕ ರೈತ ಸಂಘಗಳ ಜೊತೆಗೂಡಿ ಆಗ್ರಹ ಮಾಡಿದ್ದಾರೆ.

ಬೆಳಗಾವಿ ಜಿಲ್ಲೆಯ ವಿಭಜನೆಯ ಕೂಗು ತುಂಬಾನೇ ಜೋರಾಗಿದ್ದು, ಬೆಳಗಾವಿ ಗ್ರಾಮೀಣ, ಖಾನಾಪುರ, ಕಿತ್ತೂರು ಹಾಗೂ ಬೈಲಹೊಂಗಲ,ಸವದತ್ತಿ ತಾಲ್ಲೂಕುಗಳನ್ನು ಒಳಗೊಂಡ ಪ್ರದೇಶವಾರು ತಾಲ್ಲೂಕುಗಳನ್ನು ಸೇರಿಸಿ ಕಿತ್ತೂರು ಜಿಲ್ಲೆ ಎಂಬ ಹೆಸರನ್ನು ನಾಮಕರಣ ಮಾಡಬೇಕು ಎಂದು ಮಾಡಬೇಕು ಎಂಬ ಹೊಸ ಕೂಗು ಎದ್ದಿದೆ. ಅಷ್ಟಕ್ಕೂ ಕಿತ್ತೂರು ಸಂಸ್ಥಾನವು ಈ ಹಿಂದೆ ಈ ತಾಲ್ಲೂಕುಗಳಲ್ಲಿ ಹೆಚ್ಚು ವಿಸ್ತರಿಸಿ, ವೀರರಾಣಿ ಚನ್ನಮ್ಮನರ ಆಡಳಿತದಲ್ಲಿ ಈ ತಾಲ್ಲೂಕುಗಳ ವೀರರು ಹಾಗೂ ಪ್ರಮುಖರು ಸಂಬಂಧಿಕರು ಇಲ್ಲಿ ಇದ್ದರು ಎಂಬುದಕ್ಕೆ ಇತಿಹಾಸದ ಸ್ಮಾರಕಗಳು ಹೇಳುತ್ತವೆ ಆದ್ದರಿಂದ ಹೊಸ ಜಿಲ್ಲೆಯ ಕಿತ್ತೂರು ಜಿಲ್ಲೆ ಎಂದು ನಾಮಕರಣ ಮಾಡಬೇಕು ಎಂದು ಆಗ್ರಹ ಮಾಡಿದ್ದಾರೆ.

ಇನ್ನೊಂದು ಕಡೆ ಕಿತ್ತೂರು ತಾಲ್ಲೂಕು ಘೋಷಣೆಯಾಗಿ 10 ವರ್ಷಗಳು ಕಳೆದರೂ ಸಹ ಇಲ್ಲಿಯವರೆಗೂ ಪೂರ್ಣ ಪ್ರಮಾಣದ ಸರ್ಕಾರಿ ತಾಲ್ಲೂಕು ಕೇಂದ್ರಗಳು ಮರೀಚಿಕೆ ಯಾಗಿ ಉಳಿದಿವೆ. ಆದ್ದರಿಂದ ಪತ್ರಕರ್ತ ಹಾಗೂ ಹಾಗೂ ಹೋರಾಟಗಾರ ಬಸವರಾಜು ರವರು ಈ ಬಗ್ಗೆ ವಿಶೇಷ ವರದಿ ತಯಾರಿಸಿ ಮುಖ್ಯಮಂತ್ರಿಗಳು ಆದ ಸಿದ್ದರಾಮಯ್ಯ, ಪೂಜ್ಯ ಶ್ರೀ ಗಳು, ಜಿಲ್ಲಾ ಉಸ್ತುವಾರಿ ಸತೀಶ್ ಜಾರಕಿಹೊಳಿ ಅವರ ಗಮನಕ್ಕೆ ತೆಗೆದುಕೊಂಡು ಬಂದು, ಮನವಿ ಸಲ್ಲಿಸಿ ಈ ಬಗ್ಗೆ ಪ್ರಶ್ನೆ ಕೇಳಿ ವರದಿ ತಯಾರಿಸಿ ಹೋರಾಟಗಾರರ ಜೊತೆ ಚರ್ಚೆ ಮಾಡಿ ಸಾಂಕೇತಿಕ ಹೋರಾಟ ಮಾಡಿ ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ. ಇನ್ನಾದ್ರೂ ಕಿತ್ತೂರು ತಾಲ್ಲೂಕು ಪೂರ್ಣ ಪ್ರಮಾಣದ ಕಚೇರಿಗಳು ಬಂದು ಹೊಸ ಜಿಲ್ಲೆಗೆ ಕಿತ್ತೂರು ಎಂದು ನಾಮಕರಣವಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

 ವರದಿ:-  ಬಸವರಾಜು. 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!