Ad imageAd image

ಚಂದ್ರ ಬಂಡಾ ರೈತ ಸಂಪರ್ಕ ಕೇಂದ್ರದಲ್ಲಿ ಫಲಾನುಭವಿಗಳು ಅರ್ಜಿ.ಸಲ್ಲಿಸದೆ ಸ್ಪಿಂಕ್ಲರ್ ಪೈಪ್ ಮಾಯ

Bharath Vaibhav
ಚಂದ್ರ ಬಂಡಾ ರೈತ ಸಂಪರ್ಕ ಕೇಂದ್ರದಲ್ಲಿ ಫಲಾನುಭವಿಗಳು ಅರ್ಜಿ.ಸಲ್ಲಿಸದೆ ಸ್ಪಿಂಕ್ಲರ್ ಪೈಪ್ ಮಾಯ
WhatsApp Group Join Now
Telegram Group Join Now

ರಾಯಚೂರು :-ಚಂದ್ರಬಂಡ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಚಂದ್ರಬಂಡ ರೈತ ಸಂಪರ್ಕ ಕೇಂದ್ರದಲ್ಲಿ ಫಲಾನುಭವಿ ಜಂಗ್ಲಿ ಪೀರಾಸಾಬ್ ತಂದೆ ಬಡೇಸಾಬ್ ಸ್ಪಿಂಕ್ಲರ್ ಪೈಪ್ ಗಾಗಿ ಅರ್ಜಿಯನ್ನು ಸಲ್ಲಿಸಲು ರೈತ ಸಂಪರ್ಕ ಕೇಂದ್ರಕ್ಕೆ ರೈತನು ಹೋದಾಗ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಅರ್ಜಿಯನ್ನು ನೀಡುದಾಗ ಈಗಾಗಲೇ ನಿನ್ನ ಹೆಸರಿನ ಈ ಎಫ್ ಐ ಡಿ ನಂಬರ್ 0603000017099 ಈ ನಂಬರ್ ಮೇಲೆ  ಸ್ಪೀo ಕ್ಲಾರ್ ಪೈಪ್ ತೆಗೆದುಕೊಂಡಿರುತ್ತಾರೆ ಹಾಗಾಗಿ ನಿನಗೆ ಕೊಡಲು ಬರುವುದಿಲ್ಲ ನೀನು ಇನ್ನೂ ಒಂದು ವರ್ಷ
ತಡೆದರೆ ಮಾತ್ರ ನಿನಗೆ ಅರ್ಜಿ ಹಾಕಲು ಬರುತ್ತದೆ ಎಂದು ಚಂದ್ರ ಬಂಡ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ತಿಳಿಸುತ್ತಾರೆ.

ಫಲಾನುಭವಿ ಜಂಗ್ಲಿ ಪಿರಸಾಬ್ ಅರ್ಜಿಯನ್ನು ಸಲ್ಲಿಸದೆ ಆತನ ಹೆಸರಿನ ಮೇಲೆ ನಕಲಿ ದಾಖಲಾತಿಗಳನ್ನು ತೆಗೆದುಕೊಂಡು ಬೇರೆ ಯಾರಿಗೂ ಮರಾಟ ಮಾಡಿರುವ ಘಟನೆ ಚಂದ್ರಬಂಡ ರೈತ ಸಂಪರ್ಕ ಕೇಂದ್ರದಲ್ಲಿ ನಡೆದಿದೆ ಜಂಗ್ಲಿ ಪೀರಸಾಬ್ ತಂದೆ ಬಡೇಸಾಬ್ ಎನ್ನುವ ರೈತ ಫಲಾನುಭವಿಯು ನಾನು ಯಾವುದೇ ಸ್ಪಿಂಕ್ಲರ್ ತೆಗೆದುಕೊಂಡಿಲ್ಲ ನಾಲ್ಕು ವರ್ಷದ ಹಿಂದೆ ನನ್ನ ಹೆಸರಿನ ಮೇಲೆ ಯಾರು ತೆಗೆದುಕೊಂಡಿದ್ದಾರೆ

ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಈಗಾಗಲೇ ಸಾಹಯಕ ಕೃಷಿ ನಿರ್ದೇಶಕ ರವರಿಗೆ ಅರ್ಜಿಯನ್ನು ಸಲ್ಲಿಸಿದರು ಇದುವರೆಗೆ ಯಾವುದೇ ಕ್ರಮ ಕೈಗೊಂಡಲ್ಲವೆಂದು ರೈತ ಸಂಘ ಜಿಲ್ಲಾಧ್ಯಕ್ಷ ನರಸಿಂಹ ನಾಯಕ್. ಮಲ್ಲನಗೌಡ. ಜಂಗ್ಲಿ ಪೀರಸಾಬ್. ಮಾಧ್ಯಮದ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು ಈಗಲಾದರೂ ಸಂಬಂಧಪಟ್ಟ ಸಹಾಯಕ ಕೃಷಿ ನಿರ್ದೇಶಕ ಮತ್ತು ಜಂಟಿ ನಿರ್ದೇಶಕರು ಜುಂಗ್ಲೀಪಿರಸಾಬ್ ಎಂಬ ಫಲಾನು ಬಾವಿಗೆ ಅನ್ಯಾಯವಾಗಿರುವುದನ್ನು ನೋಡಿ ವಂಚನೆ ಮಾಡಿರುವವರನ್ನು ಕಂಡುಹಿಡಿದು ವಂಚನೆ ಮಾಡಿರುವ ಅಧಿಕಾರಿಯಾಗಲಿ ಮತ್ತು ಫಲಾನುಭವಿಯಾಗಲಿ ಅಂತಹವರ ಮೇಲೆ ಯಾರು ಸ್ಪಿಂಕ್ಲರ್ ಪೈಪ್ ಅನ್ನು ತೆಗೆದುಕೊಂಡಿರುತ್ತಾರೋ ಅಂತವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ನ್ಯಾಯ ಒದಗಿಸಿ ಕೊಡುತ್ತಾರೋ ಇಲ್ಲವೋ ಅನ್ನುವುದನ್ನು ಕಾದು ನೋಡಬೇಕಾಗಿದೆ

ವರದಿ:- ಗಾರಲದಿನ್ನಿ ವೀರನಗೌಡ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!